ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಲಾಕ್‍ಡೌನ್ ಮಾಡಲು ಒತ್ತಡ ಹೆಚ್ಚಾಗುತ್ತಿದೆ. ಆದರೆ, ಲಾಕ್‍ಡೌನ್ ಮಾಡಲು ಆತುರ ಬೇಡ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಯೂರಪ್ಪ ಇಂಗಿತ ವ್ಯಕ್ತಪಡಿಸಿದ್ದಾರೆ.
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಅಭಿಪ್ರಾಯ ತಿಳಿಸಿದ ಬಿಎಸ್‍ವೈ, ಕೊರೊನಾ ಸೋಂಕು ತಡೆಗೆ ಲಾಕ್‍ಡೌನ ಪರಿಹಾರ ಅಲ್ಲ. ಲಾಕ್‍ಡೌನ್ ಬಗ್ಗೆ ಆತುರದ ನಿರ್ಧಾರ ಬೇಡ. ವೀಕೆಂಡ್ ಲಾಕ್‍ಡೌನ್ ಬಗ್ಗೆ ಚರ್ಚಿಸೋಣ. ನಾಳೆಯ ಸಭೆಯಲ್ಲಿ ಎಲ್ಲರ ಅಭಿಪಾಯ ಪಡೆಯೋಣ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಈ ವೇಳೆ ಮಾತನಾಡಿದ ಸಚಿವ ಆರ್.ಅಶೋಕ್, ಲಾಕ್‍ಡೌನ್ ಬದಲು ಪರ್ಯಾಯ ಮಾರ್ಗಗಳತ್ತ ಗಮನ ಹರಿಸಬೇಕಿದೆ. ವೀಕೆಂಡ್ ಲಾಕ್‍ಡೌನ್‍ಗೆ ಬಿಬಿಎಂಪಿ ಕಾರ್ಪೋರೇಟರ್ ಗಳಿಂದ ಸಲಹೆ ಬಂದಿದೆ ಎಂದರು.
ನಾಳೆ ಬೆಂಗಳೂರಿನ ಎಲ್ಲಾ ಜನಪ್ರತಿನಿಧಿಗಳ ಜತೆ ಸಿಎಂ ಯಡಿಯೂರಪ್ಪ ಸಭೆ ನಡೆಸಲಿದ್ದಾರೆ. ಅರಮನೆ ಮೈದಾನದಲ್ಲಿ ನಡೆಯುವ ಸಭೆಯಲ್ಲಿ ಕೊರೊನಾ ತಡೆಯುವ ವಿಧಾನಗಳ ಶಾಸಕರು, ಸಂಸದರು, ಕಾರ್ಪೋರೇಟರ್‍ಗಳ ಅಭಿಪ್ರಾಯ ಪಡೆಯಲಿದ್ದಾರೆ.
ದೀಪಾರಾಧನೆಯ ರಹಸ್ಯ: ಯಾವ ಎಣ್ಣೆ, ಎಷ್ಟು ಬತ್ತಿ ಹಚ್ಚಿದರೆ ಏನು ಫಲ?
1"ಇಪ್ಪೆ ಎಣ್ಣೆ"ಯು ದೇವರಿಗೆ ತುಂಬಾ ತುಂಬಾ ಶ್ರೇಷ್ಠ.. ಇದರಿಂದ ಮನೆಯಲ್ಲಿ ದುಃಖ, ದಾರಿದ್ರ್ಯ, ಬಡತನ, ಧನದರಿದ್ರ , ಅನ್ನದರಿದ್ರ, ನಿತ್ಯದರಿದ್ರ, ಹಾಗೂ ಸಾಲದ ಭಾದೆ ನಿವಾರಣೆಯಾಗುತ್ತದೆ .....








