Srisailam: ಕನ್ನಡಿಗರು ಮತ್ತು ಶ್ರೀಶೈಲದ ಸ್ಥಳೀಯರ ಮಧ್ಯೆ ಗಲಾಟೆ

1 min read
Srisailam Saaksha Tv

ಕನ್ನಡಿಗರು ಮತ್ತು ಶ್ರೀಶೈಲದ ಸ್ಥಳೀಯರ ಮಧ್ಯೆ ಗಲಾಟೆ

ಶ್ರೀಶೈಲ: ಕನ್ನಡಿಗರು ಮತ್ತು ಶ್ರೀಶೈಲದ ಸ್ಥಳೀಯರ ಮಧ್ಯೆ ಗಲಾಟೆಯಾಗಿ ನೂರಾರು ವಾಹನಗಳು ಜಖಂಗೊಂಡಿದ್ದು, ಓರ್ವನಿಕೆ ಗಂಭೀರ ಗಾಯವಾಗಿರುವ ಘಟನೆ ಆಂದ್ರಪ್ರದೇಶದ ಶ್ರೀಶೈಲದಲ್ಲಿ ನಡೆದಿದೆ.

ಹೊಸ ವರ್ಷ ಯುಗಾದಿ ನಿಮಿತ್ತ ಶ್ರೀಶೈಲದಲ್ಲ, ಶ್ರೀಶೈಲ ಮಲ್ಲಿಕಾರ್ಜುನ ಜಾತ್ರಾಮಹೋತ್ಸವ ಜರಗುತ್ತಲಿದ್ದು, ಈ ನಿಮಿತ್ತ ದೇಶದ ನಾನಾ ಭಾಗದಿಂದ ಭಕ್ತಾದಿಗಳು ಆಗಮಿಸುತ್ತಾರೆ. ಅದರಂತೆ ಕರ್ನಾಟಕದ ಲಕ್ಷಾಂತರ ಭಕ್ತಾದಿಗಳು ತರೆಳುತ್ತಾರೆ. ಮಧ್ಯಾರಾತ್ರಿ ಕ್ಷುಲ್ಲಕ ವಿಚಾರಕ್ಕೆ ಆಂಧ್ರಪ್ರದೇಶದ ಸ್ಥಳೀಯರು ಹಾಗೂ ಕನ್ನಡಿಗರ ಎರಡು ಗುಂಪುಗಳ ನಡುವೆ ಗಲಾಟೆ ಶುರುವಾಗಿದೆ.

Srisailam Saaksha Tv

ಗಲಾಟೆ ತೀರ್ವ ಸ್ವರೂಪ ಪಡೆದುಕೊಂಡು ಸ್ಥಳೀಯರು ಕರ್ನಾಟಕದ ಹಲವಾರು ಗಾಡಿ ಜಖಂಗೊಳಿಸಿದ್ದು, ಗಲಾಟೆಯಲ್ಲಿ ಓರ್ವನಿಗೆ ಗಂಭೀರ ಗಾಯವಾಗಿದ್ದು, ಸುನ್ನಿಪೆಂಟಾ ನಗರ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದ್ಯ ಉದ್ವಿಗ್ನ ಪರಿಸ್ಥಿತಿ ಹಿನ್ನಲೆಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಶ್ರೀಶೈಲದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಶ್ರೀಶೈಲದ ರಸ್ತೆಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಸ್ಥಳೀಯ ಪೊಲೀಸರು ಗಲಭೆ ಹತೋಟಿಗೆ ತರಲು ಹರಸಾಹಸ ಪಟ್ಟಿದ್ದಾರೆ. ಕರ್ನಾಟಕ ಭಕ್ತರು ನ್ಯಾಯಕ್ಕಾಗಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd