ADVERTISEMENT
Wednesday, August 12, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಮಕ್ಕಳೇ ಆಸ್ತಿ

admin by admin
June 12, 2020
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಮನುಷ್ಯ ಜೀವನದಲ್ಲಿ ಭವಿಷ್ಯತ್ತಿಗೆಂದು ಮಾಡಿಡುವ ಆಸ್ತಿಯೆಂದರೆ,ಹಣ,ಆಸ್ತಿ,ಒಡವೆ, ಮನೆ ಇತ್ಯಾದಿ. ಯೌವನದಿಂದಲೂ ಕೂಡಿಟ್ಟು,ಇಂತಹ ಆಸ್ತಿಯನ್ನು ಎಷ್ಟು ಸಂಚಯಿಸಿದರೂ ಅದು ಅನಾರೋಗ್ಯದ ಸಮಯದಲ್ಲಾಗಲಿ, ಸಾವಿನ ಸಮಯದಲ್ಲಾಗಲಿ, ಅಥವಾ ಸಮಾಜದಲ್ಲಿ ಪ್ರಯೋಜನಕ್ಕೆ ಬಾರದು. ಆದುದರಿಂದ ನಮ್ಮ ಕಷ್ಟ ಕಾಲದಲ್ಲಿ ಸ್ಪಂದಿಸುವಂತಹ ಸಂಸ್ಕಾರ ಕೊಟ್ಟು ಮಕ್ಕಳನ್ನು ಬೆಳೆಸಿದರೆ ,ಅಂತಹ ಮಕ್ಕಳು ತಂದೆ-ತಾಯಿಗಷ್ಟೇ ಅಲ್ಲ, ಸಮಾಜದ ಆಸ್ತಿಯೂ ಆಗಬಲ್ಲರು.

Related posts

varamahalakshmi-vrata-mantra-for-wealth-and-prosperity

ವರಮಹಾಲಕ್ಷ್ಮಿ ವ್ರತ ದಿನದಂದು ಒಂದು ಮನಇಚ್ಚಾ ಪದ 8 ಬಾರಿ ಹೇಳಿದರೆ ಅಷ್ಟ ಐಶ್ವರ್ಯ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ.

August 12, 2026
depuy-synthes-ralc-bangalore-orthopedic-training-center

ಮೂಳೆ ಶಸ್ತ್ರಚಿಕಿತ್ಸಾ ವಲಯದಲ್ಲಿ ಹೊಸ ಮೈಲಿಗಲ್ಲು, ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಅತ್ಯಾಧುನಿಕ ತರಬೇತಿ ಕೇಂದ್ರ

August 12, 2026

ಸ್ವರ್ಗ ಎಲ್ಲಿದೆಯೆಂದರೆ,ಅದು ಮಕ್ಕಳಿರುವ ಮನೆಯಲ್ಲಿಯೇ ಇದೆ ಎಂದು ಸುಭಾಷಿತವೊಂದು ಹೇಳುತ್ತದೆ.ಮಕ್ಕಳಿದ್ದ ಮನೆಯಲ್ಲಿ
ಸಂತೋಷ, ನೆಮ್ಮದಿ ನೆಲೆಸಿರುತ್ತದೆ.ಅದಕ್ಕೇ ಹಿಂದಿನವರು ‘ಮಕ್ಕಳಿರಲವ್ವ ಮನೆತುಂಬಾ, ಮಕ್ಕಳು ಮನೆ ಒಳ ಹೊರಗ ಆಡಿದರ ಬೀಸಣಿಕೆ ಗಾಳಿ ಸುಳಿದಾವ’ಎಂದು ಜನಪದ ಹಾಡುಗಳಲ್ಲಿ ಮಕ್ಕಳು ಮನೆಯ ತಂಪು,ಮಕ್ಕಳಿದ್ದರೆ ಜೀವನ ಇಂಪು ಎಂದೆಲ್ಲಾ ಹಾಡಿದ್ದಾರೆ.ಇದು ಅವರ ಅನುಭವದ ಅನುಭಾವ.

ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರೂರವರಿಗೆ ಮಕ್ಕಳೆಂದರೆ ಪಂಚ ಪ್ರಾಣ. ಇಂದಿನ ಮಕ್ಕಳೇ ಭವ್ಯಭಾರತದ ಮುಂದಿನ ಪ್ರಜೆಗಳು.ಭವಿಷ್ಯ ಭಾರತದ ಆಸ್ತಿ. ಸ್ವಾಮಿ ವಿವೇಕಾನಂದರೂ ಸಹ ಯುವಕರಲ್ಲಿ ನಂಬಿಕೆ ಇಟ್ಟುಕೊಂಡಿದ್ದರು. ಅವರು “ ನನಗೆ ಕಬ್ಬಿಣದಂತಹ ಮಾಂಸಖಂಡವುಳ್ಳ ಬಲಿಷ್ಟವಾಗಿರುವ ಹತ್ತು ಜನ ಯುವಕರನ್ನು ಕೊಟ್ಟರೆ ಇಡೀ ದೇಶವನ್ನೇ ಅಲುಗಾಡಿಸಬಲ್ಲೆ” ಎಂದು ಗುಡುಗುವಲ್ಲಿ ಯುವಜನತೆಯ ಶಕ್ತಿ,ಸಾಮರ್ಥ್ಯದ ಅನಾವರಣವಾಗುತ್ತದೆ.
ಮಕ್ಕಳು ಸುಂದರವಾದ ತೋಟದಲ್ಲಿ ಅರಳುವ ಬಣ್ಣಬಣ್ಣದ ಹೂವುಗಳು.ಹೂ ಸುಂದರವಾಗಿ ಅರಳಬೇಕಾದರೆ,ಬಹಳಷ್ಟು ಆರೈಕೆ ಬೇಕಾಗುತ್ತದೆ. ಕಾಲಕಾಲಕ್ಕೆ ಸರಿಯಾಗಿ ನೀರು ಗೊಬ್ಬರ ಹಾಕಬೇಕು.ಸೂರ್ಯನ ಬಿಸಿಲು ಬೀಳಬೇಕು ಎಂಬಿತ್ಯಾದಿ.ಅಂತೆಯೇ ಮಕ್ಕಳೂ ಸಹ .ಮಕ್ಕಳು ಉತ್ತಮ ಚಾರಿತ್ರ್ಯವಂತ,ಶಿಸ್ತಿನ ಮಕ್ಕಳಾಗಿ ರೂಪುಗೊಳ್ಳಬೇಕಾದರೆ ಉತ್ತಮ ಆರೈಕೆಯ ಜೊತೆಗೆ ಉತ್ತಮ ಸಂಸ್ಕಾರದ ವಾತಾವರಣವೂ ಮುಖ್ಯ.’ಮಕ್ಕಳಿಗೆ ಅನ್ನ ಹಾಕದಿದ್ದರೆ ಹಸಿವು ಆದಾಗ ಅಳುತ್ತಾರೆ.ಆದರೆ ಸಂಸ್ಕಾರ ಕೊಡದಿದ್ದರೆ ಜೀವನಪೂರ್ತಿ ಅಳುತ್ತಾರೆ’ ಎನ್ನುವ ಮಾತು ಉತ್ತಮ ಜೀವನಕ್ಕೆ ಸಂಸ್ಕಾರ ಎಷ್ಟುಮುಖ್ಯ ಎಂಬುದನ್ನು ಅರ್ಥೈಸುತ್ತದೆ.
ಸಂಸ್ಕಾರ ಎನ್ನುವಂತದ್ದು ಮಕ್ಕಳಿಗೆ ನಾವು ಕೊಡುವ ಜೀವನನುಭವದಿಂದ,ಉತ್ತಮ ಶಿಕ್ಷಣದಿಂದ ಲಭಿಸುವಂತದ್ದು.
ಡಾ.ರಾಧಾಕೃಷ್ಣನ್ ಹೇಳಿರುವಂತೆ “ಶಿಕ್ಷಣವೆಂದರೆ ಮಕ್ಕಳು ಮಾನವರಾಗಿ, ನಾಗರಿಕರಾಗಿ,ಮತ್ತೊಬ್ಬರೊಡನೆ ಸ್ನೇಹ,ಗೌರವ ಆದರಗಳಿಂದ ವರ್ತಿಸುವಂತೆ ಮಾಡುವುದು.”
ಸಂಸ್ಕಾರವು ಶಿಕ್ಷಣದ ವರ್ಚಸ್ಸನ್ನು ಹೆಚ್ಚಿಸುತ್ತದೆ.ಕೇವಲ ಪುಸ್ಕದಿಂದ ಪಡೆಯುವ ಜ್ಞಾನ ಪರಿಪೂರ್ಣವಲ್ಲ.ಅದು ಪರಿಪೂರ್ಣವಾಗಬೇಕಾದರೆ ಬದುಕಿನಲ್ಲಿ ಪರಿಸರದ ಅನುಭವದಿಂದ ಪಡೆಯುವ ಅನುಭವವು ಬೆರೆಯಬೇಕು.ಪರೀಕ್ಷೆಗಾಗಿ ಓದುವುದಷ್ಟೇ ಬದುಕು ಅಲ್ಲ.ಪರೀಕ್ಷೆಯನ್ನು ಮೀರಿದ ಬದುಕೊಂದು ಇದೆ.ಅದು ಜೀವನ ಪಾಠವನ್ನು ಕಲಿಸಿಕೊಡುವಂತ ವಿಶ್ವವಿದ್ಯಾಲಯ.

ಆ ಜೀವನಪಾಠ ಮನೆಯಿಂದಲೇ ಪ್ರಾರಂಭವಾಗುತ್ತದೆ. ”ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರು”ಎನ್ನುವಂತೆ ಬಾಲ್ಯದಲ್ಲಿಯೇ ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡುವ ಹೊಣೆ ಹೆತ್ತವರದ್ದು. “ಮಕ್ಕಳಿಗಾಗಿ ಕೊಡಬಹುದಾದ ದೊಡ್ಡ ಆಸ್ತಿ ಪ್ರತಿದಿನ ಕೆಲವು ನಿಮಿಷಗಳ ಸಹವಾಸ”ಎಂಬುದು ಬಟ್ಟೀಸ್ ರ ಹೇಳಿಕೆ. ನಮ್ಮ ಮಕ್ಕಳು ನೀತಿವಂತರೂ,ಬುದ್ಧಿವಂತರೂ ಆಗಿ ಬೆಳೆಯಬೇಕಾದರೆ,ಮಕ್ಕಳ ಮಾತನ್ನು ಆಲಿಸಿ ಮನಸ್ಸನ್ನು ಅರಿತು, ಕುತೂಹಲ ಕೆರಳಿಸುವ ವ್ಯವಧಾನ ಹೆತ್ತವರಲ್ಲಿರಬೇಕು.ಪ್ರೀತಿಯ ತುತ್ತನ್ನು ಉಣಿಸಿ,ಜೀವನದ ಮಹತ್ವ ತಿಳಿಸಿ,ಉತ್ತಮ ಸಂಸ್ಕಾರದೊಂದಿಗೆ ಯೋಚಿಸಿ, ಯೋಜಿಸಿ ಶಿಸ್ತಿನ ಜೀವಾನುಭವವನ್ನು ನೀಡಬೇಕು.”ತಂದೆಯಂತೆ ಮಗ,ಗುರುವಿನಂತೆ ಶಿಷ್ಯ”ಎನ್ನುವಂತೆ ತಂದೆ-ತಾಯಿ ಹಾಗು ಶಾಲೆಯಲ್ಲಿ ಗುರುಗಳು ಉತ್ತಮ ಸಂಸ್ಕಾರವಂತರಾದರೆ ಮಕ್ಕಳು ಉತ್ತಮ ಸಂಸ್ಕಾರವಂತರಾಗಿ ಸಮಾಜದಲ್ಲಿ ಚೆನ್ನಾಗಿ ಬದುಕತ್ತಾರಲ್ಲದೆ ಸಮಾಜದ ಆಸ್ತಿಯಾಗುತ್ತಾರೆ.

ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳು ಅಂತರ್ಜಾಲದಲ್ಲಿ ಮುಳುಗಿ ಹೋಗುತ್ತಾರೆ. ಮೊಬೈಲಿನ ದಾಸರಾಗುತ್ತಿದ್ದಾರೆ.ಫೇಸ್ಬುಕ್ಕಿಂದ ದಾರಿ ತಪ್ಪುತ್ತಿದ್ದಾರೆ.ಪೋಷಕರೂ ಕೂಡ ದುಬಾರಿ ಮೊಬೈಲ್,ಕಂಪ್ಯೂಟರ್ಗಳನ್ನುನೀಡುವುದು ನಮ್ಮ ಆದ್ಯ ಕರ್ತವ್ಯವೆಂದು ಭಾವಿಸಿ ಒದಗಿಸುತ್ತಿದ್ದಾರೆ.ಆದ್ದರಿಂದ ಮಕ್ಕಳು ಸಮಾಜ ಘಾತುಕ ಚಟುವಟಿಕೆಗಳತ್ತ ಆಕರ್ಷಿತರಾಗುತ್ತಿದ್ದಾರೆ.ಜೀವನ ಜವಾಬ್ದಾರಿಯುತವಾದುದು. ಜೀವನದಲ್ಲಿ ಸೋಲು-ಗೆಲುವು,ನೋವು-ನಲಿವು ಇದ್ದೆ ಇದೆ.ಸಿಹಿಯ ಅನುಭವವಾಗಬೇಕಾದರೆ ಕಹಿಯನ್ನು ಅನುಭವಿಸಲೇಬೇಕು.

ಪ್ರಸ್ತುತ ಪರಿಸ್ಥಿತಿಯಲ್ಲಿ ಮನೆಯಲ್ಲೂ, ಶಾಲೆಯಲ್ಲೂ ಮಕ್ಕಳ ಮೌಲಿಕ ಬೆಳವಣಿಗೆಗೆ ಪೂರಕವಾದ ವಾತಾವರಣದ ಕೊರತೆಯಿಂದ,ಕಲಿಕೆಯ ಒತ್ತಡ, ಮನಸ್ಸಿನ ಕಳವಳ,ಪ್ರೀತಿಯ ಕೊರತೆಯಿಂದ ಮಕ್ಕಳು ತಮ್ಮ ರಕ್ಷಣೆಗಾಗಿ ಇರುವ ಕಾನೂನುಗಳನ್ನು ದುರ್ಬಳಕೆ ಮಾಡುವ ಮನಸ್ಥಿತಿಗೆ ತಲುಪುತ್ತಿದ್ದಾರೆ.ಇಂತಹ ವಿಷಮ ಸ್ಥಿತಿಯಲ್ಲಿ ಮಕ್ಕಳನ್ನು ಸರಿದಾರಿಯಲ್ಲಿ ನಡೆಸುವಂತಹ ಶಿಕ್ಷಣ,ಸಂಸ್ಕಾರ ನೀಡಬೇಕಾದ ಅನಿವಾರ್ಯತೆ ಇದೆ.ಪರೀಕ್ಷೆಯಲ್ಲಿ ಗಳಿಸುವ ಅಂಕಗಳು ಬುದ್ಧಿಮತ್ತೆಯನ್ನು ಅಳೆಯುತ್ತವೆ.ಚಾರಿತ್ರ್ಯವನ್ನಲ್ಲ.ಸಚ್ಛಾರಿತ್ರ್ಯ ಜೀವನವನ್ನು ಬಲಗೊಳಿಸುತ್ತವೆ. ವಕ್ಕಳು ಸಚ್ಛಾರಿತ್ರ್ಯವಂತರಾದರೆ, ಮನೆ ಪ್ರೀತಿಯ ಸ್ವರ್ಗವಾಗುತ್ತದೆ.ಶಾಲೆ ಸಂತೋಷದ ಚಿಲುಮೆಯಾಗುತ್ತದೆ.ಸಮಾಜ ಸುಂದರ ನಿಸರ್ಗವಾಗುತ್ತದೆ.ಈ ನಿಟ್ಟಿನಲ್ಲಿ ಮನೆ , ಶಾಲೆ ಹಾಗೂ ಸಮಾಜದ ಪಾತ್ರ ಮಹತ್ತರವಾಗಿದೆ..”ಬಾಳನು ಶೋಧಿಸಿ ಶುಚಿಯನು ಬೆಳೆದರೆ ಇಹವೇ ಅರಳದೇ ಪರವಾಗಿ”

ಸುಮತಿ ಪಿ.

Tags: #ಕರ್ನಾಟಕChidrenindiakarnatakaನೆಹರುಮಗು
ShareTweetSendShare
Join us on:

Related Posts

varamahalakshmi-vrata-mantra-for-wealth-and-prosperity

ವರಮಹಾಲಕ್ಷ್ಮಿ ವ್ರತ ದಿನದಂದು ಒಂದು ಮನಇಚ್ಚಾ ಪದ 8 ಬಾರಿ ಹೇಳಿದರೆ ಅಷ್ಟ ಐಶ್ವರ್ಯ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ.

by admin
August 12, 2026
0

ಮನೆಗೆ ಅಷ್ಟ ಐಶ್ವರ್ಯ ತರುವ ಮಂತ್ರ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿರ್ವಿದ್ವಾನ್ ನಿಮ್ಮ...

depuy-synthes-ralc-bangalore-orthopedic-training-center

ಮೂಳೆ ಶಸ್ತ್ರಚಿಕಿತ್ಸಾ ವಲಯದಲ್ಲಿ ಹೊಸ ಮೈಲಿಗಲ್ಲು, ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಅತ್ಯಾಧುನಿಕ ತರಬೇತಿ ಕೇಂದ್ರ

by admin
August 12, 2026
0

ಬೆಂಗಳೂರು: ಮೂಳೆ ಚಿಕಿತ್ಸಾ ತಂತ್ರಜ್ಞಾನದಲ್ಲಿ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿರುವ 'ಡಿಪ್ಯೂ ಸಿಂಥೆಸ್' ಸಂಸ್ಥೆಯು, ಬೆಂಗಳೂರಿನ ಪ್ರತಿಷ್ಠಿತ 'ರಾಮಯ್ಯ ಅಡ್ವಾನ್ಸ್ಡ್ ಲರ್ನಿಂಗ್ ಸೆಂಟರ್' (ಆರ್‌ಎಎಲ್‌ಸಿ) ಜೊತೆ ಮಹತ್ವದ ಒಪ್ಪಂದ...

nephroplus-q1-2026-net-profit-surges-41-percent-revenue-growth

ಏಷ್ಯಾದ ಅತಿದೊಡ್ಡ ಡಯಾಲಿಸಿಸ್ ನೆಟ್‌ವರ್ಕ್ ನೆಫ್ರೋಪ್ಲಸ್ ಭರ್ಜರಿ ಸಾಧನೆ, ನಿವ್ವಳ ಲಾಭದಲ್ಲಿ 41% ಭಾರೀ ಏರಿಕೆ!

by admin
August 12, 2026
0

ಬೆಂಗಳೂರು: ಕಿಡ್ನಿ ವೈಫಲ್ಯಕ್ಕೆ ತುತ್ತಾದ ರೋಗಿಗಳಿಗೆ ಆಸರೆಯಾಗಿರುವ, ಏಷ್ಯಾದ ಅತಿದೊಡ್ಡ ಡಯಾಲಿಸಿಸ್ ಸೇವಾ ಜಾಲವಾದ ‘ನೆಫ್ರೋಪ್ಲಸ್’ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಭರ್ಜರಿ ಆರ್ಥಿಕ ಪ್ರಗತಿ...

PR Sreejesh Becomes First Owner of 2026 Yezdi Roadster Green Mamba in India

Bengaluru news – ಭಾರತದ ಮೊದಲ ‘2026 ಯೆಜ್ಡಿ ರೋಡ್‌ಸ್ಟರ್’ ಬೈಕ್ ಒಡೆಯನಾದ ಒಲಿಂಪಿಕ್ ಹೀರೋ ಪಿ.ಆರ್. ಶ್ರೀಜೇಶ್!

by admin
August 12, 2026
0

ಬೆಂಗಳೂರು: ಒಲಿಂಪಿಕ್ ಪದಕ ವಿಜೇತ ಹಾಗೂ ಭಾರತೀಯ ಹಾಕಿ ತಂಡದ ಮಾಜಿ ನಾಯಕ ಪಿ.ಆರ್. ಶ್ರೀಜೇಶ್ ಅವರು ಹೊಸದೊಂದು ಮೈಲಿಗಲ್ಲಿಗೆ ಸಾಕ್ಷಿಯಾಗಿದ್ದಾರೆ. ಜಾವಾ - ಯೆಜ್ಡಿ ಮೋಟಾರ್‌ಸೈಕಲ್ಸ್...

subramanya-swamy-vratam-pooja-vidhi-benefits-kuja-dosha-remedy

Astro- ೧೧ ವಾರಗಳ ಸುಬ್ರಹ್ಮಣ್ಯ ಸ್ವಾಮಿ ಪೂಜಾ ವಿಧಾನ..!

by admin
August 12, 2026
0

ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ವ್ರತವು ಅತ್ಯಂತ ವೈಭವದಿಂದ ತುಂಬಿರುವ ಮತ್ತು ಭಕ್ತರ ಆಸೆಗಳನ್ನು ಪೂರೈಸುವ ದೈವಿಕ ಸೃಷ್ಟಿ. ಈ ಉಪವಾಸವು ಪರಮಶಿವುನಿಯ ಪುತ್ರ, ಜ್ಞಾನದಾತ ಸುಬ್ರಹ್ಮಣ್ಯ ಸ್ವಾಮಿಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram