ಧನ್ಯವಾದ ಭಾರತ.. ಧನ್ಯವಾದ ಪ್ರಧಾನಿ ಮೋದಿ.. ಎದೆತುಂಬಿ ಕೃತಜ್ಞತೆ ಸಲ್ಲಿಸಿದ ಕ್ರಿಕೆಟ್ ದೈತ್ಯ ಕ್ರಿಸ್ ಗೇಲ್
Gayle thanks PM Modi for sending COVID vaccine to Jamaica
ವೆಸ್ಟ್ ಇಂಡೀಸ್ ನ ಕ್ರಿಕೆಟ್ ದಿಗ್ಗಜ ಕ್ರಿಸ್ ಗೇಲ್ ಅವರು ಭಾರತದ ಪ್ರಧಾನಿ ಮತ್ತು ಭಾರತೀಯ ಜನತೆಗೆ ಧನ್ಯವಾದ ಹೇಳಿದ್ದಾರೆ. ಜಮೈಕಾಗೆ ಕೋವಿಡ್ 19 ಲಸಿಕೆ ನೀಡಿರುವುದಕ್ಕೆ ಕ್ರಿಸ್ ಗೇಲ್ ಧನ್ಯವಾದ ತಿಳಿಸಿದ್ದಾರೆ.
ಈ ಹಿಂದೆ ವೆಸ್ಟ್ ಇಂಡೀಸ್ ನ ಮಾಜಿ ಕ್ರಿಕೆಟಿಗರಾದ ವಿವಿ ರಿಚಡ್ರ್ಸನ್, ರಿಚಿ ರಿಚಡ್ರ್ಸನ್, ಜಿಮ್ಮಿ ಆಡಮ್ಸ್, ರಾಮ್ ನರೇಶ್ ಸರವಣ ಹಾಗೂ ವೆಸ್ಟ್ ಇಂಡೀಸ್ ನ ಆಲ್ ರೌಂಡರ್ ಆಂಡ್ರೆ ರಸೇಲ್ ಅವರು ಈಗಾಗಲೇ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ತಿಳಿಸಿದ್ದಾರೆ.
ಮಾರ್ಚ್ ತಿಂಗಳಿನಲ್ಲಿ ಆಂಟಿಗುವಾ ಮತ್ತು ಬಾರ್ಬುಡಾಗೆ ಭಾರತದಿಂದ 1,75,000 ಕೋವಿಡ್ 19 ಲಸಿಕೆಯನ್ನು ನೀಡಲಾಗಿದೆ. ಇದ್ರಲ್ಲಿ ವಾಕ್ಸಿನ್ ಮೈತ್ರಿ ಅಭಿಯಾನದಲ್ಲಿ 40 ಸಾವಿರ ಲಸಿಕೆಗಳನ್ನು ದೇಣಿಗೆ ಮೂಲಕ ವಿತರಿಸಲಾಗಿದೆ. ಕಳೆದ ವಾರ ಜಮೈಕಾಗೂ ಕೋವಿಡ್ ಲಸಿಕೆಯನ್ನು ವಾಕ್ಸಿನ್ ಮೈತ್ರಿ ಅಭಿಯಾನದ ಮೂಲಕ ವಿತರಿಸಲಾಗಿತ್ತು.
ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ಜನತೆ ಹಾಗೂ ಭಾರತ ಸರ್ಕಾರಕ್ಕೆ ಧನ್ಯವಾದಗಳು. ನಿಮ್ಮ ಸಹಾಯಕ್ಕೆ ನಾವು ಅಭಾರಿಯಾಗಿದ್ದೇವೆ. ನಿಮ್ಮನ್ನು ಮುಂದಿನ ದಿನಗಳಲ್ಲಿ ನಾನು ಎದುರು ನೋಡುತ್ತೇನೆ. ಧನ್ಯವಾದ ಎಂದು ಕ್ರಿಸ್ ಗೇಲ್ ಟ್ವಿಟರ್ ನಲ್ಲಿ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ.
@West Indies #ChrisGayle#PM Modi #COVID vaccine #Jamaica #indiangovt #pmnarendramodi #saakshatv