ಚಪ್ಪಲಿಯಿಂದ ಬಡಿದಾಡಿಕೊಂಡ ಹಾಲಿ-ಮಾಜಿ ಶಾಸಕರು..! Bhimanayak saaksha tv
ಬಳ್ಳಾರಿ : ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಕೈ ಕೈ ಮಿಲಾಯಿಸಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯಕ್ ಹಾಗೂ ಮಾಜಿ ಶಾಸಕ ನೇಮಿರಾಜ್ ನಾಯಕ ನಾಯ್ಕ ನಡುವೆ ಗಲಾಟೆ ನಡೆದಿದೆ.
ನೂರಾರು ಜನರೆದುರು ಕೈಯಲ್ಲಿ ಚಪ್ಪಲಿ ಹಿಡಿದು ಬಡಿದಾಡಿಕೊಂಡಿದ್ದಲ್ಲದೇ, ಏಕವಚನದಲ್ಲಿ ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡಿದ್ದಾರೆ.
ತಮ್ಮನ್ನು ಆರಿಸಿ ಕಳಿಸಿದ ಕ್ಷೇತ್ರದ ಜನರೆದುರಿಗೆ ಶಾಸಕರು ಗದ್ದಲ ಮಾಡಿಕೊಂಡಿದ್ದು, ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಹರಸಾಹಸಪಟ್ಟಿದ್ದಾರೆ.









