Chinese spy balloon : ಚೀನಾದ ಬೇಹುಗಾರಿಕೆ ಬಲೂನ್ ಹೊಡೆದುರುಳಿಸಿದ ಅಮೆರಿಕಾ…
ಅಮೇರಿಕಾದ ಅಣ್ವಸ್ತ್ರ ಪ್ರದೇಶ ಸೇರಿದಂತೆ ಸೂಕ್ಷ್ಮ ಪ್ರದೇಶಳ ಮೇಲೆ ಬೇಹುಗಾರಿಕೆ ನಡೆಸುತ್ತಿದ್ದ ಚೀನಾದ ಸ್ಪೈ ಬಲೂನ್ ಅನ್ನ ಅಮೆರಿಕಾ ಹೊಡೆದುರುಳಿಸಿದೆ. ಈ ಬಲೂನ್ ಮೂರು ಬಸ್ ಗಳ ಗಾತ್ರವನ್ನ ಹೊಂದಿತ್ತು.
ಯುಎಸ್ ಅಧ್ಯಕ್ಷ ಜೋ ಬಿಡೆನ್ ಅವರ ಆದೇಶದ ಮೇರೆಗೆ ಸ್ಪೈ ಬಲೂನ್ ನ್ನು ಯುದ್ಧ ವಿಮಾನಗಳ ಸಹಾಯದಿಂದ ಅಟ್ಲಾಂಟಿಕ್ ಸಾಗರದ ಮೇಲ್ಮೈಗೆ ತಂದು ಹೊಡೆದುರುಳಿಸಲಾಯಿತು ಎಂದು ಅಮೆರಿಕದ ರಕ್ಷಣಾ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.
JUST IN – The closest and clearest video of the moment China spy balloon got shot pic.twitter.com/05bBH0UCOT
— Insider Paper (@TheInsiderPaper) February 4, 2023
ಪತ್ತೇದಾರಿ ಬಲೂನ್ ಸ್ಫೋಟಿಸಲು ಎಫ್-22 ಫೈಟರ್ ಜೆಟ್ ಬಳಸಲಾಗಿದೆ. ಬಲೂನ್ ಅವಶೇಷಗಳು ಮಾರ್ಟಲ್ ಬೀಚ್‌ನ ದಕ್ಷಿಣ ಕ್ಯಾಲಿಫೋರ್ನಿಯಾ ಪ್ರದೇಶದಲ್ಲಿ ಬಿದ್ದಿದ್ದು ಅವುಗಳನ್ನ ಸೇನಾ ಸಿಬ್ಬಂದಿ ಸಂಗ್ರಹಿಸುತ್ತಿದ್ದಾರೆ.
ಸ್ಪೈ ಬಲೂನ್ ಹೊಡೆದುರುಳಿಸಿರುವ ಬಗ್ಗೆ ಚೀನಾ ತೀವ್ರವಾಗಿ ಪ್ರತಿಕ್ರಿಯಿಸಿ ಅಮೆರಿಕಕ್ಕೆ ಪ್ರಬಲ ಎಚ್ಚರಿಕೆ ನೀಡಿದೆ. ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಕುರಿತು ಹೇಳಿಕೆಯನ್ನ ನೀಡಿದೆ. ಶಾಂತಿಯುತವಾಗಿ ಸಮಸ್ಯೆ ಬಗೆಹರಿಸುವಂತೆ ಅಮೆರಿಕಕ್ಕೆ ಮನವಿ ಮಾಡಿದ್ದರೂ ನಮ್ಮ ಮಾತನ್ನು ಪರಿಗಣಿಸದೆ ಸ್ಪೈ ಬಲೂನ್ ಹೊಡೆದುರುಳಿಸುವುದು ಸರಿಯಾದ ನಿರ್ಧಾರವಲ್ಲ ಎಂದು ಚೀನಾ ಹೇಳಿದೆ. ಈ ಮೂಲಕ ಅಮೆರಿಕ ಅಂತಾರಾಷ್ಟ್ರೀಯ ಮಾನದಂಡಗಳನ್ನು ಉಲ್ಲಂಘಿಸಿ ಪ್ರತಿಭಟನೆ ನಡೆಸಿದೆ ಎಂದು ಚೀನಾ ಆರೋಪಿಸಿದೆ.
Chinese spy balloon: America shot down the Chinese spy balloon…








