Chocolate- ಈಗಿನ ಕಾಲದಲ್ಲಿ ಯಾರಿಗೆ ತಾನೆ ಚಾಕೋಲೆಟ್ ಎಂದರೆ ಇಷ್ಟ ಇಲ್ಲಾ ಹೇಳಿ..? ಎಲ್ಲರೂ ಚಾಕೋಲೆಟ್ ಪ್ರಿಯರೆ. ಆದರೆ ಈ ಚಾಕೋಲೆಟ್ ಅತಿಯಾದರೆ ಮಾರಕವು ಹೌದು, ಇದನ್ನು ಸೇವಿಸುವಾಗಲು ಗಮನವಿಟ್ಟು ಸೇವಿಸಬೇಕೆ ಯಾಕೆ ಗೊತ್ತಾ..? ಇದಕ್ಕ ಪೂರಕವಾಗಿ ನಡೆದ ಒಂದು ಘಟನೆ ಇಲ್ಲಿದೆ . ನಾವು ಮಕ್ಕಳಿಗೆ ಚಾಕಲೇಟ ಏನೊ ನೀಡುತ್ತೆವೆ ಆದರೆ ಆ ಚಾಕೋಲೆಟ್ ಯಾವ ರೀತಿ ಸೇವಿಸುತ್ತಾರೆ ಎಂದು ಹಿರಿಯರು ಸ್ವಲ್ಪ ಗಮನ ಹರಿಸಬೇಕಾಗುತ್ತದೆ .
ತೆಲಂಗಾಣದ ವಾರಂಗಲ್ನಲ್ಲಿ ಸಂದೀಪ್ ಸಿಂಗ್ ಎಂಬ 9 ವರ್ಷದ ಬಾಲಕನೊಬ್ಬ ಚಾಕ್ಲೇಟ್ ತಿನ್ನುವಾಗ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
ಚಾಕ್ಲೇಟ್ ತಿನ್ನುತ್ತಿರುವಾಗ ಬಾಲಕನ ಗಂಟಲಿನಲ್ಲಿ ಚಾಕ್ಲೇಟ್ ಸಿಕ್ಕಿಹಾಕಿ ಕೊಂಡಿದೆ. ವಿಷಯ ತಿಳಿದನಂತರ ಆತನನ್ನು ವಾರಂಗಲ್ನ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆಸ್ಪತ್ರೆಗೆ ದಾಖಲಿಸಿದಾಗ ಪರೀಕ್ಷಿಸಿದ ವೈದ್ಯರು ಬಾಲಕ ಉಸಿರುಗಟ್ಟಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ನಗರದ ಶಾರದಾ ಪ್ರೌಢಶಾಲೆಯ ವಿದ್ಯಾರ್ಥಿ ಸಂದೀಪ್ ಸಿಂಗ್ 2ನೇ ತರಗತಿಯಲ್ಲಿ ಓದುತ್ತಿದ್ದ , ಅವರ ತಂದೆ ಆಸ್ಟ್ರೇಲಿಯಾದಿಂದ ಚಾಕ್ಲೇಟ್ ತಂದಿದ್ದು ಕೊಟ್ಟಿದ್ದರು. ಆ ಚಾಕ್ಲೇಟ್ ಅನ್ನು ಬಾಲಕ ಶಾಲೆಗೆ ಶಾಲೆಗೆ ತಗೆದುಕೊಂಡು ಹೊಗಿದ್ದ ಶನಿವಾರ ಬೆಳಗ್ಗೆ 10 ಗಂಟೆಯ ವೇಳೆಗೆ ಆತ ಚಾಕ್ಲೇಟ್ ಅನ್ನು ತಿನ್ನುತ್ತಿದ್ದ ವೇಳೆ ಉಸಿರುಗಟ್ಟಿದೆ.
ಬಾಲಕನನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಶಾಲೆಯ ಆಡಳಿತ ಮಂಡಳಿ ಬಾಲಕನ ಪೋಷಕರಿಗೆ ಮಾಹಿತಿ ನೀಡಿದ್ದಾರೆ.
ಬಾಲಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ. ಆದರೆ ಈ ಘಟನೆಯ ಬಗ್ಗೆ ಬಾಲಕನ ಪೋಷಕರು ಯಾವುದೇ ದೂರನ್ನು ನೀಡಿಲ್ಲ, ಶಾಲಾ ಮಂಡಳಿಯು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.