ADVERTISEMENT
Friday, October 9, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

ಮಲೆನಾಡಿನ ದೈವಿಕ ಪರಿಸರ ಹಾಳು ಮಾಡಿ ನೀವೇನು ಚಂದ್ರಲೋಕದಲ್ಲಿ ಮನೆ ಕಟ್ಟಿಕೊಳ್ತೀರಾ? ಜೋಗ ಅಭಿವೃದ್ಧಿ ಯೋಜನೆ ಎನ್ನುವ ಮಾಯಾಜಿಂಕೆಯ ಸುತ್ತಾ: 

admin by admin
September 3, 2020
in Marjala Manthana, Newsbeat, ಮಾರ್ಜಲ ಮಂಥನ
Share on FacebookShare on TwitterShare on WhatsappShare on Telegram

ಮಲೆನಾಡಿನ ದೈವಿಕ ಪರಿಸರ ಹಾಳು ಮಾಡಿ ನೀವೇನು ಚಂದ್ರಲೋಕದಲ್ಲಿ ಮನೆ ಕಟ್ಟಿಕೊಳ್ತೀರಾ? ಜೋಗ ಅಭಿವೃದ್ಧಿ ಯೋಜನೆ ಎನ್ನುವ ಮಾಯಾಜಿಂಕೆಯ ಸುತ್ತಾ: 

ಒಮ್ಮೆ ಮಲೆನಾಡಿನ ನಾಡಿಮಿಡಿತ, ನಮ್ಮ ಹೆಮ್ಮೆಯ ಸಾಹಿತಿಗಳು, ಗುರುವರ್ಯರೂ ಆದ ಡಾ. ನಾ. ಡಿಸೋಜಾ ಹೇಳುತ್ತಿದ್ದರು. ಜೋಗದ ಬೆಟ್ಟದಲ್ಲಿ ಮತ್ತು ಸುತ್ತಮುತ್ತ ಸುಮಾರು 1 ಸಾವಿರ ವೈವಿಧ್ಯಮಯ ಚಿಟ್ಟೆಗಳಿವೆ. ಜಗತ್ತಿನಲ್ಲಿ ಎಲ್ಲೂ ಇಲ್ಲದ ಅತ್ಯಂತ ಅಪರೂಪದ ಗಿಡಮೂಲಿಕೆಗಳ ಭಂಡಾರವೇ ಇದೆ. ಅನೇಕ ಜಾತಿಯ, ಇನ್ನೂ ಕಂಡುಹಿಡಿಯಲಾಗದ ಜಾತಿಯ ಕಪ್ಪೆಗಳಿವೆ. ವಿಭಿನ್ನ ಜಾತಿಯ ಹಾವುಗಳಿವೆ. ಇವೆಲ್ಲವನ್ನು ಪೊರೆಯುತ್ತಿರುವುದು ಮಲೆನಾಡಿನ ಜೀವನದಿ ಶರಾವತಿ ಮತ್ತು ಜೋಗದ ದೃಢವಾದ ಬಂಡೆಗಾಳಾವೃತ ದಿವಿನಾದ ಬೆಟ್ಟ ಮತ್ತು ಕಣಿವೆ. ಇಲ್ಲಿ ಮನುಷ್ಯ ಎಷ್ಟು ಕಡಿಮೆ ಹೋಗುತ್ತಾನೋ, ಅಷ್ಟೇ ವಿಫುಲವಾಗಿ ಪರಿಸರ ರಕ್ಷಣೆಯಾಗುತ್ತದೆ. ಆದರೆ ಯಾವಾಗ ಜೋಗ ಅಭಿವೃದ್ಧಿ ಯೋಜನೆ ಅನ್ನುವ ಯೋಜನೆ ಶುರುವಾಯ್ತೋ, ಆವತ್ತಿಂದನೇ ಪರಿಸರದ ವ್ಯಾಪ್ತಿ ವಿಸ್ತಾರದ ಹರಡುವಿಕೆ ಕುಂಠಿತಗೊಂಡಿತು.

Related posts

ಕುಮಾರಸ್ವಾಮಿ ಮೊದಲು ತಮ್ಮ ರಾಜೀನಾಮೆಯ ಅಸಲಿ ಕಥೆ ಬಿಚ್ಚಿಡಲಿ: ನಿಮ್ಮ ಕುಟುಂಬ ನೈಸ್ ನಲ್ಲಿ ಎಷ್ಟು ಭೂಮಿ ಕಬಳಿಸಿದೆ? ಸೋಮಶೇಖರ್ ವಾಗ್ದಾಳಿ

ಕುಮಾರಸ್ವಾಮಿ ಮೊದಲು ತಮ್ಮ ರಾಜೀನಾಮೆಯ ಅಸಲಿ ಕಥೆ ಬಿಚ್ಚಿಡಲಿ: ನಿಮ್ಮ ಕುಟುಂಬ ನೈಸ್ ನಲ್ಲಿ ಎಷ್ಟು ಭೂಮಿ ಕಬಳಿಸಿದೆ? ಸೋಮಶೇಖರ್ ವಾಗ್ದಾಳಿ

October 9, 2026
ಮೇವು, ನೀರಿಲ್ಲದೆ ಜಾನುವಾರುಗಳ ಮಾರಾಟಕ್ಕೆ ರೈತರ ಅನಿವಾರ್ಯತೆ: ಬರದ ಕರಾಳ ಚಿತ್ರಣ

ಮೇವು, ನೀರಿಲ್ಲದೆ ಜಾನುವಾರುಗಳ ಮಾರಾಟಕ್ಕೆ ರೈತರ ಅನಿವಾರ್ಯತೆ: ಬರದ ಕರಾಳ ಚಿತ್ರಣ

October 9, 2026

ಡಾ. ನಾ. ಡಿಸೋಜಾರನ್ನು ನಾವು ಶರಾವತಿ ಸಂತ ಎಂದೇ ಕರೆಯುತ್ತೇವೆ. ಮಲೆನಾಡು ಮತ್ತು ಶರಾವತಿ ಪರಿಸರ ಹಾಗೂ ಸಂಸ್ಕೃತಿಯನ್ನು ಅವರಷ್ಟು ಆಳವಾಗಿ ಅರ್ಥ ಮಾಡಿಕೊಂಡವರು ಮತ್ತೊಬ್ಬರಿಲ್ಲ. ನಾವು ಹೆಸರೇ ಕೇಳದ ಶರಾವತಿ ಕೊಳ್ಳದ ಸಣ್ಣ ಸಣ್ಣ ಅರಣ್ಯ ಪ್ರದೇಶ, ಅದರೊಳಗೆ ಹುದುಗಿರುವ ಅಪರಿಚಿತ ಕಾಡಿನ ಮಕ್ಕಳ ಜನವಸತಿಯನ್ನು ನಡೆದಾಡಿ ಬಂದವರು ನಾಡಿ. ಶರಾವತಿ ಮುಳುಗಡೆ ಸಂತ್ರಸ್ತರ ಗೋಳನ್ನು ಜಗತ್ತಿಗೆ ಮೊದಲು ಹೇಳಿದವರೂ ನಾಡಿಯೇ. ಶರಾವತಿ ಮತ್ತು ಶರಾವತಿ ಕಣಿವೆ ಅಭಯಾರಣ್ಯದ ಕುರಿತಾಗಿ ಇವತ್ತಿಗೂ ಅಷ್ಟೇ ಅಥಾರಟೇಟಿವ್ ಆಗಿ ನಾಡಿ ಮಾತಾಡುತ್ತಾರೆ. ಪ್ರಾಯಶಃ ಮಲೆನಾಡಿಗೆ ಬರುವ ಯಾವುದೇ ಅರಣ್ಯಾಧಿಕಾರಿ, ಸಸ್ಯ ಸಂಶೋಧಕ ಅಥವಾ ವನ್ಯಜೀವಿ ಅಧ್ಯಯನಕಾರ ಮೊದಲು ನಾ ಡಿಸೋಜಾರನ್ನು ಭೇಟಿಯಾಗಿಯೇ ಮುಂದುವರೆದರೆ ಅವರ ಕೆಲಸ ಅರ್ಧ ಸಲೀಸು.

ಇಷ್ಟನ್ನು ಏಕೆ ಹೇಳಿದೆ ಎಂದರೆ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಮೂಲದವರೇ ಈಗ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿದ್ದಾರೆ. ಅವರ ಸುಪುತ್ರ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ. ಇವರಿಬ್ಬರು ಅಪ್ಪ-ಮಗ ಸೇರಿ ಮಾಡಿದ ಮಹತ್ಸಾಧನೆ ಎಂದರೆ ಶರಾವತಿ ಭೂಗರ್ಭ ಯೋಜನೆ ಮತ್ತು ಜೋಗದ ಅಭಿವೃದ್ದಿ ಎನ್ನುವ ಮತ್ತೊಂದು ಪರಮ ಮೂರ್ಖ ಯೋಜನೆ. ಈಗಾಗಲೇ ಅಭಿವೃದ್ಧಿಯಾಗಿರುವ ಜೋಗ ಟೂರಿಸಂ ಅನ್ನು ಮತ್ತೆ ಅಭಿವೃದ್ದಿ ಮಾಡುವ ಅಗತ್ಯವೇನು ಅನ್ನುವುದೇ ಗೊತ್ತಾಗುತ್ತಿಲ್ಲ. ಇನ್ನು ಶರಾವತಿ ಭೂಗರ್ಭ ಯೋಜನೆ ಏನಾದರೂ ಕಾರ್ಯಗತಗೊಂಡರೇ ಅದಕ್ಕಿಂತ ದೊಡ್ಡ ಸರ್ವನಾಶ ಶರಾವತಿಗೆ ಮತ್ತು ಮಲೆನಾಡಿಗೆ ಇನ್ನೊಂದಿಲ್ಲ.

ಆಯ್ತು! ಈಗ ಜೋಗ ಅಭಿವೃದ್ಧಿ ಯೋಜನೆ ಎಂಬ ಹೊಸ ಪ್ರಸ್ತಾವನೆ ವಿಚಾರಕ್ಕೆ ಬರೋಣ. ಇದು ಸುಮಾರು 120 ಕೋಟಿ ರೂಪಾಯಿ ಯೋಜನೆಯಂತೆ. ಪ್ರವಾಸಿಗರು ವರ್ಷ ಪೂರ್ತಿ ಜಲಪಾತ ವೀಕ್ಷಣೆ ಮಾಡಬಹುದಂತೆ. ನಂಗೆ ಈ ಮೊದಲ ಅಂಶವೇ ಅರ್ಥವಾಗುತ್ತಿಲ್ಲ. ನಾವೆಲ್ಲಾ ಬೆಳೆದಿದ್ದೇ ಜೋಗದ ಮೈದಡವಿನಲ್ಲಿ. ನಾವು ಕಂಡ ಹಾಗೇ ಜೋಗ ಜಲಪಾತದಲ್ಲಿ ನೀರು ಭೋರ್ಗರೆದೋ ಅಥವಾ ಕ್ಷೀಣವಾಗಿಯೋ ಸುರಿಯುವುದೇ ವರ್ಷದ ಮೊದಲ ಐದಾರು ತಿಂಗಳು ಮಾತ್ರ. ನಾವು ಕಾಲೇಜು ಕಲಿಯುತ್ತಿದ್ದಾಗ ವಾರ ವಾರ ಜೋಗಕ್ಕೆ ಹೋಗುತ್ತಿದ್ದೆವು. ಈಗಿನಂತೆ ಮೆಟ್ಟಿಲುಗಳಿರಲಿಲ್ಲವಾದರೂ ಕಡಿದಾದ ಬೆಟ್ಟವನ್ನು ಕೊರೆದ ಪಾಚಿಗಟ್ಟಿದ ಬಂಡೆ ಕೊರೆತವನ್ನು ದಾಟಿ ಇಳಿಯುತ್ತಿದ್ದೆವು. ಆಗ ಶರಾವತಿ ಒಡಲಲ್ಲಿ ಭರ್ತಿ ನೀರು ಹರಿಯುತ್ತಿತ್ತು. ಈಗ 15 ವರ್ಷಗಳ ನಂತರ ಶರಾವತಿ ಕೊಳ್ಳದ ಮಳೆಕಾಡನ್ನು ಸತತವಾಗಿ ನಾಶ ಮಾಡಿದ ಪರಿಣಾಮ ಅದರ ಪ್ರಮಾಣ ಸರಾಸರಿ ಅರ್ಧಕ್ಕಿಳಿದಿದೆ. ಆದರೂ ನಿಮಗೆ ಅಕ್ಟೋಬರ್ ಅಂತ್ಯದ ತನಕ ಜೋಗದ ಪರ್ವತದಿಂದ ಧುಮ್ಮಿಕ್ಕುವ ಶರಾವತಿ ದರ್ಶನ ಕೊಡುತ್ತಾಳೆ. ಆನಂತರ ನವೆಂಬರ್ ನಿಂದ ಮುಂದಿನ ಜೂನ್ ವರೆಗೆ ಜೋಗದ ಬೆಟ್ಟ ನಿರ್ವಾಣನಾಗಿ ನಿಂತ ಗೊಮ್ಮಟೇಶ್ವರನಂತೆ ಕಾಣುತ್ತದೆ. ಕೊನೆಯ ಆರು ತಿಂಗಳು ಜೋಗಕ್ಕೆ ಯಾವ ಪ್ರವಾಸಿಗರೂ ಬರವುದಿಲ್ಲ.

ಇಷ್ಟಾಯಿತಲ್ಲ, ಈಗ ವರ್ಷ ಪೂರ್ತಿ ಪ್ರವಾಸಿಗರು ಬರಬೇಕೆಂದರೆ ನಲ್ಲಿಯಲ್ಲಿ ಬಿಟ್ಟ ನೀರಿನಷ್ಟಾದರೂ ಜೋಗದಲ್ಲಿ ನೀರು ಸುರಿಯಬೇಕಲ್ಲ. ಅದಕ್ಕೇನು ಮಾಡುತ್ತಾರೆ? ದುಬೈನ ಶೆಟ್ಟರು ಹಿಂದೆ ಸೀತಾಕಟ್ಟೆಯಲ್ಲಿ ಆಣೆಕಟ್ಟೊಂದು ಕಟ್ಟಿ, ನೀರನ್ನು ಸಂಗ್ರಹಿಸಿ, ವರ್ಷ ಪೂರ್ತಿ ಜೋಗದ ಬೆಟ್ಟದ ಮೇಲೆ ಕೊಳವೆಯಲ್ಲಿ ಹರಿಸಿ ಸರ್ವ ಋತು ಜೋಗ ಮಾಡುತ್ತೇನೆ ಅಂತ ಹಿಂದೆ ಹೇಳುತ್ತಿದ್ದರು. ಅದೆಂತಹ ಮೂರ್ಖ ಯೋಜನೆಯಾಗಿತ್ತೆಂದರೆ ನೋಡ ನೋಡುತ್ತಿದ್ದಂತೆ ಜೋಗದ ಪರಿಸರ ಪ್ರಕೃತಿ ಸೌಂದರ್ಯ ನಾಶವೆದ್ದು ಹೋಗುತ್ತಿತ್ತು. ಆ ದರಿದ್ರ ಯೋಜನೆಗೆ ಬಿ.ಆರ್ ಶೆಟ್ಟರು 200 ಕೋಟಿ ಮೀಸಲಿಟ್ಟಿದ್ದರಂತೆ. ಪುಣ್ಯವಶಾತ್ ಶರಾವತಿಯ ಶಾಪವೋ ಏನೋ ದುಬೈ ಶೆಟ್ಟರು ದೀವಾಳಿ ಎದ್ದು ಹೋದರು. ಈಗ ಸರ್ಕಾರ ಮತ್ತದೇ ಸರ್ವ ಋತು ಯೋಜನೆಗೆ ಜೀವ ಕೊಡಲಿದೆಯೇ? ಗೊತ್ತಿಲ್ಲ.

ಇನ್ನು ದೀಪಾಲಂಕಾರವಂತೆ, ಕಾರಂಜಿಯಂತೆ, ವಾಚ್ ಟವರ್ ಗಳಂತೆ. ಪಾರ್ಕಿಂಗ್, ವಸತಿಗೃಹ, ಪಾರ್ಕ್, ಮಕ್ಕಳ ಉದ್ಯಾನವನ, ದೋಣಿ ವಿಹಾರ, ಸಾಹಸ ಕ್ರೀಡೆ ಇತ್ಯಾದಿ ಬ್ಲಾ ಬ್ಲಾ ಬ್ಲಾ. ಮಾಡಿಕೊಂಡು ಹೋಗಲಿ. ಇದರಲ್ಲಿ ಅರ್ಧದಷ್ಟು ಈಗಾಗಲೇ ಇವೆ. ಅವನ್ನೇ ಅಭಿವೃದ್ಧಿ ಮಾಡಿದರೂ ಸಾಕು. ಇವಕ್ಕೆಲ್ಲಾ ಅಷ್ಟೇನೂ ಖರ್ಚೂ ಸಹ ಆಗುವುದಿಲ್ಲ. ಒಂದಷ್ಟು ಕಮಿಷನ್ ಹೊಡೆಯುವ ಸ್ಕೀಂ ಮತ್ತೊಂದಷ್ಟು ಕಾಡು ಕಡಿದು ಮುಂಡಾ ಮೋಚ್ತಾರೆ. ಅದಲ್ಲ ಅಪಾಯ! ಜೋಗದ ಗುಂಡಿಗೆ ಜಿಪ್ ಲೈನ್ ಮಾಡ್ತಾರಂತೆ ಜೊತೆಗೆ ಕೇಬಲ್ ಕಾರ್ ಸಹ ಉಂಟಂತೆ. ಈ ನೆಪದಲ್ಲಿ ಅದಿನ್ನೆಷ್ಟು ಉಪದ್ವ್ಯಾಪಗಳನ್ನು ಸೃಷ್ಟಿಮಾಡ್ತಾರೋ ಜಗನ್ಮಾತೆಯೇ ಬಲ್ಲಳು.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಿಗೆ ಮತ್ತು ಸಂಸದ ಬಿ.ವೈ.ರಾಘವೇಂದ್ರರಿಗೆ ಮಲೆನಾಡಿನ ಕುರಿತಾದ ಒಂದಷ್ಟಾದರೂ ಕಾಳಜಿ ಇದ್ದರೇ, ನಾಶವಾಗುತ್ತಿರುವ ಶರಾವತಿ ಕೊಳ್ಳದ ಮಳೆಕಾಡುಗಳನ್ನು ಉಳಿಸಿಕೊಳ್ಳಲಿ. ಶರಾವತಿ ಭೂಗರ್ಭ ಯೋಜನೆಯನ್ನು ನಿಲ್ಲಿಸಲಿ. ಮಲೆನಾಡಿನಲ್ಲಿ ರಾಕ್ಷಸ ದಾಳಿ ನಡೆಸುತ್ತಿರುವ ಮಂಗನ ಕಾಯಿಲೆ ಅಥವಾ ಕ್ಯಾಸನೂರು ಫಾರೆಸ್ಟ್ ಡಿಸೀಸ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಿ. ಮಳೆಗಾಲದಲ್ಲಿ ಒಂದೇ ಒಂದು ಕಾಲು ಸಂಕವೂ ಗತಿಯಿಲ್ಲದೇ ಪರದಾಡುವ ಕಾಡಿನ ನಡುವಿನ ಹಳ್ಳಿಗಳಿಗೆ ಕಿರು ಸೇತುವೆ ಮಾಡಿಕೊಡಲಿ. ಮಲೆನಾಡಿಗೆ ಅಭಿವೃದ್ಧಿ ಅನ್ನುವ ಮಾಯಾಜಿಂಕೆ ಖಂಡಿತಾ ಅಗತ್ಯವಿಲ್ಲ. ಮಲೆನಾಡಿನ ನೆಮ್ಮದಿ ಹಾಳು ಮಾಡುವ ಯಾವುದೇ ಪ್ರವಾಸೋದ್ಯಮ ಯೋಜನೆಗಳೂ ಬೇಡ. ಅಲ್ಲಿ ಬರುವ ಯಾವುದೇ ಪ್ರವಾಸಿಗರು ಈಗಾಗಲೇ ಮಾಲಿನ್ಯಗೊಳ್ಳುತ್ತಿರುವ ಪರಿಸರವನ್ನು ಮತ್ತಷ್ಟು ಮಲಿನ ಮಾಡುತ್ತಾರಷ್ಟೆ. ಇದೊಂದು ಕೇವಲ ದುಡ್ಡು ದೋಚಿಕೊಳ್ಳುವ ಯೋಜನೆ ಮಾತ್ರವೇ ಆಗಿದ್ದರೇ, ಅದೇನು 120 ಕೋಟಿ ಯೋಜನಾ ಮೊತ್ತವಿದೆಯೋ ಅದನ್ನು ನೀವು ನೀವೇ ಹಂಚಿಕೊಂಡು ಬಿಡಿ. ಮಲೆನಾಡಿನ ದೈವಿಕ ಪರಿಸರವನ್ನು ಮಾತ್ರ ದಯವಿಟ್ಟು ನಾಶ ಮಾಡದಿರಿ.

–ವಿಭಾ (ವಿಶ್ವಾಸ್ ಭಾರದ್ವಾಜ್) 

Tags: ##b.s.y. raghavendra#sharavathi riverBSYjog fallsshivamogga
ShareTweetSendShare
Join us on:

Related Posts

ಕುಮಾರಸ್ವಾಮಿ ಮೊದಲು ತಮ್ಮ ರಾಜೀನಾಮೆಯ ಅಸಲಿ ಕಥೆ ಬಿಚ್ಚಿಡಲಿ: ನಿಮ್ಮ ಕುಟುಂಬ ನೈಸ್ ನಲ್ಲಿ ಎಷ್ಟು ಭೂಮಿ ಕಬಳಿಸಿದೆ? ಸೋಮಶೇಖರ್ ವಾಗ್ದಾಳಿ

ಕುಮಾರಸ್ವಾಮಿ ಮೊದಲು ತಮ್ಮ ರಾಜೀನಾಮೆಯ ಅಸಲಿ ಕಥೆ ಬಿಚ್ಚಿಡಲಿ: ನಿಮ್ಮ ಕುಟುಂಬ ನೈಸ್ ನಲ್ಲಿ ಎಷ್ಟು ಭೂಮಿ ಕಬಳಿಸಿದೆ? ಸೋಮಶೇಖರ್ ವಾಗ್ದಾಳಿ

by Shwetha
October 9, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಈಗ ರಾಜೀನಾಮೆ ಮತ್ತು ಸ್ಟಿಂಗ್ ಆಪರೇಷನ್ ಗಳ ಮಹಾ ಸಮರ ಶುರುವಾಗಿದೆ. ಸಿದ್ದರಾಮಯ್ಯ ಅವರನ್ನು ಸ್ಟಿಂಗ್ ಆಪರೇಷನ್ ಮೂಲಕ ಸಿಎಂ ಸ್ಥಾನದಿಂದ ಕೆಳಗಿಳಿಸಲಾಗಿದೆ...

ಮೇವು, ನೀರಿಲ್ಲದೆ ಜಾನುವಾರುಗಳ ಮಾರಾಟಕ್ಕೆ ರೈತರ ಅನಿವಾರ್ಯತೆ: ಬರದ ಕರಾಳ ಚಿತ್ರಣ

ಮೇವು, ನೀರಿಲ್ಲದೆ ಜಾನುವಾರುಗಳ ಮಾರಾಟಕ್ಕೆ ರೈತರ ಅನಿವಾರ್ಯತೆ: ಬರದ ಕರಾಳ ಚಿತ್ರಣ

by Shwetha
October 9, 2026
0

ಮುಂಗಾರು ಮಳೆ ಕೈಕೊಟ್ಟ ಪರಿಣಾಮ ರಾಜ್ಯದ ಹಲವು ಭಾಗಗಳಲ್ಲಿ ಬರ ಪರಿಸ್ಥಿತಿ ಎದುರಾಗಿದ್ದು, ರೈತರ ಸಂಕಷ್ಟ ಮತ್ತಷ್ಟು ತೀವ್ರಗೊಂಡಿದೆ. ಬೆಳೆಗಳಿಗೆ ನೀರಿನ ಕೊರತೆ ಎದುರಾಗಿರುವ ಬೆನ್ನಲ್ಲೇ, ಜಾನುವಾರುಗಳ...

ಸುರೇಶ್ ಕುಮಾರ್ ಮೈಗೆ ಮೆತ್ತಿರುವ ಹೊಲಸು ತೊಳೆಯಲು ಈಜಿಪ್ಟ್ ಯಂತ್ರವೂ ಸಾಲದು:ಸಜ್ಜನ ಮುಖವಾಡದ ದುರ್ಜನ ಶಾಸಕ ಹರಿಪ್ರಸಾದ್ ಆಕ್ರೋಶ

ಮತ ಉಳಿಸಿ ದೇಶ ಉಳಿಸಿ: ಅಕ್ಟೋಬರ್ 10 ರಿಂದ ಬಿಜೆಪಿಯ ಮತಗಳ್ಳತನದ ವಿರುದ್ಧ ಕಾಂಗ್ರೆಸ್ ಮಹಾಯಾತ್ರೆ- ಮತ ರಕ್ಷಕರ ಮೂಲಕ ಪ್ರತಿ ಹಳ್ಳಿಗೂ ಕಾಂಗ್ರೆಸ್ ಲಗ್ಗೆ

by Shwetha
October 9, 2026
0

ಬೆಂಗಳೂರು: ಭಾರತೀಯ ಪ್ರಜಾಪ್ರಭುತ್ವದ ಅಡಿಪಾಯವಾಗಿರುವ ಮತದಾನದ ಹಕ್ಕನ್ನು ಉಳಿಸಲು ಕಾಂಗ್ರೆಸ್ ಈಗ ಬೃಹತ್ ಹೋರಾಟಕ್ಕೆ ಸಜ್ಜಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ಅಥವಾ ಎಸ್‌ಐಆರ್ ಪ್ರಕ್ರಿಯೆಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು...

ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ CJP ಪ್ರತಿಭಟನೆ: SIR ರದ್ದುಪಡಿಸುವಂತೆ ಒತ್ತಾಯ

ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ CJP ಪ್ರತಿಭಟನೆ: SIR ರದ್ದುಪಡಿಸುವಂತೆ ಒತ್ತಾಯ

by Shwetha
October 9, 2026
0

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್...

ಬೊಗಳುವ ಯತ್ನಾಳ್ ಗೆ ಕಚ್ಚುವ ತಾಕತ್ತಿಲ್ಲ: ನಿಮ್ಮ ಡಿಎನ್‌ಎ ಬಗ್ಗೆ ನಮಗೆ ಸಂಶಯವಿದೆ- ಕಾಂಗ್ರೆಸ್ ನಾಯಕರನ್ನ ಟೀಕಿಸುವ ಮುನ್ನ ನಿಮ್ಮ ಮೂಲ ನೋಡಿ ಎಂದ ಪ್ರದೀಪ್ ಈಶ್ವರ್

ಬೊಗಳುವ ಯತ್ನಾಳ್ ಗೆ ಕಚ್ಚುವ ತಾಕತ್ತಿಲ್ಲ: ನಿಮ್ಮ ಡಿಎನ್‌ಎ ಬಗ್ಗೆ ನಮಗೆ ಸಂಶಯವಿದೆ- ಕಾಂಗ್ರೆಸ್ ನಾಯಕರನ್ನ ಟೀಕಿಸುವ ಮುನ್ನ ನಿಮ್ಮ ಮೂಲ ನೋಡಿ ಎಂದ ಪ್ರದೀಪ್ ಈಶ್ವರ್

by Shwetha
October 9, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಹರಿತವಾದ ಮಾತುಗಳಿಗೆ ಹೆಸರಾದ ಇಬ್ಬರು ನಾಯಕರ ನಡುವೆ ಈಗ ಡಿಎನ್‌ಎ ಸಮರ ಶುರುವಾಗಿದೆ. ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರನ್ನು ಸದಾ ಟೀಕಿಸುವ ಹಿರಿಯ ಶಾಸಕ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram