ನನಗೆ ಆರ್ ಎಸ್ ಎಸ್ ಅಲರ್ಜಿ : ಸಿಎಂ ಇಬ್ರಾಹಿಂ
ಬೆಳಗಾವಿ : ಕಾಂಗ್ರೆಸ್ ನಾಯಕ ಸಿಎಂ ಇಬ್ರಾಹಿಂ ಅವರು ಸದ್ಯದಲ್ಲೇ ಕಾಂಗ್ರೆಸ್ ತೊರೆಯಲಿದ್ದಾರೆ ಅನ್ನೋ ಮಾತುಗಳು ರಾಜ್ಯ ರಾಜಕಾರಣದಲ್ಲಿ ಭಾರಿ ಸದ್ದು ಮಾಡುತ್ತಿವೆ. ಇದಕ್ಕೆ ಪುಷ್ಠಿ ನೀಡುವಂತೆ ಇಬ್ರಾಹಿಂ ಅವರು ಜೆಡಿಎಸ್ ನಾಯಕರಾದ ಹೆಚ್ ಡಿ ದೇವೇಗೌಡ, ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಈ ಮಧ್ಯೆ ಇಬ್ರಾಹಿಂ ಅವರು ಬಿಜೆಪಿ ಸೇರ್ತಾರಾ ಎಂಬ ಪ್ರಶ್ನೆ ಉದ್ಭವಿಸಿದ್ದು, ಈ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದ್ದು ಹೀಗೆ..
“ಎಲ್ಲಾದರೂ ಉಂಟೆ..? ಬಿಜೆಪಿಯವರು ಕೇಶವ ಕೃಪಾ, ನಾವು ಬಸವ ಕೃಪಾ. ಬಿಜೆಪಿ ಮುಖಂಡರಷ್ಟೇ ಅಲ್ಲ ಎಲ್ಲರನ್ನೂ ಭೇಟಿಯಾಗುತ್ತಿರುವೆ. ನನಗೆ ಆರ್ ಎಸ್ ಎಸ್ ಅಲರ್ಜಿ ಎಂದು ಹೇಳುವ ಮೂಲಕ ಯಾವುದೇ ಕಾರಣಕ್ಕೂ ಬಿಜೆಪಿ ಸೇರಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ..
ಇನ್ನು ಜೆಡಿಎಸ್ ಸೇರುವ ಬಗ್ಗೆ ಮಾತನಾಡಿ, ನನ್ನದೇ ಆದ ಪಕ್ಷ ಕಟ್ಟಲು ನನ್ನ ಹತ್ತಿರ ಶಕ್ತಿಯೂ ಇಲ್ಲ, ದುಡ್ಡೂ ಇಲ್ಲ. ಮಹಾತ್ಮ ಗಾಂಧಿಯನ್ನು ಚುನಾವಣೆಗೆ ನಿಲ್ಲಿಸಿದದೂ ಐದು ಕೋಟಿ ಬೇಕು.
‘ನಾವು ಸಾಬ್ರು ಹೊಸ ಕಾರು ತಗೊಳ್ಳೋಕೆ ಅಲ್ಲ’ ಎಂದಿದ್ದೇಕೆ ಸಿಎಂ ಇಬ್ರಾಹಿಂ
ಆ ರೀತಿ ವ್ಯವಸ್ಥೆವನ್ನು ಹಾಳು ಮಾಡಿ ಇಟ್ಟಿದ್ದಾರೆ. ಸರ್ವರಿಗೂ ಸಮಪಾಲು, ಸರ್ವರಿಗೆ ಸಮಬಾಳು ಬಸವತತ್ವ ಆಧಾರ ಮೇಲೆ ನಾವು ರಾಜಕಾರಣ ಶುರು ಮಾಡಿದವರು.
ಅಹಿಂದ ಮಾಡಿದಾಗಲೂ ಬಸವತತ್ವವೇ, ನಾವು ಸಾಬ್ರು ಹೊಸ ಕಾರು ತಗೊಳ್ಳೋಕೆ ಅಲ್ಲ. ಗುಜರಿಯಲ್ಲಿ ಸಾಮಾನು ತಂದು ಕಾರು ಮಾಡ್ತೀವಿ ಒಳ್ಳೆಯ ಗೇರ್ಬಾಕ್ಸ್, ಇಂಜಿನ್ ಬ್ರೇಕ್ ಸೇರಿಸಿ ಒಂದು ಗಾಡಿ ಮಾಡ್ತೀವಿ ಹೀಗಾಗಿ ಎಲ್ಲ ಪಕ್ಷದಲ್ಲಿ ಉತ್ತಮರಿದ್ದು, ಉತ್ತಮರ ಸಂಘಕ್ಕೆ ನಮ್ಮ ಪ್ರಯತ್ನ ಎಂದಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel