ಗರ್ಲ್ ಫ್ರೆಂಡ್ ಫೋಟೋ ಶೇರ್ ಮಾಡಿಕೊಂಡ ಬಾಲಿವುಡ್ ನ ಖ್ಯಾತ ಯುವ ನಟ
ಬಾಲಿವುಡ್‌ನ ಖ್ಯಾತ ಯುವ ನಟ ತಮ್ಮ ಗರ್ಲ್ ಫ್ರೆಂಡ್ ಜೊತೆಗಿನ ಫೋಟೋವನ್ನನು ಸೋಷಿಯಲ್ ಮೀಡಿಯಾದಲ್ಲಲಿ ಶೇರ್ ಮಾಡಿಕೊಂಡಿದ್ದಾರೆ. ನಟ ವರುಣ್ ಧವನ್ ತಮ್ಮ ಬಹುಕಾಲದ ಪ್ರೇಯಸಿ ನತಾಶಾ ಜೊತೆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದು, ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗ್ತಾಯಿದೆ.
“ಬಾದ್ ಷಾ” ಅಭಿಮಾನಿಗಳಿಗೆ ಗುಡ್ ನ್ಯೂಸ್..!
ಬಾಲಿವುಡ್ ನ ಬಾದ್ ಷಾ ಶಾರುಖ್ ಖಾನ್ ಎರಡು ವರ್ಷ ಸಿನಿಮಾದಿಂದ ಬ್ರೇಕ್ ಪಡೆದುಕೊಂಡಿದ್ದರು. ಇದರಿಂದ ಬೇಸರಗೊಂಡಿದ್ದ ಶಾರೂಕ್ ಖಾನ್ ಅಭಿಮಾನಿಗಳಿಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದೆ. 2018ರಲ್ಲಿ ಕೊನೆಯದಾಗಿ ಶಾರುಖ್ ಖಾನ್ ‘ಜೀರೋ’ ಸಿನಿಮಾದಲ್ಲಿ ಕಾಣಿಸಿಕೊಮಡಿದ್ರು. ಆದ್ರೆ ಈ ಚಿತ್ರ ಹೀನಾಯ ಸೋಲು ಅನುಭವಿಸುವಂತಾಗಿತ್ತು. ಇದಾದ ಬಳಿಕ ಶಾರೂಕ್ ಸಿನೆಮಾಗಳಿಂದ ಬಿಡುವು ಪಡೆದುಕೊಂಡಿದ್ದರು. ಇದೀಗ ಹೊಸ ಸಿನಿಮಾವೊಂದರಲ್ಲಿ ಶಾರುಖ್ ಖಾನ್ ನಟಿಸುತ್ತಿದ್ದು, ಯಶ್ ರಾಜ್ ಫಿಲಮ್ಸ್ ನಿಂದ ನಿರ್ಮಾಣ ಮಾಡಲಾಗ್ತಾಯಿದೆ. ಅಲ್ಲದೇ ಟೈಟಲ್ ಕೂಡ ಫಿಕ್ಸ್ ಆಗಿದ್ದು, ಚಿತ್ರಕ್ಕೆ ‘ಪಠಾಣ್’ ಎಂದು ಹೆಸರಿಡಲಾಗಿದೆ.
‘ಮಹಾ’ ರಾಜ್ಯಪಾಲರ ಭೇಟಿ ಮಾಡಿದ್ದ ಬಾಲಿವುಡ್ ‘ಕ್ವೀನ್’
ಕಂಗನಾ ರಣಾವತ್ ಮಹಾರಾಷ್ಟ್ರ ರಾಜ್ಯಪಾಲ ಕೋಶಿಯಾರಿ ಅವರನ್ನು ರಾಜ ಭವನದಲ್ಲಿ ಭೇಟಿಯಾಗಿದ್ದಾರೆ. ಮಹಾರಾಷ್ಟ್ರದ ಆಡಳಿತಾರೂಢ ಪಕ್ಷ ಶಿವಸೇನೆಯಿಂದ ತೊಂದರೆಗೆ ಸಿಲುಕಿರುವ ನಟಿ ಕಂಗನಾ ರಣಾವತ್ ಭಾನುವಾರ ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರನ್ನು ಭೇಟಿಯಾಗಿ ತನಗೆ ಆಗಿರುವ ಅನ್ಯಾಯದ ಬಗ್ಗೆ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ಸಹೋದರಿ ರಂಗೋಲಿ ಕೂಡ ಉಪಸ್ಥಿತರಿದ್ದರು.
ರಾಗಿಣಿಗೆ ಹುಬ್ಬಳ್ಳಿ ನಂಟು: `ಕೈ’ ಮುಖಂಡ ಸಿಸಿಬಿ ವಶಕ್ಕೆ..!
ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದು ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಮುಖಂಡನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಹುಬ್ಬಳ್ಳಿಯ ಕಾಂಗ್ರೆಸ್ ಮಖಂಡ ಗಿರೀಶ್ ಗದಿಗೆಪ್ಪಗೌಡರ್ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ನಟಿ ರಾಗಿಣಿ ಜೊತೆಗೆ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಜತೆಗೆ ಈತ ಕಾಂಗ್ರೆಸ್ ಮಾಜಿ ಸಚಿವರೊಬ್ಬರ ಆಪ್ತ ಎನ್ನಲಾಗಿದೆ.
ಸಂಜನಾ ಪರ ಐಎಎಸ್ ಅಧಿಕಾರಿ ಒತ್ತಡ..!
ನಟಿ ಸಂಜನಾ ಗಲ್ರಾನಿಯನ್ನು ವಿಚಾರಣೆಗೆ ಕರೆಯದಂತೆ ಹಾಗೂ ಬಂಧಿಸದಂತೆ ರಾಜ್ಯದ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಸಿಸಿಬಿ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ. ವಿಧಾನಸೌಧದಲ್ಲಿ ಕೆಲಸ ಮಾಡಿದ್ದ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಸಂಜನಾಳನ್ನು ಬಂಧನ ಮಾಡಬಾರದು ಎಂದು ಸಿಸಿಬಿ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರಂತೆ. ಆದರೆ, ಪ್ರಬಲ ಸಾಕ್ಷಿ ಸಿಕ್ಕ ಹಿನ್ನೆಲೆಯಲ್ಲಿ ಸಂಜನಾಳನ್ನು ಬಂಧಿಸಲಾಯಿತು. ಸಂಜನಾ ಬಂಧನದ ನಂತರವೂ ವಿಚಾರಣೆ ನೆಪದಲ್ಲಿ ಕಿರುಕುಳ ಕೊಡದಂತೆ ಒತ್ತಡ ಹೇರಿದ್ದರು ಎನ್ನಲಾಗಿದೆ.








