clove tea – ಕಫದ ನಿವಾರಣೆಗೆ ಕುಡಿಯಿರಿ ಲವಂಗ ಟೀ
ಬಿಡದೆ ಸುರಿಯುತ್ತಿರುವ ಮಳೆ ತಣ್ಣಗಾಗುತ್ತಿರುವ ವಾತವರಣದ ಉಷ್ಣತೆ. ಇದರೊಟ್ಟಿಗೆ ಶುರುವಾಗುತ್ತೆ. ಶೀತ ಕೆಮ್ಮು ಉಸಿರಾಟದ ತೊಂದರೆ. ಆದರೆ ಇದನ್ನೆಲ್ಲ ತಡೆಯೋದಿಕ್ಕೆ ಮನೆಯಲಲ್ಲೇ ತಯಾರಿಸಿ ಕುಡಿಯಬಹುದು ಲವಂಗ ಟೀ. ಲವಂಗ ಟೀ ಕಫ ಸೇರಿದಂತೆ ಉಸಿರಾಟದ ತೊಂದರೆಯನ್ನ ನಿವಾರಿಸುತ್ತದೆ.
ಲವಂಗ ಬಾಯಿಯಲ್ಲಿರುವ ಬ್ಯಾಕ್ಟೀರಿಯಾವನ್ನ ಕೊಲ್ಲುವುದಲ್ಲದೆ, ಶ್ವಾಸಕೋಶದಲ್ಲಿರುವ ಕಫವನ್ನ ಕರಗಿಸಿ ಅದನ್ನು ಹೊರಹಾಕುವ ಗುಣವನ್ನು ಹೊಂದಿದೆ. ಲವಂಗ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ! ಕೆಮ್ಮು, ಶೀತ ಮತ್ತು ಎದೆಯ ಅಸ್ವಸ್ಥತೆಯಂತಹ ಉಸಿರಾಟದ ಸಮಸ್ಯೆಗಳಿಗೆ ಲವಂಗ ಚಹಾವನ್ನ ಮನೆಮದ್ದುಯಾಗಿ ತೆಗೆದುಕೊಳ್ಳಬಹುದು.
ಲವಂಗ ಚಹಾ ತಯಾರಿಸುವ ವಿಧಾನ..
ಒಂದು ತುಂಡು ಹಸಿ ಶುಂಠಿ, ಒಂದು ಸಣ್ಣ ದಾಲ್ಚಿನ್ನಿ ತುಂಡು, ಕಾಲು ಚಮಚ ಲವಂಗವನ್ನು ಮೂರು ಕಪ್ ನೀರು ಜೊತೆಗೆ ಕುದಿಸಿ. ನಂತರ ನೀರನ್ನು ಸೋಸಿ ತಣ್ಣಗಾಗಲು ಬಿಡಿ. ಅದರ ನಂತರ, ಅರ್ಧ ಕಪ್ ಲವಂಗ ಚಹಾವನ್ನು ಅರ್ಧ ಚಮಚ ಜೇನುತುಪ್ಪದೊಂದಿಗೆ ಬೆರೆಸಿ ಪ್ರತಿ ಎರಡು ಗಂಟೆಗಳಿಗೊಮ್ಮೆ ಕುಡಿಯಿರಿ. ಇದು ಕಫದ ನಿವಾರಣೆ ಮಾಡುತ್ತದೆ.