Child Marriages | ರಾಜ್ಯದಲ್ಲಿ ಹೆಚ್ಚಾದ ಬಾಲ್ಯ ವಿವಾಹ!
ಬೆಂಗಳೂರು : ಕಳೆದ ಮೂರು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ 571 ಬಾಲ್ಯವಿವಾಹ ಪ್ರಕರಣಗಳು ನಡೆದಿವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್ ಅವರ ಉತ್ತರದಿಂದ ತಿಳಿದುಬಂದಿದೆ.
ವಿಧಾನ ಪರಿಷತ್ ನಲ್ಲಿ ವಿಪಕ್ಷದ ಉಪ ನಾಯಕರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ 2020-21 ರ ಸಾಲಿನಲ್ಲಿ 296 ಬಾಲ್ಯ ವಿವಾಹಗಳು ವರದಿಯಾಗಿವೆ.
2019-20ರಲ್ಲಿ ಈ ಸಂಖ್ಯೆ 140 ಇದ್ದಿತ್ತು. 2018-19ರಲ್ಲಿ ರಾಜ್ಯದಲ್ಲಿ 119 ಬಾಲ್ಯ ವಿವಾಹ ಕೇಸುಗಳು ದಾಖಲಾಗಿದ್ದವು. ಅದು ವರ್ಷದಿಂದ ವರ್ಷಕ್ಕೆ ಹೆಚ್ಚಾಗಿದೆ ಎಂದು ತಿಳಿಸಿದರು.
ಅಲ್ಲದೇ ಎನ್‌ಸಿಆರ್‌ಬಿ ಪ್ರಕಾರ, 2020 ರಲ್ಲಿ 184 ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿದೆ. ಇದರೊಂದಿಗೆ ಕರ್ನಾಟಕವು ಬಾಲ್ಯ ವಿವಾಹಗಳಲ್ಲಿ ಭಾರತದ ರಾಜ್ಯಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದರು.
ಬಡತನ, ಅನಕ್ಷರತೆ, ಮೂಢನಂಬಿಕೆ, ಬಾಲ್ಯವಿವಾಹಕ್ಕೆ ಸಂಬಂಧಿಸಿದ ಕಾನೂನುಗಳ ಬಗ್ಗೆ ತಿಳುವಳಿಕೆ ಕೊರತೆ, ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ನಿರ್ಲಕ್ಷ್ಯ, ಹಿರಿಯರ ಸಾಂಪ್ರದಾಯಿಕ ಆಶಯಗಳು, ಮುಖ್ಯವಾಗಿ ಕೊರೊನಾ ಸೋಂಕಿನ ಸಂದರ್ಭಗಳು ಬಾಲ್ಯ ವಿವಾಹ ಸಂಖ್ಯೆ ಹೆಚ್ಚಳಕ್ಕೆ ಕಾರಣಗಳು ಎಂದು ಸಚಿವರು ಹೇಳಿದ್ದಾರೆ. Child Marriages doubled in Karnataka during covid