Chitradurga | ಬಸ್ ಅಪಘಾತ – ಬಸವಪ್ರಭು ಸ್ವಾಮೀಜಿ ಅವರಿಗೆ ಗಾಯ
ಚಿತ್ರದುರ್ಗ : ಇಳಕಲ್ ಬಳಿ ವಿ ಆರ್ ಎಲ್ ಬಸ್ ಅಪಘಾತ ಸಂಭವಿಸಿದ್ದು ಚಿತ್ರದುರ್ಗದ ಗಾಣಿಗ ಗುರುಪೀಠದ ಅಧ್ಯಕ್ಷರಾದ ಬಸವಪ್ರಭು ಸ್ವಾಮೀಜಿಗೆ ಅವರಿಗೆ ತೀವ್ರಸ್ವರೂಪದ ಗಾಯಗಳಾಗಿವೆ.
ಚಿತ್ರದುರ್ಗ ದ ಗಾಣಿಗ ಗುರುಪೀಠದ ಅಧ್ಯಕ್ಷರೂ ಸಮಾಜದ ಗುರುಗಳೂ ಆಗಿರುವ ಶ್ರೀ ಬಸವ ಪ್ರಭುಗಳು ಕಾರ್ಯಕ್ರಮದ ನಿಮಿತ್ತ ಇಳಕಲ್ ಗೆ ತೆರಳಿತ್ತಿದ್ದರು. ಈ ವೇಳೆ ಚಾಲಕನ ಅಜಾಗರೂಕತೆಯಿಂದ ಅಪಘಾತ ಸಂಭವಿಸಿದೆ.

ಪರಿಣಾಮ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹಲವು ಪ್ರಯಾಣಿಕರಿಗೆ ಗಾಯಗಳಾಗಿವೆ.
ಇದರಲ್ಲಿ ಸ್ವಾಮೀಜಿಯವರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ.
ಹೆಚ್ಚಿನ ಚಿಕಿತ್ಸೆಗಾಗಿ ಸ್ವಾಮೀಜಿಯವರನ್ನು ಕೂಡಲೇ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಸಮಯದಲ್ಲಿ ಶ್ರೀ ವೇಮನ ಸ್ವಾಮೀಜಿ, ಮುರುಘಾ ಮಠದ ಆಡಳಿತಾಧಿಕಾರಿ ಎಸ್ ಕೆ ಬಸವರಾಜನ್, ಹಾಗೂ ಜಿಪಂ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಇದ್ದರು.








