ವಿಶ್ವದ ಜನಪ್ರಿಯ ವೆಬ್ ಸೈಟ್ ಆಗಿ ಟಿಕ್ ಟಾಕ್ ಗೆ ಮೊದಲ ಸ್ಥಾನ…..
ಭಾರತ ಯಾವ ಆಪ್ ಅನ್ನ ಬ್ಯಾನ್ ಮಾಡಿತ್ತೋ ಆ ಆಪ್ ನ ವೆಬ್ಸೈಟ್ ಇಂದು ವಿಶ್ವದಲ್ಲಿ ಅತಿಹೆಚ್ಚು ಜನಪ್ರಿಯ ವೆಬ್ ಸೈಟ್ ಎಂಬ ಖ್ಯಾತಿಗೆ ಪಾತ್ರವಾಗಿದೆ. ದೈತ್ಯ ಗೂಗಲ್ ಸರ್ಚ್ ಇಂಜಿನ್ ವೆಬ್ ಸೈಟ ಅನ್ನು ಹಿಂದಿಕ್ಕಿ ಟಿಕ್ ಟಾಕ್ ಈ ಸಾಧನೆ ಮಾಡಿದೆ.
ಶಾರ್ಟ್ ವೀಡಿಯೋ ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್ ಗೆ ಸೇರಿದ ಚೀನಾ ಮೂಲದ ಟಿಕ್ ಟಾಕ್ ಆಪ್ ವಿಶ್ವದಲ್ಲಿ ಜನಪ್ರಿಯ ವೆಬ್ಸೈಟ್ ಎಂಬ ಖ್ಯಾತಿ ಪಡೆದುಕೊಂಡಿದೆ ಎಂದು ಯೂಸ್ ಮೂಲದ ಕ್ಲೌಡ್‌ಫ್ಲೇರ್ ಸಂಸ್ಥೆ ನಡೆಸಿದ ಸಂಶೋಧನೆಯಲ್ಲಿ ತಿಳಿದುಬಂದಿದೆ.
ಈ ವರ್ಷದ ಫೆಬ್ರವರಿ, ಮಾರ್ಚ್ ಮತ್ತು ಜೂನ್‌ನಲ್ಲಿ ಟಿಕ್‌ಟಾಕ್ ಗೂಗಲ್ ಅನ್ನು ಅಗ್ರ ಸ್ಥಾನದಿಂದ ಕೆಳಗಿಳಿಸಿದೆ ಮತ್ತು ಆಗಸ್ಟ್‌ನಿಂದ ಮೊದಲ ಸ್ಥಾನದಲ್ಲಿದೆ ಎಂದು ಶ್ರೇಯಾಂಕಗಳು ತೋರಿಸುತ್ತಿವೆ.
ಜನಪ್ರಿಯ ವೆಬ್ ಸೈಟ್ ಡೊಮೈನ್ ಆಗಿ ಗೂಗಲ್ ಎರಡನೇ ಸ್ಥಾನಕ್ಕೆ ಕುಸಿದಿದ್ದರೆ ಫೇಸ್ಬುಕ್ ಎರಡನೇ ಸ್ಥಾನದಿಂದ 3 ನೇ ಸ್ಥಾನಕ್ಕೆಕುಸಿದಿದೆ. ಮೈಕ್ರೋಸಾಫ್ಟ್ ನಂ. 4, ಆಪಲ್ ನಂ. 5, ಅಮೆಜಾನ್ ನಂ. 6 ಮತ್ತು ನೆಟ್‌ಫ್ಲಿಕ್ಸ್ ನಂ. 7 ನೇ ಸ್ಥಾನದಲ್ಲಿದೆ.
ಗೂಗಲ್‌ನ ಪೋಷಕ ಆಲ್ಫಾಬೆಟ್ ಮಾಲೀಕತ್ವದ ಯೂಟ್ಯೂಬ್ ಎಂಟನೇ, ಟ್ವಿಟರ್ ಒಂಬತ್ತನೇ ಮತ್ತು ವಾಟ್ಸಾಪ್ ಹತ್ತನೇ ಸ್ಥಾನದಲ್ಲಿದೆ. Instagram ಈ ವರ್ಷ ಟಾಪ್ 10 ನಿಂದ ಹೊರಬಿದ್ದಿದೆ.