Dingaleshwar Swamiji: ಸಿಎಂ, ಭಾವೈಕ್ಯತಾ ದಿನವನ್ನು ಹಿಂಪಡೆಯಬೇಕು : ದಿಂಗಾಲೇಶ್ವರ ಸ್ವಾಮೀಜಿ
1 min read
ಸಿಎಂ, ಭಾವೈಕ್ಯತಾ ದಿನವನ್ನು ಹಿಂಪಡೆಯಬೇಕು : ದಿಂಗಾಲೇಶ್ವರ ಸ್ವಾಮೀಜಿ
ಗದಗ: ಸರಕಾರ ಮಠಗಳಿಂದಲೂ ಕಮಿಷನ್ ಪಡೆದುಕೊಳ್ಳುತ್ತಿದೆ ಎಂದು ಹೇಳಿಕೆ ನೀಡಿದ್ದ ದಿಂಗಾಲೇಶ್ವರ ಸ್ವಾಮೀಜಿ, ಈಗ ಮತ್ತೆ ಸಿಎಂ ಅವರು ಘೋಷಿಸಿದ್ದ ಭಾವೈಕ್ಯತಾ ದಿನ ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಲಿಂಗೈಕ್ಯ ತೋಂಟದಾರ್ಯ ಸಿದ್ಧಲಿಂಗ ಶ್ರೀಗಳ ಜನ್ಮ ದಿನವನ್ನು ಭಾವೈಕ್ಯತಾ ದಿನ ಎಂದು ಘೋಷಿಸಿದದ್ದರು. ಇದಕ್ಕೆ ವಿರೋಧಿಸಿದ ದಿಂಗಾಲೇಶ್ವರ ಸ್ವಾಮೀಜಿ, ಆರ್‍ಎಸ್‍ಎಸ್ ಬಗ್ಗೆ, ಬ್ರಾಹ್ಮಣರ ಬಗ್ಗೆ ಬಾಯಿಗೆ ಬಂದಂತೆ ತೋಂಟದಾರ್ಯ ಶ್ರೀಗಳು ಮಾತನಾಡುತ್ತಿದ್ದರು. ಜಾತಿ ಜಾತಿ ನಡ್ವೆ ತಂದಿಡುತ್ತಾ ಇದ್ದರು. ಅಂಥವರ ಹೆಸರಲ್ಲಿ ಭಾವೈಕ್ಯ ದಿನ ಎಂದು ಘೋಷಿಸಿದ್ದು ತಪ್ಪು. ಕೂಡಲೇ ಅದನ್ನು ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸಿಸಿ ಪಾಟೀಲ್ ಇಂತಹ ಆರೋಪ ಮಾಡೋದು ಸರಿಯಲ್ಲ. ದಿಂಗಾಲೇಶ್ವರರ ಮಠಕ್ಕೆ ಅನುದಾನ ಕೊಟ್ಟಿಲ್ಲ ಅಂತಾ ಹೀಗೆಲ್ಲಾ ಮಾತಾಡುತ್ತಾ ಇದ್ದಾರೆ. ನಿಮ್ಮ ಪೂರ್ವಾಶ್ರಮದ ಕತೆ ನಮಗೂ ಗೊತ್ತು. ಮೂರುಸಾವಿರ ಮಠದ ಗದ್ದುಗೆಯನ್ನು ತೋಳ್ಬಲದ ಮೂಲಕ ಏರಲು ಪ್ರಯತ್ನ ಪಟ್ಟರಿ. ನೀವು ಪೀಠದಲ್ಲಿದ್ದೀರಿ ಎಂಬ ಕಾರಣಕ್ಕೆ ಸ್ವಾಮೀಜಿ ಎಂದು ಒಪ್ಪಿದ್ದೀವಿ ಅಷ್ಟೇ ಎಂದು ಸಿಸಿ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.