ಚೀನೀ ಆಪ್ ಬ್ಯಾನ್ : ಈಗಾಗಲೇ ಟಿಕ್ ಟಾಕ್ ಆಪ್ ಇದ್ದರೇ ಅದನ್ನ ಯೂಸ್ ಮಾಡ್ಬಹುದಾ..?

Tiktok

ದೇಶದಲ್ಲಿ ಚೀನೀ ಆಪ್ ಗಳನ್ನು ನಿಷೇಧಸಬೇಕೆಂದು ಹಲವು ದಿನಗಳಿಂದ ದೇಶಾದ್ಯಂತ ಆಂದೋಲನದ ರೂಪದಲ್ಲಿ ಕೇಳಿಬರುತ್ತಿದ್ದ ಒತ್ತಾಯಕ್ಕೆ ಕೇಂದ್ರ ಸರ್ಕಾರ ಕೊನೆಗೂ ಸಮ್ಮತಿ ವ್ಯಕ್ತಪಡಿಸಿದೆ. ಭಾರತದಲ್ಲಿ ತುಂಬಾ ಜನಪ್ರಿಯವಾಗಿರುವ ಟಿಕ್ ಟಾಕ್ ಸೇರಿದಂತೆ ಚೀನೀ ನಿರ್ಮಿತ 59 ಆಪ್ ಗಳನ್ನ ನಿಷೇಧಿಸಿದೆ.

ಆದ್ರೆ ಈಗ ಟಿಕ್ ಟಾಕ್ ಬಳಕೆದಾರರಲ್ಲಿ ಪ್ರಶ್ನೆವೊಂದು ಹಾಗೇ ಉಳಿದುಕೊಂಡಿದೆ. ಅದುವೇ, ಈಗಾಗಲೇ ಟಿಕ್ ಟಾಕ್ ಆಪ್ ಇಟ್ಕೊಂಡವರು ಅದನ್ನು ಯೂಸ್ ಮಾಡ್ಬಹುದಾ..? ಎಂಬುವುದು.

ಹೌದು..! ನಿನ್ನೆ ಕೇಂದ್ರ ಸರ್ಕಾರ ಹೊರಡಿಸಿದ ಆದೇಶ ಟಿಕ್ ಟಾಕ್ ಬಳಕೆದಾರರ ನಿದ್ದೆಗೆಡಿಸಿದೆ. ಪ್ರತಿ ಕ್ಷಣ ಟಿಕ್ ಟಾಕ್ ನಲ್ಲೇ ಬದುಕುತ್ತಿದ್ದ ಎಷ್ಟೋ ಮಂದಿಗೆ ದೇಶದಲ್ಲಿ ಟಿಕ್ ಟಾಕ್ ಬ್ಯಾನ್ ಆಗಿರೋದು ನುಂಗಲಾರದ ತುತ್ತಾಗಿದೆ. ಸದ್ಯ ಆಕಾಶವೇ ತಲೆ ಮೇಲೆ ಬಿದ್ದಂತೆ ಕೂತಿರುವ ಟಿಕ್ ಟಾಕ್ ಸ್ಟಾರ್ ಗಳಿಗೆ, ಈಗಾಗಲೇ ಟಿಕ್ ಟಾಕ್ ಆಪ್ ಇಟ್ಕೊಂಡವರು ಅದನ್ನು ಯೂಸ್ ಮಾಡ್ಬಹುದಾ? ಎಂಬ ಪ್ರಶ್ನೆ ನಿದ್ದೆ ಕೆಡಿಸಿದೆ.

ಹಾಗಾದರೆ ಟಿಕ್ ಟಾಕ್ ಬ್ಯಾನ್ ಆದ್ರೂ ಯೂಸ್ ಮಾಡಬಹುದಾ..?

ಅಂದಹಾಗೇ ಈ ಹಿಂದೆಯು ಕೇಂದ್ರ ಸರ್ಕಾರ ಹಲವು ಚೀನಿ ಆಪ್ ಗಳನ್ನು ಬ್ಯಾನ್ ಮಾಡಿತ್ತು. ಅದರಲ್ಲಿ ಟಿಕ್ ಟಾಕ್ ಕೂಡ ಇತ್ತು. ಆಗ ಹೊಸ ಯೂಸರ್ಗಳಿಗೆ ಆಪ್ ಸಿಗುತ್ತಿರಲಿಲ್ಲ. ಅದಾಗಲೇ ಬಳಸುತ್ತಿದ್ದ ಗ್ರಾಹಕರಿಗೆ ಯಾವುದೆ ತೊಂದರೆ ಆಗಿರಲಿಲ್ಲ. ಆದ್ದರಿಂದ ಈ ಬಾರಿಯೂ ಅದೇ ರೀತಿ ಆಗಬಹುದಾ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.

ಆದರೆ ಈ ಸಲ ಯಾವ ರೀತಿಯ ನಿಷೇಧ ಹೇರಲಾಗುತ್ತಿದೆ ಅನ್ನುವುದು ಇನ್ನು ಸ್ಪಷ್ಟವಾಗಿಲ್ಲ. ಹಿಂದಿನ ಸಲದಂತೆ ಬ್ಯಾನ್ ಆದರೆ, ಟಿಕ್ ಟಾಕ್ ಬಳಸುತ್ತಿರುವ ಗ್ರಾಹಕರು ಅದರ ಬಳಕೆಯನ್ನು ಮುಂದುವರಿಸಲು ಸಾಧ್ಯವಾಗುತ್ತದೆ. ಆದರೆ ಹೊಸಬರು ಟಿಕ್ ಟಾಕ್ ನ್ನ ಡೌನ್ ಲೌಡ್ ಮಾಡಿಕೊಳ್ಳಲು ಸಾಧ್ಯವಾಗದು.

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This