CM Basavaraja bommai | ನೆರೆ ಹಾವಳಿ ಬಗ್ಗೆ ಸಿಎಂ ಹೇಳಿದ್ದೇನು..?
ಮೈಸೂರು : ರಾಜ್ಯದಲ್ಲಿ ಮಳೆ ಹೆಚ್ಚಾಗಿದ್ದು, ನೆರೆ ಹಾವಳಿ ವಿಚಾರವಾಗಿ ಮೈಸೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ಇಂದು ಸಂಜೆಯೊಳಗೆ ಮೊದಲ ಹಂತದ ನಷ್ಟದ ಅಧಿಕೃತ ಅಂಕಿ ಅಂಶ ಬಿಡುಗಡೆ. ನಷ್ಟದ ವರದಿ ಬಂದ ಮೇಲೆ ಕೇಂದ್ರಕ್ಕೆ ಪರಿಹಾರ ಕೇಳುವ ವಿಚಾರದಲ್ಲಿ ತೀರ್ಮಾನ ಮಾಡುತ್ತೇವೆ.
ಸದ್ಯಕ್ಕೆ 750 ಕೋಟಿ ರೂಪಾಯಿ ಎನ್ ಡಿ ಆರ್ ಎಫ್ ಹಣ ನಮ್ಮಲ್ಲಿ ಇದೆ. ಅನೇಕ ಕಡೆಗಳಲ್ಲಿ ಭೂ ಕುಸಿತವಾಗಿದೆ.
ರಸ್ತೆಗಳು ಹಾಳಾಗಿದೆ, ಮನೆ ಹಾನಿ ಪ್ರಾಣ ಹಾನಿಯೂ ಉಂಟಾಗಿದೆ. ಎಲ್ಲದರ ಬಗ್ಗೆ ವರದಿ ಸಿದ್ಧವಾಗುತ್ತಿದೆ.

ಸಂಜೆಯೊಳಗಡೆ ಅಧಿಕೃತ ಮಾಹಿತಿ ಪ್ರಕಟವಾಗುತ್ತದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆ ಸುಳಿವು ನೀಡಿದ ಸಿಎಂ, ಆರು ತಿಂಗಳ ಹಿಂದೆಯೇ ಪಕ್ಷದ ಕೋರ್‌ಕಮಿಟಿ ಸಭೆಯಲ್ಲಿ ತೀರ್ಮಾನ ಆಗಿದೆ.
ಯಾರ್ಯಾರು ಒಂದು, ಒಂದೂವರೆ ವರ್ಷ ಪೂರೈಸಿದ್ದಾರೆ. ಅವರ ಬದಲಿಗೆ ಹೊಸಬರಿಗೂ ಅವಕಾಶ ಕೊಡಬೇಕು ಅಂತ ನಿರ್ಧಾರ ಮಾಡಲಾಗಿದೆ.
ಮುಂದಿನ ದಿನಗಳಲ್ಲಿ ಹೊಸಬರಿಗೆ ಆದ್ಯತೆ ನೀಡ್ತೇವೆ. ಒಂದೂವರೆ ವರ್ಷ ಪೂರ್ಣಗೊಂಡಿರುವವರ ಪಟ್ಟಿ ಸಿದ್ಧ ಮಾಡುತ್ತಿದ್ದೇವೆ, ಪಟ್ಟಿ ಮಾಡಿದ ಬಳಿಕ ರಾಜೀನಾಮೆಗೆ ಸೂಚನೆ ಕೊಡುತ್ತೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.