ದಿ ಗ್ರೇ ಮ್ಯಾನ್ ಸ್ವೀಕ್ವೆಲ್ಸ್ ಮೂಲಕ ಮತ್ತೆ ಬರ್ತಾರೆ ಧನುಷ್….
ವೈವಿಧ್ಯ ಪಾತ್ರಗಳ ಮೂಲಕ ಪ್ರೇಕ್ಷಕರನ್ನ ರಂಜಿಸುವ ನಟ ಧನುಷ್, ಅಸುರನ್ ಆಡು ಕಾಲನ್, ಕರ್ಣನ್ ಚಿತ್ರಗಳು ಆತನ ಅಭಿನಯಕ್ಕೆ ಹಿಡಿದ ಕನ್ನಡಿ. ಒಳ್ಳೆಯ ಪಾತ್ರಗಳು ಸಿಕ್ಕರೆ ಯಾವುದೇ ಭಾಷೆಯಲ್ಲಿ ನಟಿಸಲು ಸೈ.
ಧನುಷ್ ಅವರ ಹಾಲಿವುಡ್ ಚಿತ್ರ ದಿ ಗ್ರೇ ಮ್ಯಾನ್ ಇತ್ತೀಚಿಗೆ ರಿಲೀಸ್ ಆಗಿದ್ದು ನಿಮಗೆ ಗೊತ್ತೆ ಇದೆ. ಈ ಚಿತ್ರದಲ್ಲಿ ರಯಾನ್ ಗೊಸ್ಲಿಂಗ್, ಕ್ರಿಸ್ ಇವಾನ್ಸ್, ಅನಾ ಡಿ. ಅರ್ಮಾನ್, ಜೆಸ್ಸಿಕಾ ಹೆನ್ವಿಕ್, ರೆಜ್-ಜೀನ್ ಪೇಜ್ ಮತ್ತು ಇತರರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ರಿಯಾನ್ ಗ್ಯಾಸ್ಲಿಂಗ್ CIA ಏಜೆಂಟ್ ಸಿಯೆರಾ ಸಿಕ್ಸ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಧನುಷ್ ಕಾಣಿಸಿಕೊಂಡಿದ್ದು ಕಡಿಮೆ ಸಮಯವಾದರೂ ಅವರ ಅಭಿನಯಕ್ಕೆ ಅಭಿಮಾನಿಗಳು ಹಾಗೂ ವಿಮರ್ಶಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರುಸ್ಸೋ ಬ್ರದರ್ಸ್ ಅವರು ‘ದಿ ಗ್ರೇ ಮ್ಯಾನ್’ ನ ಉತ್ತರಾರ್ಧಭಾಗ ಮಾಡುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಸದ್ಯ ಸ್ಕ್ರಿಪ್ಟ್ ಕೆಲಸ ಮುಗಿದಿದೆ. ಸೀಕ್ವೆಲ್ ನಲ್ಲಿ ಧನುಷ್ ನಟಿಸಲಿದ್ದಾರೆ. ಈ ಸಂದೇಶವನ್ನ ಸ್ವತಃ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ.
ದಿ ಗ್ರೇ ಮ್ಯಾನ್’ ಚಿತ್ರವನ್ನ ಆಂಟೋನಿ ರುಸ್ಸೋ ಮತ್ತು ಜೋ ರುಸ್ಸೋ ನಿರ್ದೇಶಿಸಿದ್ದಾರೆ. ನೆಟ್‌ಫ್ಲಿಕ್ಸ್ ಚಿತ್ರಕ್ಕೆ ಬಂಡವಾಳ ಹೂಡಿದೆ. ಈ ಚಿತ್ರ ಜುಲೈ 22 ರಿಂದ OTT ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ತೆಲುಗು, ತಮಿಳು, ಕನ್ನಡ, ಮಲಯಾಳಂ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರ ಲಭ್ಯವಿದೆ.








