ಜೈಲಿನಿಂದ ಹೊರಬಂದ ಬೆನ್ನಲ್ಲೇ 5 ವರ್ಷದ ಮಗು ಮೇಲೆ ಅತ್ಯಚಾರವೆಸಗಿದ ನೀಚ..!
ಮಧ್ಯಪ್ರದೇಶ: ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಜೈಲು ಸೇರಿದ್ದ ಆರೋಪಿ 10 ದಿನಗಳ ಹಿಂದೆ ಹೊರಬಂದಿದ್ದು, ಮತ್ತೆ ಪೈಶಾಚಿಕ ಕೃತ್ಯವೆಸಗಿದ್ದಾನೆ. 5 ವರ್ಷದ ಬಾಲಕಿಯನ್ನು ಅಪಹರಿಸಿ ಹೊಲದಲ್ಲಿ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ. ಮಧ್ಯಪ್ರದೇಶದ ಮೊರೆನಾದ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಮದುವೆಯಾದ ಕೆಲ ತಿಂಗಳಲ್ಲೇ ಪತ್ನಿ ಕೊಂದ ಪಾಪಿ : ‘ವಾಟ್ಸಾಪ್’ ಕೊಲೆಗೆ ಕಾರಣ..!
36 ವರ್ಷದ ಬಂಟಿ ರಾಜಕ್ ಆರೋಪಿಯಾಗಿದ್ದು, ಇದೀಗ ಈತನನ್ನ ಮತ್ತೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಾಲಕಿ ಗುರುವಾರ ಸಂಜೆ ನಾಪತ್ತೆಯಾಗಿದ್ದಳು. ಈ ಹಿನ್ನೆಲೆ ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರು ತೀವ್ರ ಶೋಧ ನಡೆಸಿದ್ದರು ಆಕೆಯ ಸುಳಿವು ಸಿಕ್ಕಿರಲಿಲ್ಲ. ನಂತರ ಎಷ್ಟೋ ಸಮಯದ ಬಳಿಕ ಊರಿನ ಹೊರವಲಯದ ಹೊಲದಲ್ಲಿ ಮಗು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ.
ಮದುವೆಯಾದ ಕೆಲ ತಿಂಗಳಲ್ಲೇ ಪತ್ನಿ ಕೊಂದ ಪಾಪಿ : ‘ವಾಟ್ಸಾಪ್’ ಕೊಲೆಗೆ ಕಾರಣ..!
ಇತ್ತ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿ ಅನುಮಾನದ ಮೇರೆಗೆ ಆರೋಪಿ ಬಂಟಿಯನ್ನ ಅರೆಸ್ಟ್ ಮಾಡಿದಾಗ ಆತ ನಿಜ ಬಾಯ್ಬಿಟ್ಟಿದ್ದಾನೆ.
ಪೋಕ್ಸೋ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲಿಸಿ ಆತನನ್ನು ಬಂಧಿಸಲಾಗಿದೆ. ಈ ಸಂಬಂಧ ಸಬಲ್ಗಢ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ತಾಯಿಯ ಪ್ರೀತಿ ನಕಲಿ’ – ಡೆತ್ ನೋಟ್ ಬರೆದು ಅಮ್ಮನನ್ನು ಕೊಂದು ಆತ್ಮಹತ್ಯೆಗೆ ಶರಣಾದ ಮಗ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








