ಯೆಸ್ ಬ್ಯಾಂಕ್ ನ ಕುಸಿತ ಅನಿರೀಕ್ಷಿತವಲ್ಲ. 2017ರಿಂದಲೇ ನಾವು ಬ್ಯಾಂಕ್ ವಹಿವಾಟು ಮೇಲೆ ನಿಗಾ ವಹಿಸಿದ್ದೆವು ಮತ್ತು ಪುನಶ್ಚೇತನಕ್ಕಾಗಿ ಪ್ರಯತ್ನಿಸುತ್ತಿರುವುದಾಗಿ ಬ್ಯಾಂಕ್ ವ್ಯವಸ್ಥಾಪಕರು ಹೇಳಿದ್ದರು. ಆದರೆ ಯಾವುದು ಫಲಪ್ರದವಾಗಿಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಆರ್.ಬಿ.ಐ 2018ರಲ್ಲಿ ಪರಿಶೀಲನೆ ನಡೆಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒರನ್ನು ಬದಲಾಯಿಸಲು ಶಿಫಾರಸ್ಸು ಮಾಡಿತ್ತು. 2018 ಸೆಪ್ಟೆಂಬರ್ ನಲ್ಲಿ ಹೊಸ ಸಿಇಒ ನೇಮಕ ಮಾಡಿ ಬ್ಯಾಂಕ್ ನ ಹಣಕಾಸು ಪರಿಸ್ಥಿತಿ ಸುಧಾರಿಸಲು ಪ್ರಯತ್ನ ಮಾಡಲಾಯಿತು. ಅಲ್ಲದೆ ಬ್ಯಾಂಕ್ ಗೆ 1ಕೋಟಿ ರೂ ದಂಡವನ್ನು ವಿಧಿಸಲಾಗಿತ್ತು. 2019 ಸೆಪ್ಟೆಂಬರ್ ನಲ್ಲಿ ಅಂತರಿಕ ವಹಿವಾಟಿನ ತನಿಖೆಯನ್ನು ‘ಸೆಬಿ’ ಆರಂಭಿಸಿತ್ತು. ಆದರೆ ಯಾವುದೂ ಫಲಪ್ರದವಾಗಿಲ್ಲ ಎಂದರು.
ಠೇವಣಿದಾರರಿಗೆ ಮತ್ತು ಹೂಡಿಕೆದಾರರಿಗೆ ನಾನು ಭರವಸೆ ಕೊಡುತ್ತಿದ್ದೇನೆ. ಆರ್.ಬಿ.ಐ ಹೊಸ ಕ್ರಮಗಳನ್ನು ಕೈಗೊಂಡು ಆದಷ್ಟು ಬೇಗ ಸಮಸ್ಯೆಗಳನ್ನು ಬಗೆಹರಿಸಲಿದೆ. ಆತಂಕದ ಅಗತ್ಯವಿಲ್ಲ. ನಿಮ್ಮ ಹಣ ಸುರಕ್ಷಿತವಾಗಿದೆ ಎಂದು ಸಚಿವೆ ವಿಶ್ವಾಸದ ಮಾತುಗಳನ್ನು ಹೇಳಿದರು.
ಪರಪ್ಪನ ಅಗ್ರಹಾರದಲ್ಲಿ ಪ್ರಜ್ವಲ್ ರೇವಣ್ಣ ನೈಟ್ ಶೋ: ಸರ್ಕಾರ ನಿಮ್ಮದೇ ಇದೆ, ಇಷ್ಟಬಂದಂತೆ ತನಿಖೆ ಮಾಡಿಸಿ- ಪ್ರಜ್ವಲ್ ಜೈಲು ರಂಪಾಟಕ್ಕೆ ಎಚ್‌ಡಿ ರೇವಣ್ಣ ತಿರುಗೇಟು
ಬೆಂಗಳೂರು: ಲೈಂಗಿಕ ದೌರ್ಜನ್ಯ ಮತ್ತು ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ, ಜೈಲಿನ ಸೆಲ್‌ನಲ್ಲಿ ಆರಾಮವಾಗಿ ಕುಳಿತು ಮೊಬೈಲ್...








