Chris Gayle | ಈ ತಂಡಕ್ಕೆ ಹೆಡ್ ಕೋಚ್ ಆಗಲಿದ್ದಾರೆ ಕ್ರಿಸ್ ಗೇಲ್
ಕಿಂಗ್ ಆಫ್ ಕೆರಿಬಿಯನ್ಸ್.. ಜಮೈಕಾದ ಸೂಪರ್ ಸ್ಟಾರ್, ಕ್ರಿಕೆಟ್ ನ ಯುನಿವರ್ಸಲ್ ಬಾಸ್ ಒನ್ ಅಂಡ್ ಓನ್ಲಿ ಕ್ರಿಸ್ ಗೇಲ್, ಟಿ 20 ಕ್ರಿಕೆಟ್ ನಲ್ಲಿ ಮಾಡಿರುವ ಸಾಧನೆ ನಃ ಭೂತೋ ನಃ ಭವಿಷ್ಯತಿ. chris-gayle- karachi-kings-head-coach saaksha tv
ಕ್ರಿಸ್ ಗೇಲ್ ವೆಸ್ಟ್ ಇಂಡೀಸ್ ತಂಡದ ಆಟಗಾರನಾಗಿದ್ರೂ ಸದ್ದು ಮಾಡಿದ್ದು ವಿಶ್ವದ ಮೂಲೇ ಮೂಲೆಯಲ್ಲಿ ನಡೆಯೋ ಟಿ-ಟ್ವೆಂಟಿ ಲೀಗ್ ಟೂರ್ನಿಗಳಲ್ಲಿ.
ಸುಮಾರು 20ಕ್ಕೂ ಹೆಚ್ಚು ಫ್ರಾಂಚೈಸಿಗಳ ಪರ ಆಡಿರುವ ಕ್ರಿಸ್ ಗೇಲ್ ಟಿ-ಟ್ವಿಂಟಿ ಕ್ರಿಕೆಟ್ ನ ಯುನಿವರ್ಸಲ್ ಬಾಸ್ ಅಂತಾನೇ ಖ್ಯಾತಿ ಪಡೆದುಕೊಂಡಿದ್ದಾರೆ.
ಕ್ರಿಸ್ ಗೇಲ್ ಕ್ರೀಸ್ ನಲ್ಲಿದ್ರೆ ಬೌಲರ್ಗಳ ಎದೆಬಡಿತ ಜೋರಾಗುತ್ತೆ. ಗೇಲ್ ಬ್ಯಾಟ್ ಹಿಡಿದು ಘರ್ಜಿಸಲು ನಿಂತರೇ ಸ್ಕೋರ್ ಬೋರ್ಡ್ ಗೆ ಸುಸ್ತಾಗುತ್ತೆ.
ಮೈದಾನದಲ್ಲಿ ಕ್ರಿಸ್ ಗುಡುಗಿದ್ರೆ ಅಕ್ಷರಶಃ ರನ್ ಸುನಾಮಿ ಬರುತ್ತೆ. ಹೀಗಾಗಿಯೇ ಕ್ರಿಸ್ ಯಾವುದೇ ತಂಡದಲ್ಲಿದ್ದರೂ ಆ ತಂಡದ ತೂಕ ತುಸು ಹೆಚ್ಚಾಗಿರುತ್ತೆ.
ಅಂದಹಾಗೆ ಈಗ ಕ್ರಿಸ್ ಗೇಲ್ ಕ್ರಿಕೆಟ್ ನಿಂದ ದೂರ ಇದ್ದಾರೆ. ಹೀಗಾಗಿ ಕ್ರಿಸ್ ಗೇಲ್ ಹೆಡ್ ಕೋಚ್ ಅವತಾರ ಎತ್ತಲು ರೆಡಿಯಾಗಿದ್ದಾರೆ.
ಈ ಬಗ್ಗೆ ಸ್ವತಃ ಕ್ರಿಸ್ ಗೇಲ್ ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ್ದಾರೆ. ನಾನು ಮುಂದಿನ ಸೀಸನ್ ಯಿಂದ ಹೆಡ್ ಕೋಚ್ ಆಗಲಿದ್ದೇನೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದಿದ್ದಾರೆ.
ಕ್ರಿಸ್ ಕೋಚ್ ಆಗುತ್ತಿರೋದು ಪಾಕಿಸ್ತಾನ್ ಸೂಪರ್ ಲೀಗ್ ನಲ್ಲಿ. ಅದು ಕೂಡ ಬಾಬರ್ ಅಜಂ ನೇತೃತ್ವದ ಕರಾಚಿ ಕಿಂಗ್ಸ್ ತಂಡಕ್ಕೆ.
ಹೌದು..! ಕರಾಚಿ ತಂಡ ಸದ್ಯ ಕಳಪೆ ಪಾರ್ಮ್ ನಲ್ಲಿದೆ. ಆಡಿದ 9 ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಗೆಲುವು ಸಾಧಿಸಿದೆ. ಈ ತಂಡಕ್ಕೆ ಬಾಬರ್ ಅಜಂ ನಾಯಕರಾಗಿದ್ದಾರೆ.
ಈ ತಂಡಕ್ಕೆ ನಾನು ಮುಂದಿನ ಸೀಸನ್ ನಿಂದ ಪ್ರಧಾನ ಕೋಚ್ ಆಗಲಿದ್ದೇನೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಗೇಲ್ ಟ್ವೀಟ್ ಮಾಡಿದ್ದಾರೆ.
ಇನ್ನು ಐಪಿಎಲ್ ಗೆ ಗುಡ್ ಬೈ ಹೇಳಿರುವ ಗೇಲ್ 79 ಅಂತರಾಷ್ಟ್ರೀಯ ಟಿ 20 ಪಂದ್ಯಗಳಲ್ಲಿ 1899 ರನ್ ಗಳಿಸಿದ್ದಾರೆ.
ಒಟ್ಟಾರೆ ಟಿ 20 ಕೆರಿಯರ್ ನಲ್ಲಿ 445 ಪಂದ್ಯಗಳನ್ನಾಡಿರುವ ಗೇಲ್, 14,321 ರನ್ ಗಳಿಸಿದ್ದಾರೆ. 2013ರ ಐಪಿಎಲ್ ಸೀಸನ್ ನಲ್ಲಿ 66 ಎಸೆತಗಳಲ್ಲಿ 175 ರನ್ ಗಳಿಸಿ ಗೇಲ್ ವಿಶ್ವ ದಾಖಲೆ ನಿರ್ಮಿಸಿದ್ದರು.








