ವಿವಾದಿತ ಆದೇಶ ಹೊರಡಿಸಿದ ಮುಖ್ಯಮಂತ್ರಿ ಯಡಿಯೂರಪ್ಪ Yeddyurappa
ಬೆಂಗಳೂರು : ವಿಧಾನ ಸೌಧದ ಕಾರಿಡಾರ್ ನಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿವಾದಿತ ಆದೇಶ ಹೊರಡಿಸಿದ್ದಾರೆ.
ಕೆಂಗಲ್ ಹಾಗೂ ಅಧಿಕೃಯ ಸಚಿವರ ಕಚೇರಿ ಹೊರತುಪಡಿಸಿ ವಿಧಾನ ಸೌಧದ ಕಾರಿಡಾರ್ ನಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿ ಸರ್ಕಾರ ಆದೇಶ ಹೊರಡಿಸಿದೆ.
ಈ ಹಿಂದೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮಾಧ್ಯಮಗಳನ್ನು ವಿಧಾನ ಸೌಧಕ್ಕೆ ಮೊದಲ ಮಹಡಿಗೆ ಸೀಮಿತಗೊಳಿಸುವ ಯತ್ನ ನಡೆಸಿ ಅಧಿಕಾರ ಕಳೆದುಕೊಂಡರು.
ಈಗ ಬಿಜೆಪಿ ಸರ್ಕಾರ ಅಂತಹುದೆ ಆದೇಶ ಮಾಡುವ ಮೂಲಕ ವಿವಾದ ಮೈ ಮೇಲೆ ಎಳೆದುಕೊಂಡಿದೆ.