Chickoo Smoothie : ತುಂಬಾ ಸಿಂಪಲ್ ಆಗಿ ಮಾಡಿ 3 ಪದಾರ್ಥಗಳಿಂದ ಆರೋಗ್ಯಕರ ಡಯೇಟ್ ಸಪೋಟಾ ಸ್ಮೂತಿ
ಸಪೋಟಾ ಹಣ್ಣು ಆರೋಗ್ಯಕ್ಕೆ ಉತ್ತಮ..
ತೂಕ ನಷ್ಟ ಮಾಡಿಕೊಳ್ಳಬೇಕೆಂದುಕೊಂಡವರಿಗೆ ಸುಗರ್ ಲೆಸ್ ಸ್ಮೂಥಿ ಉತ್ತಮ ಆಯ್ಕೆ.. ಬೆಳಿಗ್ಗೆ ನಾಷ್ಟಕ್ಕೆ ಯಾವುದಾದರೂ ಹಣ್ಣಿನ ಸ್ಮೂತಿ ಸೀವೆಸಿದರೆ , ಆರೋಗ್ಯದ ಜೊತೆಗೆ ಡಯೇಟ್ ಗೂ ತೊಂದರೆಯಿಲ್ಲ..
ಮಾಡುವ ವಿಧಾನ..
ಗಟ್ಟಿ ಹಾಲು ಕುದಿಸಿ ಆರಿಸಿಟ್ಟಿರುವುದು..
ಫ್ರಿಡ್ಜ್ ನಲ್ಲಿಟ್ಟ ತಂಪು ಹಾಲು ಉತ್ತಮ ಆಯ್ಕೆ
3/4 ಮುಕ್ಕಾಲು ಕಪ್ ಗಟ್ಟಿ ಹಾಲು ಜ್ಯೂಸರ್ ಗೆ ಹಾಕಿ
2 ಮಧ್ಯಮ ಗಾತ್ರದ ಸಪೋಟಾ ಹಣ್ಣು ( ಸಿಪ್ಪಿ ತೆಗೆದು ಬೀಜ ತೆಗೆದು ಜಾರಿಗೆ ಹಾಕಿ)
ಈಗ ಬೇಕಿದ್ದಲ್ಲಿ ನಿಮ್ಮಷ್ಟದ ಡ್ರೈಪ್ರೂಟ್ಸ್ ಸೇರಿಸಿ ಗಟ್ಟಿ ಹದಕ್ಕೆ…
ನೀರಿಲ್ಲದೇ ನುಣ್ಣಗೆ ರುಬ್ಬಿ
ಒಂದು ಲೋಟದಲ್ಲಿ 5 ನಿಮಿಷ ಮೊದಲೇ ನೆನೆಸಿಟ್ಟ ತಂಪಿನ ಬೀಜ / ಕಾಮ ಕಸ್ತೂರಿ ಬೀಜ ಹಾಕಿ
ಅದೇ ಲೋಟಕ್ಕೆ ಜ್ಯೂಸ್ ಹಾಕಿ ಸೇವಿಸಿ…
Chickoo Smoothie for diet , without sugar , simple method