ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಖಾಸಗಿ ಶಾಲೆಗಳ ಆಟಾಟೋಪಕ್ಕೆ ಬ್ರೇಕ್ ಹಾಕುವವರೇ ಇಲ್ಲದಂತಾಗಿದೆ. ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳನ್ನು ಇನ್ನೂ ತೆರೆಯಲು ಸರ್ಕಾರ ಅನುಮತಿ ನೀಡಿಲ್ಲ. ಆದರೆ, ಯಲಹಂಕದ ಖಾಸಗಿ ಶಾಲೆಯೊಂದು ಶುಲ್ಕ ವಸೂಲಿ ಮಾಡುತ್ತಿದೆ ಎಂಬುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಯಲಹಂಕ ನ್ಯೂಟೌನ್‍ನಲ್ಲಿರುವ ಕ್ರಿಸಾಲಿಸ್ ಹೈ ಎಂಬ ಖಾಸಗಿ ಶಾಲೆ ಅಡ್ಮಿಶನ್‍ನಿಂದ ಹಿಡಿದು ಎಲ್ಲಾ ರೀತಿಯ ಶುಲ್ಕಗಳನ್ನು ಪೋಷಕರಿಂದ ವಸೂಲಿ ಮಾಡಿದೆ.
ಅದರಲ್ಲಿ ಅಡ್ಮಿಶನ್, ಸ್ಕೂಲ್ ವ್ಯಾನ್ ಫೀ, ಲ್ಯಾಬ್, ಕಂಪ್ಯೂಟರ್, ಸ್ವಿಮ್ಮಿಂಗ್ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ನಡೆಸುತ್ತಿರುವುದಾಗಿ ಎಲ್ಲಾ ಚಟುವಟಿಕೆಗಳಿಗೂ ಪೋಷಕರಿಂದ ಶುಲ್ಕ ವಸೂಲಿ ಮಾಡಿದೆ. ರಾಜ್ಯ ಸರ್ಕಾರ ಅಡ್ಮಿಶನ್ ಸೇರಿದಂತೆ ಬೇರೆ ಬೇರೆ ಶುಲ್ಕಗಳನ್ನು ಬಲವಂತವಾಗಿ ವಸೂಲಿ ಮಾಡದಂತೆ ಆದೇಶ ಮಾಡಿದೆ. ಆದರೆ, ಈ ಶಾಲೆ ಮಾತ್ರ ಸರ್ಕಾರದ ಆದೇಶಗಳನ್ನು ಗಾಳಿಗೆ ತೂರಿ ಫೀ ವಸೂಲಿ ಮಾಡುತ್ತಿದೆ ಎಂಬುದು ಪೋಷಕರ ಆರೋಪವಾಗಿದೆ,
ಈ ನಡುವೆ, ಪೋಷಕರು ಮೊದಲ ಕಂತಿನಲ್ಲಿ ಈ ಎಲ್ಲಾ ಶುಲ್ಕಗಳನ್ನು ಕಟ್ಟಿದ್ದರು. ಆದರೆ ಎರಡನೇ ಕಂತಿನಲ್ಲಿ ಮತ್ತೆ ಎಲ್ಲಾ ಶುಲ್ಕಗಳನ್ನು ಒಮ್ಮೆಲೆ ಕಟ್ಟುವಂತೆ ಶಾಲೆ ಆಡಳಿತ ಮಂಡಳಿ ಪೋಷಕರ ಮೇಲೆ ಒತ್ತಡ ಹಾಕುತ್ತಿದೆಯಂತೆ. ಫೀ ಕಟ್ಟದ ಮಕ್ಕಳಿಗೆ ಆನ್‍ಲೈನ್ ಕ್ಲಾಸ್‍ಗಳನ್ನು ನಿಲ್ಲಿಸಿದೆಯಂತೆ. ಹೀಗಾಗಿ ಶಾಲೆ ವಿರುದ್ಧ ಕ್ರಮಕೈಗೊಳ್ಳುವಂತೆ ಪೋಷಕರು ಶಾಲೆ ವಿರುದ್ಧ ಪ್ರತಿಭಟನೆ ನಡೆಸಿ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಸರ್ಕಾರಿ ನೌಕರಿಯ ಕನಸು ಕಾಣುತ್ತಿರುವವರಿಗೆ ಗುಡ್ ನ್ಯೂಸ್ ಕಂದಾಯ ಇಲಾಖೆಯಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ
ರಾಜ್ಯ ಸರ್ಕಾರಿ ಉದ್ಯೋಗವನ್ನು ಪಡೆಯಬೇಕು ಹಾಗೂ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂಬ ಕನಸು ಹೊತ್ತಿರುವ ನಾಡಿನ ಅಸಂಖ್ಯಾತ ಉದ್ಯೋಗಾಕಾಂಕ್ಷಿಗಳಿಗೆ ಹಾಗೂ ಅನುಭವಿ ವೃತ್ತಿಪರರಿಗೆ ಕರ್ನಾಟಕ ರಾಜ್ಯ ಕಂದಾಯ...








