ಆಪರೇಷನ್ ಕಮಲ : ಬಿಎಸ್‍ವೈ ಆಡಿಯೋ ಪ್ರಕರಣಕ್ಕೆ ಮರುಜೀವ bs-yeddyurappa
ರಾಯಚೂರು : ಆಪರೇಷನ್ ಕಮಲ ಚರ್ಚೆಯ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಆಡಿಯೋ ಪ್ರಕರಣಕ್ಕೆ ಮರುಜೀವ ಸಿಕ್ಕಿದೆ.
ರಾಯಚೂರಿನ ಡಿವೈಎಸ್‍ಪಿ ಕಚೇರಿಯಲ್ಲಿ ಇಂದು ದೂರುದಾರ ಶರಣೇಗೌಡ ಕಂದಕೂರ ವಿಚಾರಣೆ ನಡೆಯಲಿದೆ.
ಸಿಎಂ ಬಿ.ಎಸ್.ಯಡಿಯೂರಪ್ಪ ಈ ಪ್ರಕರಣದ ತನಿಖೆ ವಿಚಾರಣೆಗೆ ಸ್ಟೇ ಹೋಗಿದ್ದರು.
ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ತಡೆಗೆ ಸಲ್ಲಿಸಿದ್ದ ಅರ್ಜಿ ವಜಾ ಹಿನ್ನೆಲೆ ಇದೀಗ ತನಿಖೆ ಆರಂಭವಾಗಿದೆ.
ಸದ್ಯ ರಾಯಚೂರು ಡಿವೈಎಸ್ ಪಿ ಶಿವನಗೌಡ ಪಾಟೀಲ್ ತನಿಖೆ ಆರಂಭಿಸಿದ್ದು ದೂರುದಾರರ ವಿಚಾರಣೆಗೆ ಮುಂದಾಗಿದ್ದಾರೆ.
ಸಂಜೆ 4 ಕ್ಕೆ ಡಿವೈಎಸ್ ಪಿ ಕಚೇರಿಯಲ್ಲಿ ವಿಚಾರಣೆ ನಡೆಯಲಿದೆ.
ಮೂರು ನೋಟಿಸ್ ಬಳಿಕ ದೂರುದಾರ ಶರಣೇಗೌಡ ಇಂದು ವಿಚಾರಣೆಗೆ ಹಾಜರಾಗುತ್ತಿದ್ದಾರೆ.










