ಮಣ್ಣು ಉಳಿಸಿ ಅಭಿಯಾನಕ್ಕೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ
ಉಡುಪಿ: ಸದ್ಗುರು ಜಗ್ಗಿ ವಾಸುದೇವ್ ಅವರು ಪ್ರಾರಂಭಿಸಿದ ಮಣ್ಣು ಉಳಿಸಿ ಅಭಿಯಾನಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಚಾಲನೆ ನೀಡಿದ್ದಾರೆ.
ಸದ್ಗುರು ಜಗ್ಗಿ ವಾಸುದೇವ್ ಅವರು ಈಗಾಗಲೇ ಕಾವೇರಿ ಉಳಿಸಿ ಅಭಿಯಾನವನ್ನು ಪ್ರಾರಂಭಿಸಿದ್ದು, ಇದೀಗ ಮಣ್ಣು ಉಳಿಸಿ ಎಂಬ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಕರಾವಳಿ ಜಿಲ್ಲೆಗಳ ಪ್ರವಸಾದಲ್ಲಿ ಬ್ಯೂಸಿಯಾಗಿದ್ದ ಸಿಎಂ ಬೊಮ್ಮಾಯಿ, ಉಡುಪಿ ಜಿಲ್ಲೆಯ ಮಣಿಪಾಲದ ಕಾಯಿನ್ ಸರ್ಕಲ್ನಲ್ಲಿ ಮಣ್ಣು ಉಳಿಸಿ ಅಭಿಯಾನಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಅಭಿಯಾನಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದ್ಗುರು ನಿಸರ್ಗದ ರಕ್ಷಣೆಗೆ ದೊಡ್ಡ ಅಭಿಯಾನ ಮಾಡುತ್ತಿದ್ದಾರೆ. ಸೇವ್ ಕಾವೇರಿ, ಮಣ್ಣು ಉಳಿಸಿ ಅಭಿಯಾನವನ್ನು ಸದ್ಗುರು ಶುರು ಮಾಡಿದ್ದಾರೆ. ಮಣ್ಣಿಗೂ ಮನುಷ್ಯರಿಗೂ ನೇರವಾದ ಸಂಬಂಧವಿದೆ. ನಮ್ಮ ಬದುಕು ಮತ್ತು ಆಹಾರ ಮಣ್ಣಿಗೆ ಆಧಾರಿತವಾಗಿದೆ. ತಾಯಿ ಗರ್ಭ ಮತ್ತು ಭೂಗರ್ಭ ಬಹಳ ಮಹತ್ವದ್ದಾಗಿದೆ. ಭೂಗರ್ಭವನ್ನು ಚೆನ್ನಾಗಿ ಕಾಪಾಡಲು ಮಣ್ಣಿನ ಅವಶ್ಯಕತೆ ಇದೆ. ಭೂಮಿ ಮತ್ತು ಮಣ್ಣನ್ನು ಕಾಪಾಡುವುದು ಮನುಷ್ಯನ ಆದ್ಯ ಕರ್ತವ್ಯ ಎಂದು ಹೇಳಿದ್ದಾರೆ..
ಮಣ್ಣು ಉಳಿಸಿ ಅಭಿಯಾನದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ರಸ್ತೆ, ಕಾಯಿನ್ ಸರ್ಕಲ್, ಮಣಿಪಾಲ ನಗರ, ಉಡುಪಿಯ ಪ್ರಮುಖ ರಸ್ತೆಗಳಲ್ಲಿ ಅಭಿಯಾನದ ಬೋರ್ಡ್ಗಳನ್ನು, ಪೋಸ್ಟರ್ಗಳನ್ನು ಹಿಡಿದು ಜನಜಾಗೃತಿ ಮೂಡಿಸಿದರು.