ಬೀಜಿಂಗ್ : ಪೂರ್ವ ಲಡಾಖ್ ನ ಗಾಲ್ವನ್ ಬಳಿ ಭಾರತ ಮತ್ತು ಚೀನಾ ನಡುವೆ ನಡೆದ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಈ ವಿಚಾರವನ್ನು ಭಾರತ ಸರ್ಕಾರ ಮರುದಿನವೇ ದೇಶಕ್ಕೆ ತಿಳಿಸಿತ್ತು. ಆದರೆ ಚೀನಾದ ಎಷ್ಟು ಜನ ಸೈನಿಕರು ಮೃತಪಟ್ಟಿದ್ದಾರೆ ಎಂಬ ಮಾಹಿತಿಯನ್ನು ಚೀನಾ ಬಿಟ್ಟುಕೊಟ್ಟಿರಲಿಲ್ಲ.
ಚೀನಾ 43 ಸೈನಿಕರು ಮೃತಪಟ್ಟಿದ್ದಾರೆ . ಅಮೆರಿಕದ ಮಾದ್ಯಮಗಳು ಚೀನಾ 35 ಜನ ಸೈನಿಕರು ಮೃತಪಟ್ಟಿದ್ದಾರೆ ಎಂದು ವರದಿ ಮಾಡಿದ್ದವು. ಜೊತೆಗೆ ಭಾರತದ ಸೇನೆ 16 ಮೃತ ದೇಹಗಳನ್ನು ಚೀನಾಕ್ಕೆ ಒಪ್ಪಿಸಿದೆ ಎಂಬ ಊಹಾಪೋಹಗಳು ಕೇಳಿ ಬಂದಿದ್ದವು.
ಇದೀಗ ಚೀನಾ ಒಂದು ವಾರದ ಬಳಿಕ ತನ್ನ ಎಷ್ಟು ಜನ ಸೈನಿಕರು ಮೃತರಾಗಿದ್ದಾರೆ ಎಂದು ಒಪ್ಪಿಕೊಂಡಿದೆ ಎನ್ನಲಾಗಿದೆ. ನಮ್ಮಲ್ಲಿ 20ಕ್ಕಿಂತ ಕಡಿಮೆ ಸೈನಿಕರು ಬಲಿಯಾಗಿಯಾಗಿದ್ದಾರೆ ಎಂದು ಚೀನಾ ಹೇಳಿದೆ. ಆ ಮೂಲಕ ನಿರ್ಧಿಷ್ಟ ಸಂಖ್ಯೆಯನ್ನು ಚೀನಾ ಹೇಳಿಲ್ಲ.
ಚೀನಾ ಕಮ್ಯೂನಿಷ್ಟ್ ಪಾರ್ಟಿಯ ಮುಖವಾಣಿ ಗ್ಲೋಬಲ್ ಟೈಮ್ಸ್ ಈ ವಿಚಾರವಾಗಿ ವರದಿ ಮಾಡಿದೆ. ವರದಿಯಲ್ಲಿ ಸಾವಿನ ಸಂಖ್ಯೆ ನಿಖರವಾಗಿ ಹೇಳಿದರೆ ಗಡಿಯಲ್ಲಿ ಸಂಘರ್ಷ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಒಂದು ವೇಳೆ ಹೇಳದೆ ಇದ್ದರೂ ದೇಶದ ಒಳಗೆ ಕೋಲಾಹಲ ಸೃಷ್ಟಿ ಆಗಬಹುದು. ಆದ್ದರಿಂದ ಎಷ್ಟು ಸೈನಿಕರು ಬಲಿಯಾಗಿದ್ದಾರೆ ಎಂಬು ಹೇಳಾಗುವುದಿಲ್ಲ ಎಂದು ಚೀನಾ ತಜ್ಞರು ಹೇಳಿದ್ದಾರೆ ಎಂದು ಗ್ಲೋಬಲ್ ಟೈಮ್ ವರದಿ ಮಾಡಿದೆ.
ನೀವು ತುಂಬಾ ಗ್ರೇಟ್… ನಾನು ನಿಮ್ಮಂತೆಯೇ ಆಗಲು ಯತ್ನಿಸುತ್ತೇನೆ: G7 ಶೃಂಗಸಭೆಯಲ್ಲಿ ಮೆಲೋನಿಯ ಮೋದಿ ಮೆಚ್ಚುಗೆ
ಇತ್ತೀಚೆಗೆ ಜರುಗಿದ G7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಲಿಯ ಪ್ರಧಾನ ಮಂತ್ರಿ ಜಾರ್ಜಿಯಾ ಮೆಲೋನಿ ನಡುವಿನ ಸೌಹಾರ್ದಭರಿತ ಭೇಟಿಯು ಸೋಶಿಯಲ್ ಮೀಡಿಯಾ ಮತ್ತು ರಾಜಕೀಯ...