ಎರಡು ವರ್ಷದಲ್ಲಿ ನಿವೇಶನ ರಹಿತ ಎಲ್ಲರಿಗೂ ನಿವೇಶನ : ಬಿಎಸ್ ವೈ
ಶಿವಮೊಗ್ಗ : ಪ್ರಧಾನಿ ನರೇಂದ್ರ ಮೋದಿ ಅವರ ಅಪೇಕ್ಷೆಯಂತೆ ಇನ್ನು ಎರಡು ವರ್ಷಗಳಲ್ಲಿ ನಿವೇಶನ ರಹಿತ ಎಲ್ಲರಿಗೂ ನಿವೇಶನ ನೀಡುವ ಕೆಲಸ ಮಾಡುತ್ತೇವೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಶಿಕಾರಿಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ ಯಾವುದೇ ಒಬ್ಬ ವ್ಯಕ್ತಿ ನಿವೇಶನ ಇಲ್ಲದೇ ಇರಬಾರದು ಎನ್ನುವ ಪ್ರಧಾನಿ ನರೇಂದ್ರ ಮೋದಿಯವರ ಅಪೇಕ್ಷೆ.
ಅದರಂತೆ ಇನ್ನು ಎರಡು ವರ್ಷದಲ್ಲಿ ನಿವೇಶನ ರಹಿತ ಎಲ್ಲರಿಗೂ ನಿವೇಶನ ನೀಡುವ ಕೆಲಸ ಮಾಡುತ್ತೇನೆ.
ಯಾರಿಗೆ ನಿವೇಶನ ಇಲ್ಲವೋ ಅಂತವರು ಹೌಸಿಂಗ್ ಬೋರ್ಡ್ ಅಧಿಕಾರಿಗಳಿಗೆ ಭೇಟಿಯಾಗಿ ನಿವೇಶನ ಪಡೆಯಬೇಕು ಎಂದರು.
ಇದೇ ವೇಳೆ ಮಳೆ ವಿಚಾರವಾಗಿ ಮಾತನಾಡಿ, ದೇವರ ದಯೆಯಿಂದ ಮಹಾರಾಷ್ಟ್ರದಲ್ಲಿ ಮಳೆ ಬರುತ್ತಿದೆ. ಮಳೆ ನಿನ್ನೆಯಿಂದ ಪ್ರಾರಂಭವಾಗಿದೆ.
ಬಿತ್ತನೆ ಕಾರ್ಯ ಪ್ರಾರಂಭವಾಗಿದೆ. ಕಳೆದ ವರ್ಷದಂತೆ ಉತ್ತಮ ಬೆಳೆ ಸಿಗುತ್ತೆ. ಸಕಾಲಕ್ಕೆ ಮಳೆಯಾಗುತ್ತೆ.
ಈ ವರ್ಷವೂ ಉತ್ತಮ ಬೆಳೆಯನ್ನು ರೈತರು ಬೆಳೆದು ನೆಮ್ಮದಿಯಿಂದ ಬದುಕುವ ಒಳ್ಳೆಯ ಕಾಲ ಬರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ ಎಂದರು.