Chikkaballapur | ವೈದ್ಯರ ನಿರ್ಲಕ್ಷ್ಯಕ್ಕೆ ಓರ್ವ ಬಲಿ..!?
ಚಿಕ್ಕಬಳ್ಳಾಪುರ : ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತವರು ಕ್ಷೇತ್ರದಲ್ಲಿ ವೈದ್ಯರು ಬೇಜವಾಬ್ದಾರಿತ ಮೆರೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ನರಸಿಂಹಪ್ಪ ಕೊನೆಯುಸಿರೆಳೆದಿದ್ದಾರೆ.
ನರಸಿಂಹಪ್ಪ ಅವರು, ಸುಸ್ತು ಬೇದಿ ಜ್ವರ ಅಂತ ನಿನ್ನೆ ರಾತ್ರಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು.

ಆದ್ರೆ ನರಸಿಂಹಪ್ಪ ಅವರ ಸ್ಥಿತಿ ಬಿಗಡಾಯಿಸಿದ್ದರೂ ವೈದ್ಯರು ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡಲಿಲ್ಲ.
ಹೀಗಾಗಿ ಮೃತನ ಕುಟುಂಬಸ್ಥರು ವೈದ್ಯರ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ಜಿಲ್ಲಾಸ್ಪತ್ರೆಯ 128ನೇ ವಾರ್ಡ್ ನ ಪುರುಷರ ವಾರ್ಡ್ ನಲ್ಲಿ ನರಸಿಂಹ ಅಡ್ಮಿಟ್ ಆಗಿದ್ದರು.
ಇನ್ನು ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.