Chinese loan app case: ಬೆಂಗಳೂರಿನ ಪೇಟಿಎಂ, ಕ್ಯಾಶ್‌ಫ್ರೀ, ರೇಜರ್‌ಪೇ ಕಚೇರಿಗಳ ಮೇಲೆ ಇಡಿ ದಾಳಿ…
ಚೀನಾ ಪ್ರಜೆಗಳ ನಿಯಂತ್ರಣದಲ್ಲಿರುವ ಆನ್ ಪೇಮೆಂಟ್ ಅಪ್ಲಿಕೇಶನ್ ಮತ್ತು ಲೋನ್ ಆಪ್ ಗಳ ಮೇಲೆ ಜಾರಿ ನಿರ್ದೇಶನಾಲಯ(ED) ದಾಳಿ ನಡೆಸಿದೆ. ರೇಜರ್‌ಪೇ ಪ್ರೈವೇಟ್ ಲಿಮಿಟೆಡ್, ಕ್ಯಾಶ್‌ಫ್ರೀ ಪೇಮೆಂಟ್, ಪೇಟಿಎಂ ಪೇಮೆಂಟ್ ಸರ್ವೀಸ್ ಲಿಮಿಟೆಡ್ ಕಂಪನಿಗಳ ಮೇಲೆ ಮನಿ ಲಾಂಡರಿಂಗ್ ತಡೆಗಟ್ಟುವಿಕೆ ಕಾಯ್ದೆಯ ಅಡಿಯಲ್ಲಿ ಬೆಂಗಳೂರಿನ ಘಟಕಗಳ ಮೇಲೆ ದಾಳಿ ಮಾಡಲಾಗಿದೆ.
“ಚೀನೀ ಲೋನ್ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಸ್ಥಳಗಳಲ್ಲಿ ಶೋಧ ನಡೆಸಲಾಸಗಿದ್ದು, 17 ಕೋಟಿ ರೂಪಾಯಿಗಳನ್ನ ವಶಪಡಿಸಿಕೊಳ್ಳಲಾಗಿದೆ. ಚೀನಾದ ಪ್ರಜೆಗಳ ನಿಯಂತ್ರಣದಲ್ಲಿರುವ ಮರ್ಚೆಂಟ್ ಐಡಿ, ಬ್ಯಾಂಕ್ ಖಾತೆ ಹೊಂದಿರುವ ಘಟಕಗಳ ಮೇಲೆ ದಾಳಿ ಮಾಡಲಾಗಿದೆ ಎಂದು ಇಡಿ ಶನಿವಾರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಸಣ್ಣ ಮೊತ್ತದ ಸಾಲವನ್ನು ಪಡೆದ ಸಾರ್ವಜನಿಕರಿಂದ ಸುಲಿಗೆ ಮತ್ತು ಕಿರುಕುಳ ನೀಡಲಾಗುತ್ತಿತ್ತು. ಈ ಕುರಿತು ಹಲವು ಆಪ್ಲಿಕೇಷನ್ ಗಳ ಮೇಲೆ ಬೆಂಗಳೂರಿನ ಸೈಬರ್ ಕ್ರೈಮ್ ಠಾಣೆ ದಾಖಲಿಸಿದ 18 ಎಫ್‌ಐಆರ್‌ಗಳನ್ನು ಆಧರಿಸಿದೆ ದಾಳಿ ನಡೆಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.