ಥಿಯೇಟರ್ ಗಳಲ್ಲಿ 50% ಸೀಟಿಂಗ್ : ಶನಿವಾರ, ಭಾನುವಾರ ಸಂಪೂರ್ಣ ಬಂದ್
ಮತ್ತೊಮ್ಮೆ ದೇಶಕ್ಕೆ ಮಹಾಮಾರಿಯ ಕಂಟವೆದುರಾಗಿದೆ.. ಕೋವಿಡ್ 3 ನೇ ಅಲೆ ಜೊತೆಗೆ ಒಮಿಕ್ರಾನ್ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗ್ತಲೇ ಇದೆ.. ಹೀಗಿರೋವಾಗ್ಲೇ ಮತ್ತೆ ಲಾಕ್ ಡೌನ್ ಮಾಡಲಾಗುತ್ತದೆ ಎನ್ನಲಾಗ್ತಿದೆ.. ಜೊತೆಗೆ ನೈಟ್ ಕರ್ಫ್ಯೂ , ವೀಕೆಂಡ್ ಕರ್ಫ್ಯೂಗಳು ಸಹ ಜಾರಿಯಾಗ್ತಿರೋದು ಗೊತ್ತೇ ಇದೆ..
ಇದೀಪ ನಿರೀಕ್ಷೆ ಮಾಡಿದ್ದಂತೆಯೇ ಥಿಯೇಟರ್ ಗಳಲ್ಲಿ 50 % ಸೀಟಿಂಗ್ ಆದೇಶ ಹೊರಡಿಸಲಾಗಿದೆ.. ಈಗಾಗಲೇ RRR ನಂತಹ ದೊಡ್ಡ ದೊಡ್ಡ ಸಿನಿಮಾಗಳು ರಿಲೀಸ್ ಡೇಟ್ ಗಳನ್ನ ಮುಂದೂಡಿಕೆ ಮಾಡಿವೆ.. ಈ ನಡುವೆ ಕೆಲ ಸಿನಿಮಾಗಳು RRR ಹಿಂದೆ ಸರಿದ ಖುಷಿಯಲ್ಲಿ ರಿಲೀಸ್ ಗೆ ರೆಡಿಯಾಗಿರೋವಾಗಲೇ ಸಿನಿಮಾಮಂದಿರಗಳಲ್ಲಿ 50 % ಸೀಟಿಂಗ್ ವಿಧಿಸಲಾಗಿದೆ.
ಅಷ್ಟೇ ಅಲ್ಲ ಶನಿವಾರ, ಭಾನುವಾರ ಥಿಯೇಟರ್ ಗಳು ಸಂಪೂರ್ಣವಾಗಿ ಬಂದ್ ಆಗಿರಲಿವೆ. ಇದ್ರಿಂದಾಗಿ ಸಿನಿಮಾರಂಗಕ್ಕೆ ಮತ್ತೆ ಆಘಾತ ಎದುರಾಗಿದೆ.. ಇದ್ರಿಂದಾಗಿ ಜನವರಿ 14 ಕ್ಕೆ ರಿಲೀಸ್ ಆಗಬೇಕಿದ್ದ ರಾಧೆ ಶ್ಯಾಮ್ ನಂತಹ ಸಿನಿಮಾಗಳು ಕೂಡ ಪೋಸ್ಟ್ ಪೋನ್ ಮಾಡಲಾಗಿದೆ.. ಇನ್ನೂ ಫೆಬ್ರವರಿಯಲ್ಲಿ ರಿಲೀಸ್ ಆಗಬೇಕಿರುವ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಕೂಡ ಮುಂದೂಡಿಕೆಯಾಗುವ ಸಾಧ್ಯತೆಯಿದೆ..