ಸಿಎಂ ಸಿದ್ದರಾಮಯ್ಯ ಹಾಗೂ ಪತ್ನಿ ವಿರುದ್ಧ ED ಅವ್ಯವಹಾರಗಳನ್ನು ಪತ್ತೆಹಚ್ಚಿದೆ. ಮುಡಾ ಜಮೀನು ಖರೀದಿಸಿದ ದಶಕದ ನಂತರ, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅವರ ಪತ್ನಿ ಪಾರ್ವತಿ ಅರ್ಜಿ ಸಲ್ಲಿಸಿದ್ದರು.
ಅವರು ಭೂಸ್ವಾಧೀನ ಮಾಡಿಕೊಳ್ಳದೇ ತಮ್ಮ ಜಮೀನು ಮುಡಾ ಬಳಸಿದ್ದರು, ಆದರೆ ಆ ಸಮಯದಲ್ಲಿ ಜಮೀನು ಮುಡಾ ಸ್ವಾಧೀನದಲ್ಲೇ ಇತ್ತು ಎಂದು ED ಹೇಳಿದೆ. ಬಿಎಂ ಮಲ್ಲಿಕಾರ್ಜುನಸ್ವಾಮಿ ಕೃಷಿ ಜಮೀನು ಎಂದು ಖರೀದಿ ಮಾಡುವ ಮೊದಲೇ ಮುಡಾ ಇಲ್ಲಿ ಬಡಾವಣೆಗಳನ್ನು ಅಭಿವೃದ್ಧಿಪಡಿಸಿತ್ತು. ನಿವೇಶನ ಹಂಚಿಕೆ ಮಾಡಿತ್ತು.ಸಹಿ ನಕಲು ಮಾಡಿ ಸೈಟ್ ಹಂಚಿಕೆ ಆಗುವಂತೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಆದರೆ, ಸಿದ್ದು ಸಿಎಂ ಆಗಿದ್ದಾಗ 2013ರಲ್ಲಿ ಪತ್ನಿ ಸಲ್ಲಿಸಿದ ಅರ್ಜಿಯಲ್ಲಿನ 2014ರ ಪತ್ರದ ಒಂದು ಸಾಲು ಅಳಿಸಲಾಗಿದೆ. ಇದನ್ನು ದಾಖಲೆ ತಿರುಚಿದ ಸಾಕ್ಷಿಯಾಗಿ ED ಹೊರಹಾಕಿದ್ದು, ಈಗ ಇವುಗಳ ಮೇಲೆ ತನಿಖೆ ನಡೆಸಲಾಗುತ್ತಿದೆ.
EDಯು ಅಕ್ರಮ ಹಣ ವರ್ಗಾವಣೆ ಯತ್ನದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ ಆಗಿರುವ ಬಗ್ಗೆ ದಾಖಲೆಗಳಲ್ಲಿ ಉಲ್ಲೇಖಿಸಿದ್ದು ಅಕ್ರಮ ಹಣ ವರ್ಗಾವಣೆ ಯತ್ನದಲ್ಲಿ ಸಿಎಂ ಅವರು ಭಾಗಿಯಾಗಿದ್ದಾರೆ ಎಂದು 102 ಪುಟಗಳ ಇಡಿಯ ತಾತ್ಕಾಲಿಕ ಜಪ್ತಿ ಆದೇಶದಲ್ಲಿ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.