ಟೇಸ್ಟಿ ಫ್ರೈಡ್ ಚಿಕನ್
ಪದಾರ್ಥಗಳು
ಮೈದಾ ಹಿಟ್ಟು 4 ಕಪ್
2 ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್
2 ಟೀ ಸ್ಪೂನ್ ಪೆಪ್ಪರ್ ಪೌಡರ್
ಉಪ್ಪು
2 ಮೊಟ್ಟೆ
ಬ್ರೆಡ್ ಕ್ರಂಬ್ಸ್
ಎಣ್ಣೆ
ಬೋನ್ ಲೆಸ್ / ನಾರ್ಮಲ್ ಚಿಕಸ್ ಪೀಸ್ – 1 /1.30 KG
ಖಾರದ ಪುಡಿ
1-1/2 ಕಪ್ ನೀರು
ಚಿಕನ್ ಮಸಾಲೆ ಪೌಡರ್ – ನಿಮ್ಮ ಇಷ್ಟದ್ದು
ಮಾಡುವ ವಿಧಾನ
ಒಂದು ದೊಡ್ಡ ಪಾತ್ರೆಯಲ್ಲಿ
ಅರ್ಧ ಮೈದಾ ಹಿಟ್ಟು , ಶುಂಠಿ ಬೆಳ್ಳುಳ್ಳಿ ಪೇಸ್ಟ್ , ಉಪ್ಪು, ಕೆಂಪುಮೆಣಸು ಪುಡಿ, 1/2 ಟೀಚಮಚ ಮೆಣಸು ಪುಡಿ , ಚಿಕನ್ ಮಸಾಲೆ ಪುಡಿ ಸೇರಿಸಿ ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಮತ್ತೊಂದು ದೊಡ್ಡ ಪಾತ್ರಯಲ್ಲಿ ಮೊಟ್ಟೆಗಳನ್ನು ಒಡೆದು ಬೀಟ್ ಮಾಡಿ ಅದಕ್ಕೆ 1-1/2 ಕಪ್ ನೀರನ್ನು ಸೇರಿಸಿ.. 1 ಟೀಚಮಚ ಉಪ್ಪು ಮತ್ತು ಉಳಿದ ಮೈದಾ ಹಿಟ್ಟು ಮತ್ತು 1/2 ಟೀಚಮಚ ಮೆಣಸು ಪುಡಿ ಸೇರಿಸಿ. ಮೊಟ್ಟೆಯ ಮಿಶ್ರಣದಲ್ಲಿ ಚಿಕನ್ ಅನ್ನು ಅದ್ದಿ, ನಂತರ ಮೊದಲು ತಯಾರಿಸಿಟ್ಟುಕೊಂಡಿದ್ದ ಹಿಟ್ಟಿನ ಮಿಶ್ರಣದಲ್ಲಿ ಮಿಕ್ಸ್ ಮಾಡಿಟ್ಟುಕೊಳ್ಳಿ./. ಹೀಗೆ ಎಲ್ಲಾ ಪೀಸ್ ಗಳನ್ನ ರೆಡಿ ಮಾಡಿಟ್ಟುಕೊಳ್ಳಿ.. ನಂತರ ಮತ್ತೆ ಪೀಸ್ ಗಳನ್ನ ಮೊಟ್ಟೆಯ ಮಿಶ್ರಣದಲ್ಲಿ ಅದ್ದಿ ಆ ನಂತರ ಬ್ರೆಡ್ ಕ್ರಂಬ್ಸ್ ( ಬ್ರೆಡ್ ನ ಚೂರುಗಳು ) ನಲ್ಲಿ ಅದ್ದಿಟ್ಟುಕೊಳ್ಳಿ..
ಇತ್ತ ಚಿಕನ್ ಮುಳುವಷ್ಟು ಎಣ್ಣೆಯನ್ನ ಕಾಯಿಸಿಕೊಳ್ಳಿ. ಎಣ್ಣೆ ಕಾಯ್ದ ನಂತರ ಚಿಕನ್ ಪೀಸ್ ಗಳನ್ನ ಎಣ್ಣೆಗೆ ಹಾಕಿ ಕರಿಯಿರಿ.. ತಿಳಿ ಕಂದುಬಣ್ಣ ಬರುವವರೆಗೂ ಮೀಡಿಯಮ್ ಫ್ಲೇಮ್ ನಲ್ಲಿ ಡೀಪ್ ಫ್ರೈ ಮಾಡಿ.. ಸುಮಾರು 7-8 ನಿಮಿಷಗಳು ಒಂದು ಬ್ಯಾಚ್ ಚಿಕನ್ ಪೀಸ್ ಗಳನ್ನ ಫ್ರೈ ಮಾಡಲು ಬಿಡಬೇಕಾಗುತ್ತದೆ.. ಆ ನಂತರ ರುಚಿಕರ ಮತ್ತು ಮನೆಯಲ್ಲೇತಯಾರಿಸಿದ ಹೈಜೀನ ಫ್ರೈಡ್ ಚಿಕನ್ ಅನ್ನ ನಿಮ್ಮದೇ ಶೈಲಿಯಲ್ಲಿ ಅಂದ್ರೆ ದೇಸಿ ಸ್ಟೈಲ್ ನಲ್ಲಿ ಪುದೀನ ಚೆಟ್ನಿಯ ಜೊತೆಗೆ ಅಥವ ಟೊಮ್ಯಾಟೋ ಕೆಚಪ್ , ಅಥವ ಇನ್ನಿತರೇ ನಿಮ್ಮಿಷ್ಟದ ಡಿಪ್ ಗಳ ಜೊತೆಗೆ ಸವಿಯಬಹುದು..
ಎಗ್ ಸುಕ್ಕಾ ( ರೆಸ್ಟೋರೆಂಟ್ ಸ್ಟೈಲ್) Saakshatv cooking recipes Egg sukka
ಬೇಕಾಗುವ ಸಾಮಾಗ್ರಿಗಳು
ಮೊಟ್ಟೆ – 4
ಸಣ್ಣಗೆ ಕತ್ತರಿಸಿದ ಈರುಳ್ಳಿ – 1
ಹಸಿ ಮೆಣಸಿನ ಕಾಯಿ – 2
ಜೀರಿಗೆ – 1 ಚಮಚ
ತುರಿದ ತೆಂಗಿನಕಾಯಿ – 1/2 ಕಪ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1ಚಮಚ
ಮೆಣಸಿನ ಪುಡಿ – 1 ಚಮಚ
ಧನಿಯಾ ಪುಡಿ – 1 ಚಮಚ
ಹುಣಸೆ ರಸ ಅಗತ್ಯವಿರುವಷ್ಟು
ರುಚಿಗೆ ತಕ್ಕಷ್ಟು ಉಪ್ಪು
ಕರಿಬೇವಿನ ಸೊಪ್ಪು ಸ್ವಲ್ಪ
ಎಣ್ಣೆ- 3 ಚಮಚ
Saakshatv cooking recipes Egg sukka
ಮಾಡುವ ವಿಧಾನ :
ಮೊದಲು ಮೊಟ್ಟೆಗಳನ್ನು ಬೇಯಿಸಿ ಎರಡು ತುಂಡುಗಳಾಗಿ ಕತ್ತರಿಸಿ. ಈಗ ಕಡಾಯಿ ಬಿಸಿ ಮಾಡಿ ತುರಿದ ತೆಂಗಿನಕಾಯಿಯನ್ನು ಹುರಿದು ಪಕ್ಕಕ್ಕೆ ಇರಿಸಿ. ನಂತರ ಕಡಾಯಿಗೆ ಒಂದು ಚಮಚ ಎಣ್ಣೆ ಹಾಕಿ ಬಿಸಿ ಮಾಡಿ ಈರುಳ್ಳಿ ತುಂಡುಗಳನ್ನು ಹುರಿದು ಇಟ್ಟುಕೊಳ್ಳಿ. ಈಗ ಕಡಾಯಿಗೆ ಎರಡು ಚಮಚ ಎಣ್ಣೆ ಸೇರಿಸಿ, ಜೀರಿಗೆ ಹುರಿಯಿರಿ. ಇದಕ್ಕೆ ಕತ್ತರಿಸಿದ ಹಸಿ ಮೆಣಸಿನ ಕಾಯಿ ಸೇರಿಸಿ ಹುರಿಯಿರಿ.
ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ. ನಂತರ ಮೆಣಸಿನ ಪುಡಿ, ಧನಿಯಾ ಪುಡಿ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಸರಿಯಾಗಿ ಬೆರೆಸಿ. ಹುಣಸೆ ರಸ ಸೇರಿಸಿ ಮಿಶ್ರ ಮಾಡಿ. ಇದಕ್ಕೆ ಹುರಿದ ಈರುಳ್ಳಿ ಮತ್ತು ಹುರಿದ ತೆಂಗಿನಕಾಯಿ ಮಿಶ್ರಣವನ್ನು ಸೇರಿಸಿ ಕಲಸಿ. ಬಳಿಕ ಕತ್ತರಿಸಿದ ಬೇಯಿಸಿದ ಮೊಟ್ಟೆಗಳನ್ನು ಸೇರಿಸಿ ಮಿಶ್ರಣವನ್ನು ಸರಿಯಾಗಿ ಬೆರೆಸಿ. ಈಗ ಬಿಸಿ ಬಿಸಿಯಾದ ರುಚಿಕರವಾದ ಎಗ್ ಸುಕ್ಕಾ ಸವಿಯಲು ರೆಡಿಯಾಗಿದೆ.
15 ನಿಮಿಷದಲ್ಲಿ ತಯಾರಿಸಿ ಮೊಟ್ಟೆ ಪಲ್ಯ
ಬೇಕಾಗುವ ಸಾಮಗ್ರಿಗಳು
ಬೇಯಿಸಿದ ಮೊಟ್ಟೆಗಳು 4
ಕ್ಯಾಪ್ಸಿಕಂ 1
ಟೊಮೆಟೊ 1
ಎಣ್ಣೆ 4 ಟೀಸ್ಪೂನ್
ಅರಿಶಿನ ಪುಡಿ 1/2 ಟೀಸ್ಪೂನ್
ಜೀರಿಗೆ ಪುಡಿ 1 ಟೀಸ್ಪೂನ್
ಉಪ್ಪು 1 ಟೀಸ್ಪೂನ್
ಕೆಂಪು ಮೆಣಸಿನ ಪುಡಿ 1 ಟೀಸ್ಪೂನ್
ಎಗ್ ಮಸಾಲ ಪುಡಿ 1 ಟೀಸ್ಪೂನ್
ಕೊತ್ತಂಬರಿ ಸೊಪ್ಪು ಸ್ವಲ್ಪ
ಮಾಡುವ ವಿಧಾನ
ಮೊದಲಿಗೆ ಬಾಣಲೆ ಬಿಸಿ ಮಾಡಿ ಅದಕ್ಕೆ ಎಣ್ಣೆ ಸೇರಿಸಿ. ಅದು ಬಿಸಿಯಾದ ನಂತರ ಕತ್ತರಿಸಿದ ಕ್ಯಾಪ್ಸಿಕಂ ಮತ್ತು ಟೊಮ್ಯಾಟೊ, ಅರಿಶಿನ ಪುಡಿ, ಜೀರಿಗೆ ಪುಡಿ ಮತ್ತು ಉಪ್ಪು ಸೇರಿಸಿ ಮತ್ತು ಅದನ್ನು ಸರಿಯಾಗಿ ಬೆರೆಸಿ.
ಕಸೂರಿ ಮೇಥಿ ಇದ್ದರೆ ಅದನ್ನು ಸೇರಿಸಿ.
ಈಗ ಎಲ್ಲಾ 4 ಮೊಟ್ಟೆಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ನಿಧಾನವಾಗಿ ಬಾಣಲೆಗೆ ಸೇರಿಸಿ. ಈಗ ಅದಕ್ಕೆ ಎಗ್ ಮಸಾಲ ಪುಡಿಯನ್ನು ಸೇರಿಸಿ ಮತ್ತು ಸ್ವಲ್ಪ ಸಮಯದವರೆಗೆ ನಿಧಾನವಾಗಿ ಕಲಸಿ. ಮೊಟ್ಟೆಯ ಪ್ರತಿಯೊಂದು ಭಾಗದಲ್ಲೂ ಮಸಾಲೆ ಬೆರೆಯುವಂತೆ ಮಿಶ್ರ ಮಾಡಿ.
ಈಗ ಅಂತಿಮವಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ. ರುಚಿಯಾದ ಮೊಟ್ಟೆ ಪಲ್ಯ ಸವಿಯಲು ರೆಡಿ.
ಈ ಖಾದ್ಯವನ್ನು ನೀವು ಅನ್ನ ಮತ್ತು ಚಪಾತಿಯೊಂದಿಗೆ ಸೇವಿಸಬಹುದು.
ಸುಲಭವಾಗಿ ತಯಾರಿಸಿ ಕೇರಳ ಸ್ಟೈಲ್ ಚಿಕನ್ ಫ್ರೈ
ಬೇಕಾಗುವ ಸಾಮಾಗ್ರಿಗಳು
ಚಿಕನ್ – 1/2 kg
ಜೀರಿಗೆ ಪುಡಿ 2 ಟೀಸ್ಪೂನ್
ಕೆಂಪು ಮೆಣಸು – 5 ರಿಂದ 6
ಬೆಳ್ಳುಳ್ಳಿ 5 ರಿಂದ 6 ಎಸಳುಗಳು
ಕರಿಬೇವು – ಸ್ವಲ್ಪ
ರುಚಿಗೆ ತಕ್ಕಷ್ಟು ಉಪ್ಪು
ಹುರಿಯಲು ತೆಂಗಿನ ಎಣ್ಣೆ
ಮಾಡುವ ವಿಧಾನ
ಮೊದಲಿಗೆ ಕೆಂಪು ಮೆಣಸನ್ನು ನೀರಿನಲ್ಲಿ ನೆನೆಸಿ. ನಂತರ ಕೆಂಪು ಮೆಣಸನ್ನು ನೀರಿನಿಂದ ತೆಗೆದು ಜೀರಿಗೆ ಪುಡಿ, ಬೆಳ್ಳುಳ್ಳಿ ಉಪ್ಪು ಮತ್ತು ಕರಿಬೇವಿನ ಸೊಪ್ಪು ಸೇರಿಸಿ ಚೆನ್ನಾಗಿ ರುಬ್ಬಿ ಪೇಸ್ಟ್ ಮಾಡಿ.
ಚಿಕ್ಕದಾಗಿ ಕತ್ತರಿಸಿದ ಚಿಕನ್ ತುಂಡುಗಳನ್ನು ಈ ಪೇಸ್ಟ್ ನಲ್ಲಿ ನೆನೆಸಿ ಮತ್ತು ಅದನ್ನು ಒಂದು ಗಂಟೆ ನೆನೆಸಿಡಿ.
ನಂತರ ಕಡಾಯಿಯಲ್ಲಿ ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ. ಮಸಾಲೆಯೊಂದಿಗೆ ಚೆನ್ನಾಗಿ ಬೆರೆತ ಕೋಳಿ ಮಾಂಸವನ್ನು ಎಣ್ಣೆಯಲ್ಲಿ ಬಿಡಿ. ಅದನ್ನು ಎಣ್ಣೆಯಲ್ಲಿ 10 ನಿಮಿಷಗಳ ಕಾಲ ಹೊಂಬಣ್ಣಕ್ಕೆ ತಿರುಗುವವರೆಗೆ ಫ್ರೈ ಮಾಡಿ ತೆಗೆಯಿರಿ.
ಈಗ ರುಚಿಯಾದ ಕೇರಳ ಚಿಕನ್ ಫ್ರೈ ಸವಿಯಲು ರೆಡಿಯಾಗಿದೆ.
ನೀವು ಅದನ್ನು ತೆಂಗಿನ ಎಣ್ಣೆಯಲ್ಲಿ ಹುರಿಯುವಾಗ ಇದಕ್ಕೆ ಸ್ವಲ್ಪ ಕರಿಬೇವಿನ ಎಲೆಗಳನ್ನು ಸೇರಿಸಿ. ರೆಡಿಮೇಡ್ ಚಿಕನ್ ಫ್ರೈ ಮಸಾಲಾಗೆ ಹೋಲಿಸಿದರೆ ಇದು ತುಂಬಾ ರುಚಿಕರವಾಗಿರುತ್ತದೆ. ಕೋಳಿ ಮಾಂಸವು ಕಡಿಮೆ ಕೊಬ್ಬಿನ ಪ್ರೋಟೀನ್‌ಗಳನ್ನು ಹೊಂದಿರುತ್ತದೆ. ಸ್ನಾಯುಗಳ ಬೆಳವಣಿಗೆಗೆ ಈ ಪ್ರೋಟೀನ್‌ಗಳು ಅತ್ಯಗತ್ಯ.