ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೊನಾ ಎಂಟ್ರಿಯಾದ ನಂತರ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಸಂಜೆ 5 ಗಂಟೆಗೆ ಫೇಸ್‍ಬುಕ್, ಯೂಟ್ಯೂಬ್ ಚಾನೆಲ್‍ಗಳ ಮೂಲಕ ನೇರ ಪ್ರಸಾರದಲ್ಲಿ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಕಳೆದ ಮಾರ್ಚ್‍ನಿಂದ ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳು, ಜನರು ಅನುಸರಿಸಬೇಕಾದ ಮಾರ್ಗದರ್ಶಿ ಸೂತ್ರಗಳ ಪಾಲನೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಯಡಿಯೂರಪ್ಪ ಮಾತನಾಡುತ್ತಿರುವ ಹಿನ್ನೆಲೆಯಲ್ಲಿ ಭಾರಿ ಮಹತ್ವ ಪಡೆದುಕೊಂಡಿದೆ.
ಮತ್ತೊಂದೆಡೆ ಸರ್ಕಾರದ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ಕೊರೊನಾ ಮೆಡಿಕಲ್ ಉಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರ ಆರೋಪ ಮಾಡಿದೆ. ಈ ಬಗ್ಗೆ ನಿನ್ನೆಯೇ ಡಿಸಿಎಂ ಅಶ್ವತ್ಥ ನಾರಾಯಣ, ಆರೋಗ್ಯ ಸಚಿವ ಶ್ರೀರಾಮುಲು ಅವ್ಯವಹಾರ ಆರೋಪ ತಳ್ಳಿಹಾಕಿ ದಾಖಲೆ ಬಿಡುಗಡೆ ಮಾಡಿದ್ದರು. ಹೀಗಾಗಿ ಪ್ರತಿಪಕ್ಷದ ಆರೋಪಗಳ ಬಗ್ಗೆ ಸಿಎಂ ಯಡಿಯೂರಪ್ಪ ಮತ್ತೊಮ್ಮೆ ಸ್ಪಷ್ಟನೆ ನೀಡುವ ಸಾಧ್ಯತೆ ಇದೆ.
ಜತೆಗೆ ಲಾಕ್‍ಡೌನ್ ಸಮಯದಲ್ಲಿ ತಾವು ಘೋಷಣೆ ಮಾಡಿದ ಪ್ಯಾಕೇಜ್‍ಗಳ ಮೂಲಕ ಆರ್ಥಿಕ ನೆರವು ನೀಡಿರುವುದು, ಕೊರೊನಾ ನಿಯಂತ್ರಣಕ್ಕೆ ಮುಂದಿನ ದಿನದಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳು, ಲಾಕ್‍ಡೌನ್ ವಿಸ್ತರಣೆ ಮಾಡದಿರುವುದು, ಜನರ ಸಹಕಾರ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಯಡಿಯೂರಪ್ಪ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಕೆಲ ಮಹತ್ವದ ವಿಚಾರಗಳ ಬಗ್ಗೆ ರಾಷ್ಟ್ರವನ್ನುದ್ದೇಶಿ ಮಾತನಾಡುವ ಮೂಲಕ ಘೋಷಣೆ ಮಾಡುತ್ತಿದ್ದಾರೆ. ಇದೇ ಮಾದರಿಯನ್ನು ಅನುಸರಿಸಲು ಯಡಿಯೂರಪ್ಪ ಮುಂದಾಗಿದ್ದಾರೆ. ಈ ಮೂಲಕ ಜನರಿಗೆ ತಮ್ಮ ಸರ್ಕಾರ ಏನು ಮಾಡುತ್ತಿದೆ ಎಂಬುದರ ಬಗ್ಗೆ ಮನವರಿಕೆ ಮಾಡಿಕೊಡುವ ಪ್ರಯತ್ನವೂ ಇದರ ಭಾಗವಾಗಿದೆ ಎನ್ನಲಾಗಿದೆ.
ಬೆಂಗಳೂರು ಬಸ್ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ ಬಿಎಂಟಿಸಿ ದರ ಏರಿಕೆ ಬಗ್ಗೆ ಸಚಿವ ಬೈರತಿ ಸುರೇಶ್ ನೀಡಿದ್ರು ಶಾಕಿಂಗ್ ಸುದ್ದಿ
ಬೆಂಗಳೂರು: ರಾಜಧಾನಿಯ ಜನಸಾಮಾನ್ಯರ ಸಾರಿಗೆಯಾದ ಬಿಎಂಟಿಸಿ ಬಸ್ ಪ್ರಯಾಣ ಇನ್ನು ಮುಂದೆ ದುಬಾರಿಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಕಳೆದ ಹಲವು ದಿನಗಳಿಂದ ಕೇಳಿಬರುತ್ತಿದ್ದ ಬಸ್ ಟಿಕೆಟ್ ದರ...








