ಬೀಜಿಂಗ್: ಜೂನ್ 15ರಂದು ಲಡಾಕ್‌ನ ಗಾಲ್ವನ್ ಕಣಿವೆಯ ಇಂಡೋ-ಚೀನಾ ಗಡಿಯಲ್ಲಿ ನಡೆದ ಘರ್ಷಣೆಯಲ್ಲಿ 43 ಚೀನಾ ಸೈನಿಕರು ಸತ್ತಿದ್ದಾರೆಂಬ ವಿಚಾರ ಸುಳ್ಳು ಸುದ್ದಿ ಎಂದು ಚೀನಾ ಸ್ಪಷ್ಟನೆ ನೀಡಿದೆ.
ಗಾಲ್ವನ್ ಘರ್ಷಣೆಯಲ್ಲಿ ಚೀನಾದ 43 ಸೈನಿಕರು ಸತ್ತಿದ್ದಾರೆ ಎಂದು ತೋರಿಸಲಾಗುತ್ತಿದೆ. ಇದೆಲ್ಲಾ ಕಟ್ಟು ಕತೆ ಎಂದಿರುವ ಚೀನಾ ವಿದೇಶಾಂಗ ವಕ್ತಾರ ಝೋ ಲಿಜಿಯನ್, ಭಾರತ ಮತ್ತು ಚೀನಾ ರಾಷ್ಟçಗಳು ಗಡಿ ವಿವಾದ ಕುರಿತಂತೆ ಪರಸ್ಪರ ಮಾತುಕತೆ ಹಾಗೂ ಸೇನಾ ಮಾರ್ಗಗಳ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲಿವೆ ಎಂದಿದ್ದಾರೆ.
ಜೂ.15ರAದು ಲಡಾಕ್ ಗಾಲ್ವನ್ ಕಣಿವೆಯಲ್ಲಿ ವಾಸ್ತವ ಗಡಿರೇಖೆ ನುಗ್ಗಿ ಭಾರತದ ಗಡಿಯೊಳಗೆ ಬಂದಿದ್ದ ಚೀನಾ ಸೇನೆ, ಭಾರತೀಯ ಯೋಧರ ಮೇಲೆ ಗುಂಡು ಹಾರಿಸಿತ್ತು. ಚೀನಾ ದಾಳಿಗೆ ಭಾರತದ ಯೋಧರೂ ಪ್ರತಿದಾಳಿ ನಡೆಸಿದ್ದರು. ಆದರೆ, ಈ ಘರ್ಷಣೆಯಲ್ಲಿ 20 ಯೋಧರು ಹುತಾತ್ಮರಾಗಿದ್ದಾರೆ ಎಂದು ಭಾರತ ಅಧಿಕೃತ ಘೋಷಣೆ ಮಾಡಿದೆ.
ಆದರೆ, ಚೀನಾ ಕಡೆ 43 ಸೈನಿಕರ ಸಾವಾಗಿರಬಹುದು ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿತ್ತು. ಆಂದಿನಿAದ ಈ ವಿಚಾರವಾಗಿ ಒಂದೇ ಒಂದು ಮಾತನಾಡದಿದ್ದ ಚೀನಾ, ವಾರದ ಬಳಿಕ ನಮ್ಮವರು ಯಾರೂ ಸತ್ತಿಲ್ಲ ಎಂದು ತನ್ನ ಹಳೆಯ ಚಾಳಿ ಮೂಲಕ ಸಮರ್ಥನೆ ಮಾಡಿದೆ.