Chiranjeevi : ಪುತ್ರಿ ಶ್ರೀಜಾಗೆ ಐಶಾರಾಮಿ ಬಂಗಲೆ ಗಿಫ್ಟ್ ಕೊಟ್ಟ ಮೆಗಾಸ್ಟಾರ್…
ಟಾಲಿವುಡ್ ನ ಮೆಗಾಸ್ಟಾರ್ ಚಿರಂಜೀವಿ ಅವರ ಪುತ್ರಿ ಶ್ರೀಜಾ ಅವರು ಆಗಾಗ ತಮ್ಮ ಮದುವೆ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ.. ಈಗಾಗಲೇ 2 ಮದುವೆಯಾಗಿ ಡಿವೋರ್ಸ್ ಪಡೆದಿರುವ ಶ್ರೀಜಾ ಅವರ 3 ನೇ ಮದುವೆಗೆ ಮೆಗಾ ಕುಟುಂಬದಲ್ಲಿ ಸದ್ದಿಲ್ಲದೇ ತಯಾರಿ ನಡೆಯುತ್ತಿದೆ ಎಂಬ ವದಂತಿಗಳು ಹರಿದಾಡುತ್ತಿರುವ ಹೊತ್ತಲ್ಲೇ ಚಿರಂಜೀವಿ ಅವರು ತಮ್ಮ ಮಗಳಿಗೆ ದುಬಾರಿ ಗಿಫ್ಟ್ ಒಂದನ್ನ ನೀಡಿದ್ದಾರೆ..
ಕಲ್ಯಾಣ್ ದೇವ್ ಜೊತೆಗಿನ ಡಿವೋರ್ಸ್ ಬೆನ್ನಲ್ಲೇ ಶ್ರೀಜಾ 3ನೇ ಮದುವೆ ಸುದ್ದಿ ಭಾರಿ ಸದ್ದು ಮಾಡ್ತಿದೆ. ಪುತ್ರಿ ಶ್ರೀಜಾಗೆ ದುಬಾರಿ ಬಂಗಲೆಯನ್ನೇ ಚಿರಂಜೀವಿ ಅವರು ಉಡುಗೊರೆಯಾಗಿ ನೀಡಿದ್ದಾರೆ. ಶ್ರೀಜಾಗೆ ಬರೋಬ್ಬರಿ 35 ಕೋಟಿ ಮೌಲ್ಯದ ಬಂಗಲೆಯನ್ನು ಕೊಟ್ಟಿದ್ದಾರೆ. ಹೈದರಾಬಾದ್ ನಲ್ಲಿ ಎಎಲ್ಎ ಕಾಲೋನಿಯಲ್ಲಿ ಐಷರಾಮಿ ಬಂಗಲೆಯನ್ನು ಖರೀದಿಸಿ, ಮಗಳಿಗೆ ನೀಡಿದ್ದಾರೆ.
ಇನ್ನೂ ಬಂಗಲೆ ಉಡುಗೊರೆಯಾಗಿ ನೀಡಿದ ಬೆನ್ನಲ್ಲೇ ಶ್ರೀಜಾ ಮದುವೆ ವದಂತಿ ಇನ್ನಷ್ಟು ಬಿರುಸು ಪಡೆದುಕೊಂಡಿದೆ..
Chiranjeevi gifts luxurious bunglow to daughter shreeja