ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಪ್ರವಾಸಿತಾಣವಾಗಿರುವ ದೇವರಮನೆ ಬೆಟ್ಟಕ್ಕೆ ಕಾಡಾನೆ ಭಯ ಶುರುವಾಗಿದೆ.
ಇಲ್ಲಿ ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿರುತ್ತಾರೆ. ಹೀಗಾಗಿ ಅವರಿಗೆಲ್ಲ ಒಂಟಿ ಸಲಗದ ಆತಂಕ ಕಾಡುತ್ತಿದೆ. ಈ ಒಂಟಿ ಸಲಗ ದೇವರಮನೆ ಬೆಟ್ಟಕ್ಕೆ ತೆರಳುವ ಮಾರ್ಗದ ತಿರುವಿನಲ್ಲಿ ಕಾಣಿಸಿಕೊಂಡಿದೆ. ಬೆಟ್ಟದ ತುದಿಯಲ್ಲಿರುವ ಕಾಲ ಭೈರವೇಶ್ವರ ದೇವಾಲಯದ ಬಳಿಯೂ ಸಂಚಾರ ಮಾಡುತ್ತಿದೆ. ಹೀಗಾಗಿ ಜನರು ಹಾಗೂ ಪ್ರವಾಸಿಗರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಅಲ್ಲದೇ, ಒಂಟಿ ಸಲಗವನ್ನು ಸೆರೆಹಿಡಿದು ಕಾಡಿಗಟ್ಟುವಂತೆ ಪ್ರವಾಸಿಗರು ಮತ್ತು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಜಿಲ್ಲೆಯ ದೇವರಮನೆ ಬೆಟ್ಟಕ್ಕೆ ಮಳೆಗಾಲದಲ್ಲಿ ಭೇಟಿ ನೀಡಲು ಅತ್ಯುತ್ತಮ ಸ್ಥಳವಾಗಿದೆ. ಪ್ರತಿ 12 ವರ್ಷಗಳಿಗೊಮ್ಮೆ ಅರಳುವ ಹಾರ್ಲು ಹೂವುಗಳು ಇಲ್ಲಿಯೇ ಬೆಳೆಯುವುದು.