ಪ್ರಖ್ಯಾತ ಪ್ರವಾಸಿ ತಾಣ ಫರ್ನಾಸ್ ಸರೋವರದಲ್ಲಿ ಭಾರಿ ದುರಂತ

1 min read
Cliff collapses on Boaters In Brazil Lake 7 tourists killed saakshatv

ಪ್ರಖ್ಯಾತ ಪ್ರವಾಸಿ ತಾಣ ಫರ್ನಾಸ್ ಸರೋವರದಲ್ಲಿ ಭಾರಿ ದುರಂತ Cliff collapses on Boaters In Brazil Lake 7 tourists killed 

ಬ್ರೆಜಿಲ್ : ಸರೋವರದಲ್ಲಿ ಮೂರು ಬೋಟ್ ಗಳ ಮೇಲೆ ಗುಡ್ಡ ಕುಸಿದು ಸುಮಾರು ಏಳು ಮಂದಿ ಮೃತಪಟ್ಟಿರುವ ಘಟನೆ ಬ್ರೆಜಿಲ್ ನಲ್ಲಿ ನಡೆದಿದೆ.

ಬ್ರೆಜಿಲ್​ನ ಪ್ರಖ್ಯಾತ ಪ್ರವಾಸಿ ತಾಣ ಫರ್ನಾಸ್ ಸರೋವರದಲ್ಲಿ ಈ ದುರಂತ ನಡೆದಿದ್ದು, ಘಟನೆಯಲ್ಲಿ  7 ಮಂದಿ ಸಾವನ್ನಪ್ಪಿದ್ದಾರೆ. 20ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದು, 32 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಅಪಾಯದಲ್ಲಿ ಸಿಲುಕಿರುವವರನ್ನು ರಕ್ಷಿಸಲು ಬ್ರೆಜಿಲ್​ ನೇವಿ ಮತ್ತು ಸ್ಥಳೀಯ ಅಗ್ನಿಶಾಮಕದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. 

ಶನಿವಾರ ಮಧ್ಯಾಹ್ನ 12.30ರ ಹೊತ್ತಿಗೆ ಘಟನೆ ನಡೆದಿದ್ದು, ದೊಡ್ಡ ಕಲ್ಲುಗುಡ್ಡದ ಒಂದು ಭಾಗ ಒಡೆದು ಮೂರು ಬೋಟ್​ಗಳ ಮೇಲೆ ಬಿದ್ದಿದೆ. ಇದರಿಂದ ಏಳು ಮಂದಿ ಸಾವನ್ನಪ್ಪಿದ್ದಾರೆ.  ಘಟನೆಯಿಂದಾಗಿ ಸ್ಥಳದಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ. ನಿನ್ನೆಯಿಂದಲೂ ಅಗ್ನಿಶಾಮಕದಳ, ನೌಕಾಪಡೆ ಸಿಬ್ಬಂದಿ ಅಲ್ಲಿಯೇ ಬೀಡುಬಿಟ್ಟಿದ್ದಾರೆ.

ಇನ್ನು ಈ ದುರಂತದ ವಿಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್​ ಆಗಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd