ಚಿಕ್ಕಮಗಳೂರು : ಮಲೆನಾಡಿನಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ಚಾರ್ಮಾಡಿ ಘಾಟ್ ನಲ್ಲಿ ಮತ್ತೆ ಭೂ ಕುಸಿತವಾಗಿದೆ. ಈಗಾಗಲೇ ಮೂರು ಕಡೆಗಳಲ್ಲಿ ಆಗಿದ್ದ ಭೂ ಕುಸಿತ ಪ್ರದೇಶದಲ್ಲಿ ಮಣ್ಣು ತೆರವು ಕಾರ್ಯಾಚರಣೆ ಪ್ರಗತಿಯಲ್ಲಿರುವಾಗಲೇ ಮತ್ತೊಂದು ಕಡೆ ಭೂ ಕುಸಿತವಾಗಿದ್ದು, ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಜಿಲ್ಲಾಡಳಿತ ಹರಸಾಹಸ ಪಡುತ್ತಿದೆ. ಚಾರ್ಮಾಡಿ ಘಾಟ್ ನಲ್ಲಿ ಗುಡ್ಡ ಕುಸಿತದಿಂದಾಗಿ ದಕ್ಷಿಣ ಕನ್ನಡ ಚಿಕ್ಕಮಗಳೂರು ಜಿಲ್ಲೆಯ ಸಂಪರ್ಕ ರಸ್ತೆ ಸಂಚಾರಕ್ಕೆ ಬಂದ್ ಆಗಿದೆ. ಚಾರ್ಮಾಡಿ ಘಾಟ್ ಅಲೇಖಾನ್ ಬಳಿ ಗುಡ್ಡ ಕುಸಿದಿದ್ದು, ಮತ್ತೆ ಘಾಟ್ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಆಗಿದೆ. ಇತ್ತ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿಗಳು ಮಣ್ಣು ತೆರೆವು ಕಾರ್ಯದಲ್ಲಿ ತೊಡಗಿದ್ದಾರೆ. ಮಲೆನಾಡಲ್ಲಿ ಈಗಾಗಲೇ ಮಹಾಮಳೆಯಿಂದಾಗಿ ಪ್ರವಾಹದ ಆತಂಕ ಎದುರಾಗಿದೆ. ಇದರ ನಡುವೆ ಈಗಾಗಲೇ ಜಿಲ್ಲೆಯಲ್ಲಿ ವರುಣನ ಮುನಿಸಿನಿಂದ ಸಾಕಷ್ಟು ಅನಾಹುತಗಳು ಸಂಭವಿಸಿದ್ದು, ಹೀಗೆ ವರುಣ ನರ್ತನ ಮುಂದುವರೆದರೆ ಭಾರೀ ಪ್ರಮಾಣದ ಅಪಾಯಗಳು ಕಟ್ಟಿಟ್ಟ ಬುತ್ತಿಯೆನಿಸುವಂತಾಗಿದೆ. ಮತ್ತೆ ಕಳೆದ ಬಾರಿಯ ಪ್ರವಾಹದ ಭೀಕರತೆ ಮರುಕಳಿಸುವ ಸಾಧ್ಯತೆಯಿದ್ದು, ಮಳೆ ಅಬ್ಬರಕ್ಕೆ ಮಲೆನಾಡಡಿಗರು ಬೆಚ್ಚಿಬಿದ್ದಿದ್ದಾರೆ.
ದೀಪಾರಾಧನೆಯ ರಹಸ್ಯ: ಯಾವ ಎಣ್ಣೆ, ಎಷ್ಟು ಬತ್ತಿ ಹಚ್ಚಿದರೆ ಏನು ಫಲ?
1"ಇಪ್ಪೆ ಎಣ್ಣೆ"ಯು ದೇವರಿಗೆ ತುಂಬಾ ತುಂಬಾ ಶ್ರೇಷ್ಠ.. ಇದರಿಂದ ಮನೆಯಲ್ಲಿ ದುಃಖ, ದಾರಿದ್ರ್ಯ, ಬಡತನ, ಧನದರಿದ್ರ , ಅನ್ನದರಿದ್ರ, ನಿತ್ಯದರಿದ್ರ, ಹಾಗೂ ಸಾಲದ ಭಾದೆ ನಿವಾರಣೆಯಾಗುತ್ತದೆ .....








