Megastarkalyanram ಟ್ಯಾಗ್ ಗೆ ಕೆರಳಿದ ಚಿರು ಅಭಿಮಾನಿಗಳು…
ತೆಲುಗು ನಟ ನಂದಮುರಿ ಕಲ್ಯಾಣ ರಾಮ್ ಅಭಿನಯದ ಬಿಂಬಿಸಾರ ಚಿತ್ರ ಶುಕ್ರವಾರ ಬಿಡುಗಡೆಯಾಗಿದೆ. ಚಿತ್ರಕ್ಕೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದ್ದು, ಹಲವು ತಿಂಗಳುಗಳಿಂದ ಹಿಟ್ ಗಾಗಿ ಕಾಯುತ್ತಿದ್ದ ಇಂಡಸ್ಟ್ರಿಗೆ ಈ ಚಿತ್ರ ಬೂಸ್ಟ್ ನೀಡಿದೆ. ಆದರೆ ಈ ಚಿತ್ರದ ಯಶಸ್ಸನ್ನ ಆನಂದಿಸುವುದನ್ನ ಬಿಟ್ಟು ಅಭಿಮಾನಿಗಳು ಟ್ವಿಟರ್ ನಲ್ಲಿ ವಾರ್ ನಡೆಸುತ್ತಿದ್ದಾರೆ.
ಟಾಲಿವುಡ್ ಇಂಡಸ್ಟ್ರಿಯ ಮೆಗಾಸ್ಟಾರ್ ಎಂದೇ ಖ್ಯಾತರಾಗಿರುವ ಚಿರಂಜೀವಿ ಅವರ ‘ಆಚಾರ್ಯ’ ಚಿತ್ರವನ್ನ ‘ಬಿಂಬಿಸಾರ’ ಚಿತ್ರಕ್ಕೆ ಹೋಲಿಸಿ ಅವಮಾನಿಸುವ ಸಲುವಾಗಿ ನಂದಮೂರಿ ಕಲ್ಯಾಣ್ ರಾಮ್ ಅವರನ್ನ ‘ಮೆಗಾಸ್ಟಾರ್ ಕಲ್ಯಾಣ್ ರಾಮ್’ ಎಂದು ಕರೆಯುವ ಮೂಲಕ ನಂದಮೂರಿ ಅಭಿಮಾನಿಗಳು ಮೆಗಾ ಅಭಿಮಾನಿಗಳನ್ನ ಕೆರಳಿಸುತ್ತಿದ್ದಾರೆ.
ಇದೀಗ ಟ್ವಿಟ್ಟರ್ ನಲ್ಲಿ MegastarKalyanRam ಎಂಬ ಟ್ಯಾಗ್ ವೈರಲ್ ಆಗುತ್ತಿರುವುದನ್ನ ನೋಡಿದರೆ ನಂದಮೂರಿ ಅಭಿಮಾನಿಗಳು ಮೆಗಾಫ್ಯಾನ್ಸ್ ಗೆ ಎಷ್ಟರ ಮಟ್ಟಿಗೆ ಕೆರಳಿಸುತ್ತಿದ್ದಾರೆ ಎಂಬುದು ಅರ್ಥವಾಗುತ್ತದೆ.
ಅಭಿಮಾನಿಗಳ ಈ ಸಮರ ಇಂದಿನದ್ದಲ್ಲ. ಯಂಗ್ ಟೈಗರ್ ಎನ್ ಟಿಆರ್ ಹಾಗೂ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅಭಿನಯದ RRR ಸಿನಿಮಾ ಬಿಡುಗಡೆಯಾದಾಗೂ ಇದೇ ರೀತಿ ಮೆಗಾ ಹಾಗೂ ನಂದಮೂರಿ ಅಭಿಮಾನಿಗಳ ನಡುವೆ ಫ್ಯಾನ್ಸ್ ವಾರ್ ನಡೆದಿತ್ತು. ‘RRR’ ಚಿತ್ರದಲ್ಲಿ ರಾಮ್ ಚರಣ್‌ಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ನಂದಮೂರಿ ಅಭಿಮಾನಿಗಳು ಹೇಳಿದರೆ, ರಾಮ್ ಚರಣ್ ಮುಂದೆ ಎನ್‌ಟಿಆರ್ ಸೋತಿದ್ದಾರೆ ಎಂದು ಮೆಗಾ ಅಭಿಮಾನಿಗಳು ಹೇಳಿದ್ದರು.
‘ಆಚಾರ್ಯ’ ಸಿನಿಮಾದ ಫಲಿತಾಂಶದ ನಂತರ ನಂದಮೂರಿ ಅಭಿಮಾನಿಗಳು ಮೆಗಾ ಹೀರೋಗಳನ್ನು ಇನ್ನಷ್ಟು ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಮೆಗಾ ಅಭಿಮಾನಿಗಳೇನೂ ಹಿಂದೆ ಬಿದ್ದಿಲ್ಲ, ಮೆಗಾ ಹೀರೋಗಳ ಫ್ಲಾಪ್ ಸಿನಿಮಾಗಳ ಕಲೆಕ್ಷನ್ ನಿಮ್ಮ ಸೂಪರ್ ಹಿಟ್ ಸಿನಿಮಾಗಳ ಕಲೆಕ್ಷನ್ನಷ್ಟೆ ಇರುತ್ತೆ ಎಂದು ಮರು ಟ್ರೋಲ್ ಮಾಡುತ್ತಿದ್ದಾರೆ.
ಚಿತ್ರಕ್ಕೆ ಬಂದ ಹಿಟ್ ಅನ್ನ ಎಂಜಾಯ್ ಮಾಡೋದು ಬಿಟ್ಟು ಈ ರೀತಿ ಕಾಂಟ್ರವರ್ಸಿ ಯಾಕೆ ಎಂದು ಕೆಲವರು ಕಮೆಂಟ್ ಮಾಡುತ್ತಿದ್ದಾರೆ.
ಇನ್ನೊಂದೆಡೆ, ‘ಬಿಂಬಿಸಾರ’ ಚಿತ್ರಕ್ಕೆ ಚಿರು ಅಭಿನಯದ ‘ಜಗದೇಕವೀರುಡು ಅತಿಲೋಕಸುಂದರಿ’ ಮತ್ತು ರಾಮ್ ಚರಣ್ ಅವರ ‘ಮಗಧೀರ’ ಚಿತ್ರಗಳಿಂದ ಸ್ಫೂರ್ತಿ ಪಡೆದಿದ್ದೇನೆ ಎಂದು ಕಲ್ಯಾಣ್ ರಾಮ್ ಹೇಳಿದ್ದರು. ಅಲ್ಲದೆ, ರಾಮ್ ಚರಣ್ ಮತ್ತು ಎನ್‌ಟಿಆರ್ ನಡುವೆ ಉತ್ತಮ ಸ್ನೇಹವಿದೆ ಎನ್ನುವುದು ಹಲವು ಸಂದರ್ಭಗಳಲ್ಲಿ ಕಂಡಿದ್ದೇವೆ. ಇಷ್ಟಾದರೂ ಮೆಗಾ ಹಾಗೂ ನಂದಮೂರಿ ಅಭಿಮಾನಿಗಳ ಪರಸ್ಪರರನ್ನ ಕೆರಳಿಸುವ ಪ್ರವೃತ್ತಿ ನಿಂತಿಲ್ಲ. ಈಗ ಮೆಗಾಸ್ಟಾರ್ ಕಲ್ಯಾಣ್ ರಾಮ್ ಟ್ಯಾಗ್ ವಿವಾದ ಎಷ್ಟರ ಮಟ್ಟಕ್ಕೆ ಹೋಗುತ್ತೆ ಕಾದು ನೋಡಬೇಕು.
ಇದನ್ನೂ ಓದಿ : ದಿ ಗ್ರೇ ಮ್ಯಾನ್ ಸ್ವೀಕ್ವೆಲ್ಸ್ ಮೂಲಕ ಮತ್ತೆ ಬರ್ತಾರೆ ಧನುಷ್….