ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಗೃಹಬಂಧನ..?? – ಚೀನಾ ಗೆ ಹೊಸ ಅಧ್ಯಕ್ಷ..!!!!
ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಗೃಹಬಂಧನದಲ್ಲಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. #XiJinping ಹ್ಯಾಶ್ಟ್ಯಾಗ್ನಲ್ಲಿ ಸಾವಿರಾರು ಮಂದಿ ಟ್ವೀಟ್ ಮಾಡುತ್ತಿದ್ದಾರೆ. ಬಿಜೆಪಿಯ ಮಾಜಿ ಸಂಸದ ಸುಬ್ರಮಣಿಯನ್ ಸ್ವಾಮಿ ಕೂಡ ಈ ಕುರಿತು ಟ್ವೀಟ್ ಮಾಡಿದ್ದಾರೆ.
ಪ್ರಮುಖ ವಿಷಯವೆಂದರೆ ಚೀನಾದ ಕಮ್ಯುನಿಸ್ಟ್ ಪಕ್ಷವಾಗಲಿ ಮತ್ತು ರಾಜ್ಯ ಮಾಧ್ಯಮ ಗ್ಲೋಬಲ್ ಟೈಮ್ಸ್ ಆಗಲಿ ಇದನ್ನು ಖಚಿತಪಡಿಸಿಲ್ಲ ಅಥವಾ ನಿರಾಕರಿಸಿಲ್ಲ.
ಬಿಜೆಪಿ ಮಾಜಿ ಸಂಸದ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿರುವ ಪ್ರಕಾರ “ಚೀನಾದ ಬಗ್ಗೆ ಹೊಸ ವದಂತಿ ಇದೆ, ಅದನ್ನು ತನಿಖೆ ಮಾಡಬೇಕು. ಕ್ಸಿ ಜಿನ್ಪಿಂಗ್ ಗೃಹಬಂಧನದಲ್ಲಿದ್ದಾರೆಯೇ? ಜಿನ್ಪಿಂಗ್ ಇತ್ತೀಚೆಗೆ ಸಮರ್ಕಂಡ್ನಲ್ಲಿದ್ದಾಗ, ಚೀನಾದ ಕಮ್ಯುನಿಸ್ಟ್ ಪಕ್ಷದ ನಾಯಕರನ್ನು ಸೇನಾ ಮುಖ್ಯಸ್ಥ ಹುದ್ದೆಯಿಂದ ತೆಗೆದುಹಾಕಲಾಯಿತು ಎಂದು ನಂಬಲಾಗಿದೆ. ಆ ಬಳಿಕ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು ಎಂಬ ವದಂತಿ ಹಬ್ಬಿದೆ ಎಂದು ಟ್ವಿಟ್ ಮಾಡಿದ್ದಾರೆ.
ಲಿ ಕಿಯಾವೊಮಿಂಗ್ ಹೊಸ ಅಧ್ಯಕ್ಷ….
ಚೀನಾದ ಅನೇಕ ಟ್ವೀಟ್ ಬಳಕೆದಾರರು ದೇಶದಲ್ಲಿ ದಂಗೆಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಪೋಸ್ಟ್ ಮಾಡುತ್ತಿದ್ದಾರೆ. ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) ಅಧ್ಯಕ್ಷ ಸ್ಥಾನದಿಂದ ಕ್ಸಿ ಜಿನ್ಪಿಂಗ್ ಅವರನ್ನು ತೆಗೆದುಹಾಕಿದೆ ಮತ್ತು ಅಧಿಕಾರವನ್ನು ತನ್ನ ಕೈಗೆ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಈಗ ಚೀನಾದ ನೂತನ ಅಧ್ಯಕ್ಷರಾಗಿ ಲಿ ಕಿಯಾಮಿಂಗ್ ಅವರನ್ನು ನೇಮಕ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಲಂಚ ಪಡೆದಿದ್ದಕ್ಕಾಗಿ ಚೀನಾದ ಸಚಿವರಿಗೆ ಮರಣದಂಡನೆ ವಿಧಿಸಿದ ನಂತರ ಈ ವದಂತಿಗಳು ಪ್ರಾರಂಭವಾಗಿವೆ. ಚೀನಾ ಸಾರ್ವಜನಿಕ ಭದ್ರತಾ ವಿಭಾಗದ ಮಾಜಿ ಉಪ ಸಚಿವ ಸನ್ ಲಿಜುನ್ ಅವರಿಗೆ ಮರಣದಂಡನೆ ವಿಧಿಸಲಾಗಿತ್ತು. ಅವರ 20 ವರ್ಷಗಳ ಅಧಿಕಾರಾವಧಿಯಲ್ಲಿ, 646 ಮಿಲಿಯನ್ ಗ್ರೀಕರ (700 ಕೋಟಿ ರೂಪಾಯಿ) ಲಂಚ ಪಡೆದಿದ್ದರು.
ಕ್ಸಿನ್ಹುವಾ ನ್ಯೂಸ್ನ 2021 ರ ವರದಿಯ ಪ್ರಕಾರ, ಶಿಸ್ತು ಮತ್ತು ಕಾನೂನುಗಳ ಗಂಭೀರ ಉಲ್ಲಂಘನೆಗಾಗಿ ಸನ್ ಅವರನ್ನು ಕಮ್ಯುನಿಸ್ಟ್ ಪಕ್ಷದಿಂದ ಹೊರಹಾಕಲಾಯಿತು.