Koppala | ಆಕಸ್ಮಿಕ ಅಗ್ನಿ ದುರಂತಕ್ಕೆ ಬಾಲಕ ಬಲಿ!
ಕೊಪ್ಪಳದ ಕೋಮುಲಾಪುರದಲ್ಲಿ ಘಟನೆ
ಜಯರಾಜ್ ಬೆಂಕಿಗಾಹುತಿಯಾದ ಬಾಲಕ
ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಬೆಂಕಿಗಾಹುತಿ
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಅವಘಡ
ಕೊಪ್ಪಳ : ಅಗ್ನಿ ಅವಘಡದಲ್ಲಿ ಓರ್ವ ಬಾಲಕ ಕೊನೆಯುಸಿರೆಳೆದಿರುವ ಘಟನೆ ಕೊಪ್ಪಳದ ಕುಕನೂರು ತಾಲೂಕಿನ ಕೋಮಲಾಪುರ ಗ್ರಾಮದಲ್ಲಿ ನಡೆದಿದೆ. ಜಯರಾಜ್ ಬೆಂಕಿಗಾಹುತಿಯಾಗಿರುವ ಬಾಲಕ.
ಗ್ರಾಮದ ಹನುಮಪ್ಪ ಅಬ್ಬಿಗೇರಿ ಎಂಬುವರಿಗೆ ಸೇರಿದ ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ.
ಇದರಿಂದ ಬೆಂಕಿ ಹೊತ್ತಿಕೊಂಡಿದೆ. ಘಟನೆಯಲ್ಲಿ ವಿನೋದ ರಾಜ್ ಹಾಗೂ ಶಂಕರರಾಜ್ ಎಂಬುವವರಿಗೆ ಗಾಯಗಳಾಗಿವೆ. ಇವರಿಗೆ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಇನ್ನು ಅಗ್ನಿ ಅವಘಡದಿಂದಾಗಿ ಸುಮಾರು 1 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ.
ಮನೆಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಅಗ್ನಿಶಾಮಕ ದಳ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.
ಈ ಸಂಬಂಧ ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.