ಎಲ್ಎಸಿಯ ಉದ್ದಕ್ಕೂ ಪಂಜಾಬಿ ಹಾಡುಗಳನ್ನು ನುಡಿಸುತ್ತಿರುವ ಚೀನಾ ಪಡೆ
ಲಡಾಖ್, ಸೆಪ್ಟೆಂಬರ್18: ಚೀನಾದ ಪಡೆಗಳು ಎಲ್ಎಸಿಯ ಉದ್ದಕ್ಕೂ , ಫಿಂಗರ್ 4 ನಲ್ಲಿ ಪಂಜಾಬಿ ಹಾಡುಗಳನ್ನು ಧ್ವನಿವರ್ಧಕಗಳ ಮೂಲಕ ನುಡಿಸುತ್ತಿದ್ದಾರೆ. ಅಲ್ಲಿರುವ ಎತ್ತರದ ಪ್ರದೇಶದಲ್ಲಿ ಕಾವಲು ಕಾಯುತ್ತಿರುವ ಭಾರತೀಯ ಸೈನಿಕರು ಚೀನಾ ಪಡೆಗಳ ಮೇಲೆ ಎಚ್ಚರಿಕೆಯ ಕಣ್ಗಾವಲು ವಹಿಸಿದ್ದಾರೆ ಎಂದು ಎಎನ್ಐ ತಿಳಿಸಿದೆ.
ಚೀನಾದ ಸೈನ್ಯದ ಅಸಾಮಾನ್ಯ ನಡೆ ಭಾರತೀಯ ಯೋಧರ ಗಮನವನ್ನು ಬೇರೆಡೆಗೆ ತಿರುಗಿಸಲು ಅಥವಾ ಒತ್ತಡದಲ್ಲಿರುವ ಚೀನಾ ಪಡೆಗಳು ಸ್ವಲ್ಪ ಮಟ್ಟಿಗೆ ಉದ್ವೇಗವನ್ನು ಕಡಿಮೆ ಮಾಡಲು ಈ ರೀತಿ ಮಾಡಿರಬಹುದು ಎಂದು ವರದಿ ಹೇಳಿದೆ.
ಪ್ರಾಸಂಗಿಕವಾಗಿ, ಇತ್ತೀಚೆಗೆ ಫಿಂಗರ್ 4 ನಲ್ಲಿ ಎರಡು ಬದಿಗಳ ನಡುವೆ 100 ಕ್ಕೂ ಹೆಚ್ಚು ಸುತ್ತು ಗಾಳಿಯಲ್ಲಿ ಗುಂಡುಗಳನ್ನು ಹಾರಿಸಲಾಗಿದೆ ಎಂದು ವರದಿಯಾಗಿದೆ, ಇದು ಎಲ್ಎಸಿಯ ಉದ್ದಕ್ಕೂ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ.