ಬೆಳಗಾವಿ ಅಧಿವೇಶನ – ಕಾಂಗ್ರೇಸ್ ಶಾಸಕರಿಗೆ ವಿಪ್ ಜಾರಿ…
ಬೆಳಗಾವಿಯ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಸದನದಲ್ಲಿ ಕಡ್ಡಾಯವಾಗಿ ಭಾಗವಹಿಸುವಂತೆ ಕಾಂಗ್ರೇಸ್ ಸದಸ್ಯರಿಗೆ ವಿರೋಧ ಪಕ್ಷದ ಮುಖ್ಯ ಸಚೇತಕ ಅಜಯ್ ಸಿಂಗ್ ಅವರು ವಿಪ್ ಜಾರಿ ಮಾಡಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಕಾಂಗ್ರೆಸ್ ಪಕ್ಷ ಶಾಸಕರಿಗೆ ವಿಪ್ ಜಾರಿ ಮಾಡಿದೆ. ದಿನಾಂಕ 20-12-2021 ರಿಂದ 24-12-2021 ರವರೆಗೆ ಸದನದಲ್ಲಿ ಸಾರ್ವಜನಿಕರ ಅತೀ ಮಹತ್ವದ ವಿಷಯಗಳು ಚರ್ಚೆಗೆ ಬರುತ್ತಿವೆ.
ಅಧಿವೇಶನ ಪ್ರಾರಂಭದಿಂದ ಮುಕ್ತಾಯವಾಗುವರೆಗೆ ಕಡ್ಡಾಯವಾಗಿ ಸದಸ್ಯರುಗಳು ಸದನದಕ್ಕೆ ಆಗಮಿಸಿ ಚರ್ಚ್ ಕಲಾಪಗಳಲ್ಲಿ ಭಾಗವಹಿಸಬೇಕು ಎಂದು ವಿಪ್ ಜಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.