ಪಶ್ಚಿಮ ಬಂಗಾಳ: ಬಾಲಕಿಯೊಬ್ಬಳು ರೀಲ್ಸ್ ಗಾಗಿ ಸ್ಟೈಲ್ ನಿಂದ ಸಿಗರೇಟ್ ಸೇದಿ ತಂದೆಯಿಂದ ತಕ್ಕಶಾಸ್ತಿಗೆ ಒಳಗಾದ ಘಟನೆಯೊಂದು ನಡೆದಿದೆ.
ಬಾಲಕಿ ರಸ್ತೆಯಲ್ಲಿ ಸ್ಟೈಲ್ ಆಗಿ ಸಿಗರೇಟ್ ಸೇದಿ ರೀಲ್ಸ್ ಮಾಡಿ ಅಪ್ಲೋಡ್ ಮಾಡಿದ್ದಾಳೆ. ಈ ವಿಡಿಯೋ ಲಕ್ಷಾಂತರ ವೀಕ್ಷಣೆ ಮಾಡಿದ್ದಾರೆ. ಈ ಸುದ್ದಿ ತಂದೆಗೆ ತಿಳಿಯುತ್ತಿದ್ದಂತೆ ಮಗಳನ್ನು ಬೆಲ್ಟ್ ನಿಂದ ಹೊಡೆದಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಈ ಘಟನೆ ನಡೆದಿರುವುದಾಗಿ ವರದಿಯಾಗಿದೆ. ಸದ್ಯ ಹುಡುಗಿಗೆ ಮನೆಯಲ್ಲಿ ಭರ್ಜರಿಯಾಗೇ ಏಟು ಬಿದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದ ಪ್ರಾರಂಭದಲ್ಲಿ ಹುಡುಗಿ ಮಾಸ್ ಲುಕ್ನಲ್ಲಿ ಸಿಗರೇಟ್ ಸೇದುತ್ತಾ, ಹೊಗೆ ಬಿಡುತ್ತಾ ರಸ್ತೆಯಲ್ಲಿ ನಡೆದುಕೊಂಡು ಹೋಗಿದ್ದಾಳೆ. ಆದರೆ, ವಿಡಿಯೋದ ಅಂತ್ಯದಲ್ಲಿ ಅಪ್ಪನ ಬೆಲ್ಟ್ ನಿಂದ ಏಟು ತಡೆಯಲಾರದೆ ಕಿರುಚಾಡುವುದು ಸೆರೆಯಾಗಿದೆ.
ಇದನ್ನು @times_trending ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ವೈರ್ ಆಗುತ್ತಿದೆ.