CM Ibrahim | ಇಂದಿರಾ ಗಾಂಧಿ ಮಾಡಿದ ತಪ್ಪನ್ನೇ ಬಿಜೆಪಿ ಮಾಡುತ್ತಿದೆ
ರಾಯಚೂರು : ಆವತ್ತು ಇಂದಿರಾ ಗಾಂಧಿ ಎಮರ್ಜೆನ್ಸಿ ಘೋಷಣೆ ಮಾಡಿ ತಪ್ಪು ಮಾಡಿದರು. ಅದೇ ತಪ್ಪನ್ನು ಬಿಜೆಪಿ ಇವತ್ತು ಮಾಡುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.
ಪಿಎಫ್ ಐ ಬ್ಯಾನ್ ಕುರಿತು ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇಬ್ರಾಹಿಂ, ಆವತ್ತು ಇಂದಿರಾ ಗಾಂಧಿ ಎಮರ್ಜೆನ್ಸಿ ಘೋಷಣೆ ಮಾಡಿ ತಪ್ಪು ಮಾಡಿದರು.
ಅದೇ ತಪ್ಪನ್ನು ಬಿಜೆಪಿ ಇವತ್ತು ಮಾಡುತ್ತಿದೆ. ಮಂಗಳೂರಿನಲ್ಲಿ ಇಬ್ಬರು ಸಾಬರನ್ನು ಕೊಂದರು. ಪಿಎಫ್ ಐ ಅವರೇ ಹೋಗಿ ಕೊಂದ್ರಾ ?
ಅದಕ್ಕೆ ಯಾರನ್ನ ಬ್ಯಾನ್ ಮಾಡ್ತೀರಾ? ಬಿಜೆಪಿ ಕಾರ್ಯಕರ್ತ ಸತ್ತರೇ 25 ಲಕ್ಷ ರೂಪಾಯಿ ಕೊಡುತ್ತೀರಾ. ಸಾಬರು ಸತ್ತರೇ ಏನೂ ಕೊಡಲ್ಲ ಎಂದು ಕಿಡಿಕಾರಿದರು.

ಕಾಂಗ್ರೆಸ್ ಈಗ ಇಂಡಿಯನ್ ಹಸು ಸ್ಥಿತಿ ಆಗಿದೆ. ಕಾಂಗ್ರೆಸ್ ದು ಸಾಫ್ಟ್ ಹಿಂದುತ್ವ. ಬಿಜೆಪಿ ಹಾರ್ಡ್ ಹಿಂದುತ್ವ. ನಮ್ಮದು ಹಿಂದುತ್ವನೂ ಇಲ್ಲ, ಮುಸ್ಲಿಂಮತ್ವನೂ ಇಲ್ಲ ಎಂದು ಇಬ್ರಾಹಿಂ ಹೇಳಿದ್ದಾಎ.
ಇದೇ ವೇಳೆ ಐದು ವರ್ಷಕ್ಕೆ ಪಿಎಫ್ ಐಗೆ ಡಿವೋರ್ಸ್ ಕೊಟ್ರೆ ಬುದ್ಧಿ ಬರತ್ತಾ ಎಂದು ಪ್ರಶ್ನಿಸಿದ ಸಿಎಂ ಇಬ್ರಾಹಿಂ, ನಾನೂ ಕೇಂದ್ರ ಸಚಿವನಾಗಿದ್ದೆ.
ಏರ್ ಲೈನ್ಸ್, ದೂರದರ್ಶನ ಲಾಭ ತಂದುಕೊಟ್ಟಿದ್ದು ನಾನು. ನಿಮ್ಮಲ್ಲಿ ದಾಖಲೆ ಇದ್ರೆ ಗಲ್ಲಿಗೇರಿಸಿ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.








