ಮಂಡ್ಯ ದಂಗಲ್ | ಪರಸ್ಪರ ಕಚ್ಚಾಟ, ಬಡಿದಾಟ ಅವಶ್ಯಕತೆ ಇಲ್ಲ : ಸಿಎಂ CM B S Yediyurappa
ಕಲಬುರಗಿ : ಅಂಬರೀಶ್ ಸ್ಮಾರಕ ವಿಚಾರವಾಗಿ ಅವರು ಪರಸ್ಪರ ಕಚ್ಚಾಟ, ಬಡಿದಾಟ ಮಾಡುವ ಅವಶ್ಯಕತೆ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಅಂಬರೀಶ್ ಸ್ಮಾರಕ ವಿಚಾರವಾಗಿ ನಡೆಯುತ್ತಿರುವ ಕೆಸರೆರಚಾಟದ ಬಗ್ಗೆ ಕಲಬುರಗಿಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ನಾನು ಆಗ ನನ್ನ ಕರ್ತವ್ಯ ಮಾಡಿದ್ದೇನೆ ನನಗೆ ಸಮಾಧಾನ, ತೃಪ್ತಿ ಇದೆ.
ಈಗ ಅವರು ಪರಸ್ಪರ ಕಚ್ಚಾಟ, ಬಡಿದಾಟ ಮಾಡುವ ಅವಶ್ಯಕತೆ ಇಲ್ಲ. ಎಲ್ಲರೂ ಅಣ್ಣ ತಮ್ಮರಂತೆ ಬದುಕೊದನ್ನ ಕಲಿಯಬೇಕಿದೆ.
ಈ ವಿವಾದ ನಿಲ್ಲಿಸಬೇಕು, ನಾವೆಲ್ಲ ಒಟ್ಟಾಗಿ ರಾಜ್ಯದ ಅಭಿವೃದ್ಧಿ ಕೆಲಸ ಮಾಡಬೇಕು. ಮಂಡ್ಯ ಕೂಡ ರಾಜ್ಯದ ಒಂದು ಭಾಗ ಅಲ್ಲಿಯ ಅಭಿವೃದ್ಧಿ ಬಗ್ಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು
ಎಂದು ಮನವಿ ಮಾಡಿಕೊಂಡರು.
ಇದೇ ವೇಳೆ ರಾಜ್ಯದಲ್ಲೂ ಸಚಿವ ಸಂಪುಟ ವಿಸ್ತರಣೆ ನಡೆಯುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿ, ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಚಿಂತನೆ ಆಗಿಲ್ಲ ಎಂದರು.










