ಕಾಂಗ್ರೆಸ್ ಗೆ ತಿರುಗೇಟು ನೀಡಿದ ಬೊಮ್ಮಾಯಿ

1 min read
CM Basavaraj Bommai Saaksha tv

ಕಾಂಗ್ರೇಸ್ ಗೆ ತಿರುಗೇಟು ನೀಡಿದ ಬೊಮ್ಮಾಯಿ

ಮಂಡ್ಯ: ಕಾಂಗ್ರೆಸ್ ನಾಯಕರು ಮೇಕೆದಾಟು ಯೋಜನೆ ಅನುಷ್ಠನಕ್ಕಾಗಿ ಮಾಡುತ್ತಿರುವ ಪಾದಯಾತ್ರೆಯ ಬಗ್ಗೆ  ಸಿಎಂ ಬಸವರಾಜ ಬೊಮ್ಮಯಿ ಕಿಡಿಕಾರಿದ್ದಾರೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬಿಜಿ ನಗರದಲ್ಲಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿರುವ ಬೊಮ್ಮಾಯಿ ಅವರು ಕರೊನಾ ಹೆಚ್ಚಾಗುತ್ತಿದೆ, ಅದೇನು ಪಕ್ಷ ಆಧಾರಿತವಾಗಿ ಬರುತ್ತಾ ಎಂದು ಪ್ರಶ್ನಿಸಿದ್ದಾರೆ.

Congress Symbol Saaksha Tv

ಮುಂದುವರೆದು ಮಾತನಾಡಿದ ಅವರು, ದಿನೇ ದಿನೇ ಪ್ರಕರಣಗಳು ದ್ವಿಗುಣವಾಗುತ್ತಿರುವ ಹಿನ್ನಲೆ, ಇದನ್ನು ನಿಯಂತ್ರಿಸುವುದು ಸರಕಾರದ ಕರ್ತವ್ಯವಾಗಿದೆ. ಹಿಂದಿನ ಎರಡು ಅಲೆಯ ಅನುಭವದಿಂದ ಕೆಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದು ಅವಶ್ಯಕವಾಗಿದೆ. ಆದ್ದರಿಂದ ಈಗ ನಾವು ಕೆಲವು ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಹೇಳಿದರು

ಇದೇ ವೇಳೆ ಕೊರೊನಾಗಾಗಿಯೇ ಒಂದು ಕಾನೂನು ಇರುವುದರಿಂದ ಇದನ್ನು ಎಲ್ಲರು ಅನುಸರಿಸಬೇಕು. ಒಂದು ಜವಾಬ್ಧಾರಿಯುತ ವಿರೋಧ ಪಕ್ಷಕ್ಕೂ ತನದೇ ಆದ ಕರ್ತವ್ಯ ಇದೆ, ಅದನ್ನು ಸಮರ್ಥವಾಗಿ ಕಾಂಗ್ರೆಸ್ ನಿರ್ವಹಿಸಬೇಕು ಎಂದು ಕಿಡಿಕಾರಿದ್ದಾರೆ.

ಅಲ್ಲದೇ ಎಲ್ಲ ರಾಜಕೀಯ ಪಕ್ಷಗಳಿಗೂ ತಮ್ಮದೇ ಆದ ಜವಾಬ್ದಾರಿ ಇದೆ, ಅದನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು. ನಾವು ಸರಕಾರವನ್ನು ಹೇಗೆ ನಡೆಸುತ್ತಿದ್ದೇವೆ ಎಂದು ಜನರು ಗಮನಿಸುತ್ತಿದ್ದಾರೆ. ಮೊದಲು ಕೊರೊನಾ ನಿಯಂತ್ರಣ ಆಗಲಿ ಆಮೇಲೆ ಕೂತು ಮಾತಾಡೋಣ ಎಂದಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd