ಮಲನಾಡು ಚಿಕ್ಕಮಗಳೂರಿನಲ್ಲಿ ಕೊರೋನಾ ಹಾವಳಿ ಮುಂದುವರೆದಿದೆ. ಇಂದು ಒಂದೇ ದಿನ ಜಿಲ್ಲೆಯಲ್ಲಿ 41 ಮಂದಿಗೆ ಸೋಂಕು ತಗುಲಿರುವುದು ದೃಢವಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1087 ಕ್ಕೆ ತಲುಪಿದ್ದು, ಜಿಲ್ಲೆಯಲ್ಲಿ ಸದ್ಯ 614 ಸಕ್ರಿಯ ಪ್ರಕರಣಗಳಿದೆ. ಇನ್ನೂ ಇಂದು 11 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಜಿಲ್ಲೆಯಲ್ಲಿ ಈವರೆಗೂ ಗುಣಮುಖರಾದವರ ಸಂಖ್ಯೆ 440ಕ್ಕೇರಿದೆ. ಇಂದು ಹೊಸದಾಗಿ ಸೋಂಕು ಪತ್ತೆಯಾದವರ ಪೈಕಿ ಅಜ್ಜಂಪುರ 1, ಕಡೂರು 4, ತರೀಕೆರೆ 5, ಚಿಕ್ಕಮಗಳೂರು 30 ಕೇಸ್ ಗಳಿವೆ.
ನೀವು ಅನುಸರಿಸಬೇಕಾದ 3 ತತ್ವಗಳು: ಡಿಜಿಟಲ್ ಯುಗದ ಎಚ್ಚರಿಕೆ!
ನಿಮಗೆ ಮಹಾತ್ಮಾ ಗಾಂಧಿಯವರ ಪ್ರಸಿದ್ಧ ತತ್ವಗಳು ನೆನಪಿದೆಯೇ? "ಕೆಟ್ಟದ್ದನ್ನು ಕೇಳಬೇಡಿ, ಕೆಟ್ಟದ್ದನ್ನು ನೋಡಬೇಡಿ, ಕೆಟ್ಟದ್ದನ್ನು ಮಾತನಾಡಬೇಡಿ." ಈ ತತ್ವಗಳು ಸದಾ ನಮ್ಮ ಜೀವನದ ಮಾರ್ಗದರ್ಶಕವಾಗಿದ್ದರೂ, ಇಂದಿನ ಡಿಜಿಟಲ್...