ಶಾರುಕ್ ಖಾನ್ ದೇಶದವರೆಂಬುದೇ ಈಜಿಪ್ಟ್ ನಲ್ಲಿ ಪ್ರಾಧ್ಯಾಪರಿಗೆ ವರದಾನವಾಯ್ತು..!
ಒಂದು ಕಾಲದಲ್ಲಿ ಬಾಲಿವುಡ್ ನ ಆಳಿದ ಬಾದ್ ಷಾ ಶಾರುಖ್ ಖಾನ್ ಗೆ ಕೇವಲ ಭಾರತದಲ್ಲಿ ಅಷ್ಟೇ ಅಲ್ದೇ , ನೆರೆಯ ಪಾಕಿಸ್ತಾನವೂ ಸೇರಿದಂತೆ ವಿದೇಶಗಳಲ್ಲಿಯೂ ಕೂಡ ಅಭಿಮಾನಿಗಳಿದ್ದಾರೆ.. ಅವರನ್ನ ದೇವರಂತೆ ಆರಾಧಿಸುವ ಫ್ಯಾನ್ಸ್ ಗಳೂ ಇದ್ದಾರೆ..
ಇದೀಗ ಅವರ ಹೆಸರು ಓರ್ವ ಪ್ರಾಧ್ಯಾಪಪಕರಿಗೆ ವರದಾನವಾಗಿ ಸಾಬೀತಾಗಿದೆ.. ಹೌದು ಈ ಸುದ್ದಿ ಈಗ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ..
ಶಾರುಖ್ ಖಾನ್ ಗೆ ವಿದೇಶದಲ್ಲಿ ಎಷ್ಟು ಕ್ರೇಜ್ ಇದೆ ಎಂಬುದಕ್ಕೆ ಅವರ ಹೆಸರಿನ ಪವರೇ ತಿಳಿಸಿದೆ.. ಹೌದು ಈಜಿಪ್ಟ್ನಲ್ಲಿ ಹಣ ಇಲ್ಲದೇ ಹೋದ್ರು ಆಕೆ ಶಾರುಖ್ ಖಾನ್ ಇರುವ ದೇಶದವರು ಅಂದ್ರೆ ಭಾರತೀಯ ಮಹಿಳೆ ಎಂಬ ಕಾರಣಕ್ಕೆ ಉಚಿತವಾಗಿ ಪ್ರಯಾಣಿಸಲು ಟಿಕೆಟ್ ಬುಕ್ ಮಾಡಲಾಗಿದೆ.
ಅಶ್ವಿನಿ ದೇಶಪಾಂಡೆ ಎನ್ನುವ ದೆಹಲಿ ಮೂಲದ ಪ್ರಾಧ್ಯಾಪಕರು ಈಜಿಪ್ಟ್ನಲ್ಲಿ ಪ್ರಯಾಣ ಮಾಡುವ ಸಂದರ್ಭದಲ್ಲಿ, ಟಿಕೆಟ್ ಖರೀದಿಗೆ ಹಣ ವರ್ಗಾವಣೆ ಮಾಡಬೇಕಾಗಿತ್ತು. ಆದರೆ ಹಣ ವರ್ಗಾವಣೆ ಸಾಧ್ಯವಾಗಿಲ್ಲ.. ಆಗ ಅಲ್ಲಿನ ಏಜೆಂಟ್ ಅವರನ್ನು ಭಾರತೀಯ ಮಹಿಳೆ ಎಂದು ಹೇಳುವ ಬದಲಿಗೆ ನೀವೂ SRK (ಶಾರುಖ್ ಖಾನ್) ಇರುವ ದೇಶದವರು ಅಲ್ವಾ , ನಾನು ನಿಮ್ಮನ್ನು ನಂಬುತ್ತೇನೆ. ಈಗ ನೀವು ಹಣ ಕೊಡಬೇಕಾಗಿಲ್ಲ. ಬಳಿಕ ಹಣ ಪಾವತಿಸಿ ಎಂದು ಹೇಳಿದ್ದಾರಂತೆ. ಈ ವಿಚಾರವನ್ನು ಅಶ್ವಿನಿ ದೇಶಪಾಂಡೆ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಚಾರ ನೋಡಿ ಶಾರುಖ್ ಫ್ಯಾನ್ಸ್ ಸಿಕ್ಕಾಪಟ್ಟೆ ಖುಷಿಯಾಗಿದ್ದು , ಈ ಸುದ್ದಿಯನ್ನ ವೈರಲ್ ಮಾಡಿದ್ದಾರೆ..